ರಾಮನಗರ: ಕಾರ್ಮಿಕ ಇಲಾಖೆಯಿಂದ ಕಟ್ಟಡಮತ್ತು ಇತರ ನಿರ್ಮಾಣದ ನೋಂದಾಯಿತಕಾರ್ಮಿಕರಿಗೆ ಕೊಟ್ಟಿದ್ದ ದಿನಸಿ ಕಿಟ್‌ಗಳ ವಿತರಣೆಗೆಗುರುವಾರ ಶಾಸಕರ ಕಚೇರಿಯಲ್ಲಿ ನೂಕುನುಗ್ಗಲು ಉಂಟಾಗಿತ್ತು.
ಶುಕ್ರವಾರವೂ ಕಿಟ್‌ಗಳುಸಿಗದ ನೂರಾರು ಮಂದಿ ಶಾಸಕರ ಕಚೇರಿ ಬಳಿಪ್ರತಿಭಟನೆ ನಡೆಸಿದರು.ಶುಕ್ರವಾರವೂ ದಿನಸಿ ಕಿಟ್‌ಗಳ ವಿತರಣೆ ನಗರದ ಶಾಸಕರ ಕಚೇರಿಯಲ್ಲಿ ಮುಂದುವರಿಯಿತು.ಗುರುವಾರ ಆದ ಗೊಂದಲದಿಂದ ಎಚ್ಚರಗೊಂಡಜೆಡಿಎಸ್ ಕಾರ್ಯಕರ್ತರು ಮೊದಲು ಬಂದವರಿಗೆ ಆಧ್ಯತೆ ಕೊಟ್ಟು ದಾಖಲೆಗಳನ್ನು ಪಡೆದುಕೊಂಡು ಕಿಟ್‌ಗಳನ್ನು ವಿತರಿಸಿದರು.
ಆದರೆ ಕಿಟ್‌ಗಳು ಸಿಗದ ನೂರಾರು ಮಂದಿ ನೋಂದಾಯಿತಕಾರ್ಮಿಕರು ಬೆಂಗಳೂರು ಮೈಸೂರು ಹೆದ್ದಾರಿರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಲಾರಂಭಿಸಿದರು. ಅಲ್ಲಿದ್ದ ಪೊಲೀಸರು ಅವರ ಮನವೊಲಿಸಿಕೆಲವೇ ನಿಮಿಷಗಳಲ್ಲಿ ರಸ್ತೆತೆರವುಗೊಳಿಸಿದರು.
ಆದರೆ ಕಿಟ್‌ಗಳ ದಾಸ್ತಾನು ಕೊರತೆಯ ಬಗ್ಗೆ ತಿಳಿಹೇಳಿ ಕಳುಹಿಸುವ ಹೊತ್ತಿಗೆ ಪೊಲೀಸರು ಇಂದುಸಹ ಹೈರಾಣಾಗಿ ಹೋದರು. ಕಟ್ಟಡ ಮತ್ತುನಿರ್ಮಾಣ ಕಾರ್ಮಿಕರಿಗಾಗಿ ಕೊಟ್ಟಿರುವ ಕಿಟ್‌ಗಳು ಜೆಡಿಎಸ್ ಕಾರ್ಯಕರ್ತ ಮನೆ ಸೇರಿದೆಎಂಬ ಆರೋಪಗಳುಕೇಳಿ ಬಂದವು.
ಎಲ್ಲರಿಗೂ ಕಿಟ್ ಬಂದಿಲ್ಲ – ಗೂಳಿ ಕುಮಾರ್:ಕಿಟ್‌ಗಳ ಕೊರತೆ ಬಗ್ಗೆ ಸುದ್ದಿಗಾರರಿಗೆ ಮಾಹಿತಿಕೊಟ್ಟ ಜೆಡಿಎಸ್ ಮುಖಂಡ ಗೂಳಿ ಕುಮಾರ್,ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 5 ಸಾವಿರ ಕಿಟ್‌ಗಳು ಬಂದಿವೆ. ಕನಕಪುರ ತಾಲೂಕು ಹಾರೋಹಳ್ಳಿ, ಮರಳವಾಡಿ ಪ್ರದೇಶಗಳು ರಾಮನಗರವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಆ ಭಾಗದಲ್ಲೇ 5-6 ಸಾವಿರಕ್ಕೂ ಅಧಿಕ ಮಂದಿ ಕಾರ್ಮಿಕರಿದ್ದಾರೆ. ನಗರ ವ್ಯಾಪ್ತಿ2 ಸಾವಿರಕ್ಕೂ ಅಧಿಕ ಮಂದಿಕಾರ್ಮಿಕರಿದ್ದಾರೆ, ಆದರೆ ನಗರ ವ್ಯಾಪ್ತಿಗೆ ನಿಗದಿಯಾಗಿರುವುದು 1 ಸಾವಿರ ಕಿಟ್‌ಗಳು ಮಾತ್ರಹೀಗಾಗಿ ಕೊರತೆ ಎದುರಾಗಿದೆ. ಇಲಾಖೆ ಎಲ್ಲಾಕಾರ್ಮಿಕರಿಗೂ ಕಿಟ್ ಒದಗಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.