Advertisement
ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬಂದ ಸಂದರ್ಭ ಬೆಂಬಲ ಬೆಲೆಗಿಂತ ಕನಿಷ್ಠ ದರ ಕುಸಿತವಾದರೆ ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. ಆದರೆ ಕಡಲೆಯಲ್ಲಿ ಇದಾಗುತ್ತಿಲ್ಲ ಎಂಬುದು ರೈತರ ಕೊರಗು. ಕಡಲೆ ಬೆಂಬಲ ಬೆಲೆ ಕ್ವಿಂಟಲ್‌ಗೆ 5230 ರೂ. ಇದೆ. ಆದರೆ ಮಾರು ಕಟ್ಟೆಯಲ್ಲಿ ಕ್ವಿಂಟಲ್‌ಗೆ 4400 ರೂ.ದಿಂದ 4500ರೂ.ಗೆ ಮಾರಾಟವಾಗುತ್ತಿದೆ.
ಹೆಕ್ಟೇರ್ ಪ್ರದೇ ಶ ದಲ್ಲಿ ಕಡಲೆ ಬಿತ್ತನೆಯಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ 19ರಿಂದ 20 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕಡಲೆ ಬಿತ್ತನೆಯಾಗಿದೆ. ಕಲಬುರಗಿ ಜಿಲ್ಲೆಯೊಂದರಲ್ಲೇ ಒಂದು ಲಕ್ಷ ಎಕರೆ ಭೂಮಿಯಲ್ಲಿ ಕಡಲೆ ಬೆಳೆಯಲಾಗಿದೆ.
Related Articles
ಆದರೆ ಮಾರುಕಟ್ಟೆಗೆ ಕಡಲೆ ಬರುತ್ತಿದ್ದಂತೆ ದಿನೇದಿನೆ ಬೆಲೆ ಕುಸಿತ ವಾಗುತ್ತಿದೆ. ಫೆ.4ರ ಶುಕ್ರವಾರ ಮಾರುಕಟ್ಟೆಯಲ್ಲಿ 4300 ರೂ.ದಿಂದ 4400 ರೂ. ಮಾತ್ರ ದರವಿತ್ತು. ಎರಡು ವಾರಗಳಲ್ಲೇ ಕ್ವಿಂಟಲ್‌ಗೆ ಒಂದು ಸಾವಿರ ರೂ. ಸಮೀಪ ಬೆಲೆ ಕುಸಿತವಾಗಿದೆ. ಕಡಲೆ ತೊಗರಿ ಹಾಗೆ ಬಹಳ ದಿನ ದಾಸ್ತಾನು ಇಡಲಿಕ್ಕಾಗಲ್ಲ. ಹೀಗಾಗಿ ರಾಶಿಯಾದ ನಂತರ ನೇರವಾಗಿ ಕಡಲೆ ಮಾರುಕಟ್ಟೆಗೆ ತರಲಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡು ಬೆಲೆ ಕುಸಿತದ ಬರೆ ಎಳೆಯಲಾಗುತ್ತಿದೆ. ತಕ್ಷಣವೇ ಖರೀದಿ ಕೇಂದ್ರ ಶುರು ಮಾಡಿದ್ದಲ್ಲಿ ರೈತರಿಗೆ ಅನುಕೂಲ ವಾಗಲು ಸಾಧ್ಯವಾಗುತ್ತದೆ. ತಡವಾಗಿ ಶುರು ಮಾಡಿದರೆ ವ್ಯಾಪಾರಿಗಳಿಗೆ ಲಾಭ ಮಾಡಿಕೊಟ್ಟಂತಾಗುತ್ತದೆ.
Advertisement
ತೊಗರಿ ಖರೀದಿಗೆ ಮತ್ತಷ್ಟು ಅವಧಿ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆಂದು ಕಲ್ಯಾಣ ಕರ್ನಾಟಕ-ಕಿತ್ತೂರು ಕರ್ನಾಟಕ ದಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಬೆಂಬಲ ಬೆಲೆ ಕ್ವಿಂಟಲ್‌ಗೆ 6300 ರೂ. ಇದೆ. ಆದರೆ ಮಾರುಕಟ್ಟೆಯಲ್ಲಿ 6,400 ರೂ.ದಿಂದ 6,500ರೂ.ಗೆ ತೊಗರಿ ಮಾರಾಟವಾಗುತ್ತಿದೆ. ಖರೀದಿ ಕೇಂದ್ರಗಳನ್ನು ಸ್ಥಾಪಿಸಿದ್ದರಿಂದ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿಲ್ಲ. ಇನ್ನು ಹಿಂದಿನ ಸರ್ಕಾರ ಕೇಂದ್ರದ ಬೆಂಬಲ ಬೆಲೆ ಜತೆಗೆ ರಾಜ್ಯ ಸರ್ಕಾರ ಕ್ವಿಂಟಲ್‌ಗೆ 300 ರೂ.ದಿಂದ 450 ರೂ. ಪ್ರೋತ್ಸಾಹಧನ ನೀಡುತ್ತ ಬಂದಿತ್ತು. ಆದರೆ ಕಳೆದೆರಡು ವರ್ಷದಿಂದ ರಾಜ್ಯ ಸರ್ಕಾರ ನಯಾಪೈಸೆ ಪ್ರೋತ್ಸಾಹಧನ ನೀಡುತ್ತಿಲ್ಲ. ಒಂದು ವೇಳೆ ಸರ್ಕಾರ ಪ್ರೋತ್ಸಾಹಧನ ನೀಡಿದ್ದೇಯಾದಲ್ಲಿ ಮಾರುಕಟ್ಟೆಯಲ್ಲೀಗ ತೊಗರಿ ದರ ಕ್ವಿಂಟಲ್ 7000 ರೂ. ಇರುತ್ತಿತ್ತು. ಬೆಂಬಲ ಬೆಲೆ ಯಷ್ಟೇ ಮಾರುಕಟ್ಟೆಯಲ್ಲಿ ದರ ಇರುವುದರಿಂದ ಹಾಗೂ ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡದೇ ಇರುವುದರಿಂದ ರೈತರು ತೊಗರಿ ಖರೀದಿ ಕೇಂದ್ರಗಳತ್ತ ಮುಖ ಮಾಡುತ್ತಿಲ್ಲ. ಹೀಗಾಗಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಪ್ರತಿ ರೈತನಿಂದ ಗರಿಷ್ಠ15 ಕ್ವಿಂಟಲ್ ಮಾತ್ರ ಖರೀದಿ ಎಂಬ ನಿಯಮ ತೆಗೆದು ಹಾಕಿ ಜತೆಗೆ ಖರೀದಿ ಹಾಗೂ ರೈತರ ನೋಂದಣಿ ದಿನಾಂಕವನ್ನು ಮಾಸಾಂತ್ಯದವರೆಗೂ ವಿಸ್ತರಿಸಿ ಆದೇಶ ಹೊರಡಿಸಿದೆ. ಸರ್ಕಾರ
ತಕ್ಷಣ ಎಚ್ಚೆತ್ತು ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂಬುದು ರೈತರ ಆಗ್ರಹವಾಗಿದೆ. ಮಾಹಿತಿ ಪಡೆದು ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಕೇಂದ್ರಗಳನ್ನು ತೆರೆಯುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಅನುಮತಿ ನೀಡಿದ ತಕ್ಷಣ ಖರೀದಿ ಕೇಂದ್ರ ಸ್ಥಾಪಿಸಲಾಗುವುದು.
– ಯಶವಂತ ವಿ. ಗುರುಕರ್, ಜಿಲ್ಲಾಧಿಕಾರಿ ಕಲಬುರಗಿ ಕಲಬುರಗಿ ಜಿಲ್ಲೆಯಲ್ಲಿ ಕಡಲೆ ಬಿತ್ತನೆ ಪ್ರದೇಶವೂ ಹೆಚ್ಚಾಗಿದೆ. ಬೆಳೆಯೂ ಸಮೃದ್ಧವಾಗಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಹೀಗಾಗಿ ಬೆಂಬಲ ಬೆಲೆಗೆ ಖರೀದಿ ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು.
– ಡಾ|ರತೇಂದ್ರನಾಥ ಸುಗೂರ, ಜಂಟಿ ಕೃಷಿ ನಿರ್ದೇಶಕ, ಕಲಬುರಗಿ – ಹಣಮಂತರಾವ ಭೈರಾಮಡಗಿ