ಮದುವೆಯ ದಿನದಂದು ವರನೊಬ್ಬ ತನ್ನ ವಧುವಿಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಚಿತ್ರವನ್ನು ಉಡುಗೊರೆಯಾಗಿ ನೀಡಿರುವ ವಿಚಿತ್ರ ಸನ್ನಿವೇಶದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದ್ದು ಹಲವಾರು ಮಂದಿ ಹಲವು ಬಗೆಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಇನ್ನೂ ಕೆಲವರು ಪಾಕಿಸ್ತಾನದಲ್ಲಿ ನಡೆಯುವ ಮದುವೆಗಳಲ್ಲಿ ಇದು ಸರ್ವೇ ಸಾಮಾನ್ಯವಾಗಿರುತ್ತೆ ಎಂದು ಹೇಳಿಕೊಂಡಿದ್ದಾರೆ.
ವೀಡಿಯೊದಲ್ಲಿ ಕಾಣುವಂತೆ, ವರನು ತನ್ನ ವಧುವಿಗೆ ನೀಲಿ ಬಣ್ಣದ ಕಾಗದದಲ್ಲಿ ಸುತ್ತಿದ ಉಡುಗೊರೆಯನ್ನು ವೇದಿಕೆಯ ವೇಳೆ ನೀಡುತ್ತಾನೆ ಅಷ್ಟು ಮಾತ್ರವಲ್ಲದೆ ವೇದಿಕೆ ಮೇಲೆಯೇ ಉಡುಗೊರೆಯನ್ನು ಬಿಚ್ಚಿ ಅದರೊಳಗಿದ್ದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಫೋಟೋ ವಧುವಿಗೆ ತೋರೋಸುವುದು ಕಾಣಬಹುದು.
ಕೆಲವರು ಈ ವಿಡಿಯೋ ನೋಡಿ ಇದೊಂದು ಹಾಸ್ಯಾಸ್ಪದ ರೀತಿಯಲ್ಲಿ ಇಬ್ಬರೂ ವರ್ತಿಸಿದ್ದಾರೆ ಎಂದು ಹೇಳಿದರೆ, ಇನ್ನೂ ಕೆಲವರು ಪಾಕಿಸ್ತಾನದಲ್ಲಿ ನಡೆಯುವ ಮದುವೆಯಲ್ಲಿ ಈ ರೀತಿಯ ಸನ್ನಿವೇಶಗಳು ಸಾಮಾನ್ಯವಾಗಿ ಇರುತ್ತದೆ ಎಂದು ಹೇಳಿಕೊಂಡಿದ್ದಾರೆ.
ಇದಕ್ಕೆ ಉದಾಹರಣೆ ಎಂಬಂತೆ X (ಹಿಂದೆ ಟ್ವಿಟರ್) ಬಳಕೆದಾರರಾದ ಶಾದಾಬ್, ಡಿಸೆಂಬರ್ 2023 ರಲ್ಲಿ ಇದೇ ರೀತಿಯ ವೀಡಿಯೊವನ್ನು ಪೋಸ್ಟ್ ಮಾಡಿದ್ದರು, ಇದರಲ್ಲಿ ಶಾದಾಬ್ ಅವರ ಸಹೋದರನ ಮದುವೆಯ ದಿನದಂದು ಇಮ್ರಾನ್ ಖಾನ್ ಅವರ ಚಿತ್ರವನ್ನು ಉಡುಗೊರೆಯಾಗಿ ನೀಡಲಾಗಿತ್ತು.