ಭೋಪಾಲ್: ಮದುವೆಯಾಗಬೇಕಿದ್ದ ವರ ಧೋತಿ-ಕುರ್ತಾ ಬದಲು ಶೆರ್ವಾನಿ ಹಾಕಿಕೊಂಡಿದ್ದ ಎನ್ನುವ ಕಾರಣಕ್ಕೆ ವಧು-ವರರ ಕುಟುಂಬಗಳ ನಡುವೆ ಭಾರೀ ಜಗಳವಾಗಿ, ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಸುಂದರ್‌ಲಾಲ್ ಶನಿವಾರ ಮಂಗ್ಬೇದಾ ಗ್ರಾಮದ ಯುವತಿಯೊಂದಿಗೆ ಮದುವೆಯಾಗಲೆಂದು ಅವರೂರಿಗೆ ತೆರಳಿದ್ದರು. ಶೆರ್ವಾನಿ ಹಾಕಿದ್ದ ಸುಂದರ್‌ಲಾಲ್ ಸಂಪ್ರದಾಯದ ಪ್ರಕಾರ ಧೋತಿ-ಕುರ್ತಾ ಹಾಕಬೇಕೆಂದು ವಧುವಿನ ಕುಟುಂಬ ಕೇಳಿದೆ.
ಇದನ್ನೂ ಓದಿ:ಅಕ್ಕನ ಗಂಡ ತಂಗಿಗೆ, ತಂಗಿ ಗಂಡ ಅಕ್ಕನಿಗೆ! ಕತ್ತಲಲ್ಲಿ ನಡೆದ ಮದುವೆಯಲ್ಲಿ ಆಯಿತು ಅದಲು ಬದಲು
ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದಿದ್ದು, ಕುಟುಂಬಗಳು ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಎರಡೂ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲೂ ದೂರು ಕೊಟ್ಟಿದ್ದಾರೆ. ಎಲ್ಲ ಮುಗಿದ ಮೇಲೆ ಯುವತಿ ಕುಟುಂಬಸ್ಥರು ವರನ ಊರಿಗೇ ಬಂದು ಮದುವೆ ಸಂಪ್ರದಾಯ ಮುಗಿಸಿ ವಿವಾದಕ್ಕೆ ಅಂತ್ಯಹಾಡಿದ್ದಾರೆ.