Advertisement
ಸೋಮವಾರ ಮಧ್ಯಾಹ್ನ ದವರೆಗೆ ನಗರದ ರಸ್ತೆಗಳಲ್ಲಿ ಬೇಕಾಬಿಟ್ಟಿ ಕಾರು, ಬೈಕ್‌ಗಳ ಓಡಾಟ ನಡೆ ದಿದ್ದು, ಕೋವಿಡ್ 19 ಭೀತಿ ಇದ್ದರೂ ಜನ ನಿರ್ಲಕ್ಷé ವಹಿಸುತ್ತಿರುವುದು ಸ್ಪಷ್ಟವಾಗುತ್ತಿದೆ.
Related Articles
Advertisement
ಸಾಮಾಜಿಕ ಅಂತರಕ್ಕೂ ನಿರ್ಲಕ್ಷ್ಯಬಿಜೈ ಕಾಪಿಕಾಡ್, ಉರ್ವಸ್ಟೋರ್ ಮತ್ತು ಇತರ ಪ್ರದೇಶಗಳ ಕೆಲವು ಅಂಗಡಿಗಳಲ್ಲಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಕಾಬಿಟ್ಟಿ ನಿಂತು ದಿನಸಿ ಖರೀದಿಸಿರುವುದು ಸೋಮವಾರ ಕಂಡು ಬಂದಿದೆ. ಮಧ್ಯಾಹ್ನದವರೆಗೆ ನಿಯಮ ಸಡಿಲಿಕೆ ಯಿಂದಾಗಿ ಓಡಾಟ ನಡೆಸಿದರೆ, ಕೆಲವೆಡೆ ಮಧ್ಯಾಹ್ನ ಕಳೆದರೂ ಕಾರು, ಬೈಕ್‌ಗಳ ಓಡಾಟ ನಿರಂತರವಾಗಿತ್ತು. ಎಂ.ಜಿ. ರಸ್ತೆ, ಲಾಲ್‌ಬಾಗ್, ಲೇಡಿಹಿಲ್ ಮುಂತಾದೆಡೆ ಸೋಮವಾರ ಮಧ್ಯಾಹ್ನದ ಅನಂತರ ವಾಹನ ಸಂಚಾರ ನಡೆದಿತ್ತು. ಮಧ್ಯಾಹ್ನ 12 ಗಂಟೆ ಯವರೆಗೆ ದಿನಸಿ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದ್ದರೂ, ಕಳೆದ ಕೆಲ ದಿನಗಳಿಂದ ಕೆಲವು ಅಂಗಡಿಗಳಲ್ಲಿ 1 ಗಂಟೆಯವರೆಗೂ ಮಾರಾಟ ನಡೆಯುತ್ತಿದೆ. ಜವಾಬ್ದಾರಿಯಿಂದ ಸಹಕರಿಸಿ
ಕೋವಿಡ್ 19 ಆತಂಕ ಜಿಲ್ಲೆಯಲ್ಲಿ ಹೆಚ್ಚುತ್ತಿರುವುದರಿಂದ ದಯವಿಟ್ಟು ಜನ ಈ ಬಗ್ಗೆ ನಿರ್ಲಕ್ಷé ವಹಿಸಬಾರದು. ಸ್ವಯಂ ಜವಾಬ್ದಾರಿಯಿಂದ ಮನೆಯೊಳಗೇ ಇದ್ದು ಸಹಕರಿಸಬೇಕು. ಅಗತ್ಯ ವಸ್ತುಗಳು ತೀರಾ ಅಗತ್ಯವಿದ್ದಲ್ಲಿ ಮಾತ್ರ ಜನ ಮನೆಯಿಂದ ಹೊರಬಂದು ಖರೀದಿಸಬೇಕು. ಜಾಗೃತಿಯೊಂದೇ ಪರಿಹಾರ.
- ಸಿಂಧೂ ಬಿ. ರೂಪೇಶ್, ದ.ಕ. ಜಿಲ್ಲಾಧಿಕಾರಿ