ಭುವನೇಶ್ವರ: ಮದುವೆ ಮಂಟಪದಲ್ಲಿ ಹಾಯಾಗಿರಬೇಕಿದ್ದ ವರನೊಬ್ಬ, ಚಾಲಕರ ಮುಷ್ಕರದಿಂದಾಗಿ ತನ್ನ ಕುಟುಂಬದೊಂದಿಗೆ ಇಡೀ ರಾತ್ರಿ 28 ಕಿ.ಮೀ. ದೂರ ನಡೆದು, ಮರುದಿನ ವಧುವಿಗೆ ತಾಳಿಕಟ್ಟಿರುವ ಘಟನೆ ಒಡಿಶಾದಲ್ಲಿ ವರದಿಯಾಗಿದೆ.
Advertisement
ರಾಯಗಡ ಜಿಲ್ಲೆಯ ಹಳ್ಳಿಯೊಂದರಲ್ಲಿ ವಧುವಿನ ನಿವಾಸವಿದ್ದು, ಅಲ್ಲಿಯೇ ಮದುವೆಯ ಏರ್ಪಾಡು ನಡೆದಿತ್ತು. ಆದರೆ, ಮದುವೆ ಮನೆ ತಲುಪುವ ಮುನ್ನವೇ, ಚಾಲಕರ ಮುಷ್ಕರ ಆರಂಭವಾಗಿತ್ತು.
ಹೀಗಾಗಿ ವರನ ಕುಟುಂಬ ಇಕ್ಕಟ್ಟಿಗೆ ಸಿಲುಕಿದೆ. ಯಾವುದೇ ವಾಹನ ಸಿಗದ ಕಾರಣ, 28 ಕಿ.ಮೀ. ನಡಿಗೆಯಲ್ಲೇ ಮದುವೆ ಮನೆ ತಲುಪಿದ್ದು, ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.