Advertisement

ಗೃಹ ಜ್ಯೋತಿ: ಜೂ.15ರಿಂದ ನೋಂದಣಿ

10:52 PM Jun 07, 2023 | Team Udayavani |

ಬೆಂಗಳೂರು: ಉಚಿತ ವಿದ್ಯುತ್‌ ಯೋಜನೆಯನ್ನು ಸರಕಾರ ಘೋಷಿಸಿದ ಬೆನ್ನಲ್ಲೇ ವಿದ್ಯುತ್‌ ಸರಬರಾಜು ಕಂಪೆನಿ(ಎಸ್ಕಾಂ)ಗಳಿಗೆ ಪ್ರಶ್ನೆಗಳ ಮಹಾಪೂರವೇ ಹರಿದುಬರುತ್ತಿದೆ. ಅವುಗಳಿಗೆ ಉತ್ತರ ಇಲ್ಲಿದೆ.

Advertisement

- ಈ ಯೋಜನೆ ಪಡೆಯಲು ಏನು ಮಾಡಬೇಕು?
ಇದನ್ನು ಪಡೆಯಲು ಗೃಹ ಬಳಕೆ ಗ್ರಾಹಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಇದರ ಲಿಂಕ್‌ ಅನ್ನು ಶೀಘ್ರ ಹಂಚಿಕೊಳ್ಳಲಾಗುವುದು. ಜೂ. 15ರಿಂದ ನೋಂದಣಿ ಪ್ರಾರಂಭವಾಗುತ್ತದೆ.

- ಯೋಜನೆ ಯಾವಾಗ ಜಾರಿಗೆ ಬರಲಿದೆ?
2023ರ ಜುಲೈನಲ್ಲಿ ಬಳಸಿದ ವಿದ್ಯುತ್‌ ಬಳಕೆಯನ್ನು ಆಗಸ್ಟ್‌ 2023ರಲ್ಲಿ ನೀಡುವ ಬಿಲ್‌ಗೆ ಅನ್ವಯವಾಗುವಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು.

- ಈ ಯೋಜನೆಯನ್ನು ಆಫ್ಲೈನ್‌ ಮೂಲಕ ಪಡೆಯಬಹುದೇ?
ಹೌದು, ಎಲ್ಲ ಗೃಹಬಳಕೆ ಗ್ರಾಹಕರಿಗೆ ಗ್ರಾಮ ಒನ್‌, ಕರ್ನಾಟಕ ಒನ್‌ ಮತ್ತು ಬೆಂಗಳೂರು ಒನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ..

- ಈ ಯೋಜನೆ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು ಯಾವುವು?
ಆಧಾರ್‌ ಸಂಖ್ಯೆ, ಬಿಲ್‌ನಲ್ಲಿ ನಮೂದಿಸ ಲಾಗಿರುವ ಗ್ರಾಹಕರ ಸಂಖ್ಯೆ/ ಖಾತೆ ಸಂಖ್ಯೆ, ಬಾಡಿಗೆ ಭೋಗ್ಯದ ಕರಾರು ಪತ್ರ (ಬಾಡಿಗೆ/ ಭೋಗ್ಯದಾರರಾಗಿದ್ದಲ್ಲಿ) ಸಲ್ಲಿಸುವುದು ಅಥವಾ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್‌ ಐಡಿ ಸಲ್ಲಿಸುವುದು.

Advertisement

- ಅರ್ಜಿ ಸಲ್ಲಿಸಲು ಶುಲ್ಕ ಇದೆಯೇ?
ಸೇವಾ ಸಿಂಧು ಪೋರ್ಟಲ್‌ನಲ್ಲಿ ಶುಲ್ಕ ಇಲ್ಲ.

- ಒಂದಕ್ಕಿಂತ ಹೆಚ್ಚು ವಿದ್ಯುತ್‌ ಮಾಪಕಗಳಿದ್ದರೆ ನಾನು ಈ ಯೋಜನೆಗೆ ಅರ್ಹನೇ?
ಇಲ್ಲ. ಒಬ್ಬ ಗ್ರಾಹಕರು ಒಂದು ಮೀಟರ್‌ಗೆ ಮಾತ್ರ ಯೋಜನೆಗೆ ಅರ್ಹರಾಗಿರುತ್ತಾರೆ.

- ಅರ್ಜಿ ಸಲ್ಲಿಸಿದ ಬಳಿಕ ಸ್ವೀಕೃತಿ ಇದೆಯೇ?
ಹೌದು. ಸೇವಾ ಸಿಂಧುವಿನಿಂದ ಸ್ವೀಕೃತಿ ಸಂದೇಶವನ್ನು ನೋಂದಾಯಿತ ಗ್ರಾಹಕರಿಗೆ ಇಮೇಲ…/ಖMಖ ಮೂಲಕ ಕಳುಹಿಸಲಾಗುತ್ತದೆ.

- ನಾನು ಅಪಾರ್ಟ್‌ಮೆಂಟ್‌ (ವಸತಿ ಸಮುಚ್ಚಯ) ಮಾಲಕನಾಗಿದ್ದರೆ ಅರ್ಜಿ ಸಲ್ಲಿಸಬಹುದೇ?
ಹೌದು, ಪ್ರತ್ಯೇಕ ವಿದ್ಯುತ್‌ ಮೀಟರ್‌ಗಳು ಲಭ್ಯವಿದ್ದರೆ ಯೋಜನೆಗೆ ಅರ್ಜಿ ಸಲ್ಲಿಸಬಹುದು.

- ನಾನು ಬಾಡಿಗೆದಾರ; ಬಿಲ್‌ ಮಾಲಕರ ಹೆಸರಿನಲ್ಲಿದೆ, ನನಗೂ ಯೋಜನೆ ಅನ್ವಯವಾಗುವುದೇ?
ಹೌದು, ಆಧಾರ್‌ ಸಂಖ್ಯೆ, ಬಿಲ್‌ನಲ್ಲಿ ನಮೂದಿಸಲಾಗಿ ರುವ ಗ್ರಾಹಕರ ಸಂಖ್ಯೆ/ ಖಾತೆ ಸಂಖ್ಯೆ, ಬಾಡಿಗೆ ಭೋಗ್ಯದ ಕರಾರು ಪತ್ರ (ಬಾಡಿಗೆ/ ಭೋಗ್ಯದಾರರಾಗಿದ್ದಲ್ಲಿ ಸಲ್ಲಿಸುವುದು ಅಥವಾ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್‌ ಐಡಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು).

- ಬಾಡಿಗೆ/ ಭೋಗ್ಯದಾರರಾಗಿ ನಾನು ನೋಂದಾಯಿ ಸಲು ಸಲ್ಲಿಸಬೇಕಾದ ದಾಖಲೆಗಳು ಯಾವುವು?
ಬಾಡಿಗೆ/ ಭೋಗ್ಯದಾರರು ವಿಳಾಸ ಪುರಾವೆಯೊಂದಿಗೆ ನೋಂದಾಯಿಸಿಕೊಳ್ಳಬಹುದು. ಸದರಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಆಧಾರ್‌ ಜತೆಗೆ ಬಾಡಿಗೆ/ ಭೋಗ್ಯದ ಕರಾರು ಪತ್ರವನ್ನು ಸಲ್ಲಿಸುವುದು.

– ನಾನು 2 ತಿಂಗಳ ಹಿಂದೆ ಮನೆಯನ್ನು ಬದಲಾಯಿಸಿ ದ್ದೇನೆ. ನನಗೆ ಲಾಭ ಸಿಗುತ್ತದೆಯೇ?
ಹೌದು, ಹೊಸ ಸಂಪರ್ಕಕ್ಕಾಗಿ ನಿಯಮಾವಳಿಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು.

– ನಾನು ಅಂಗಡಿಯ ಮಾಲಕನಾಗಿದ್ದು, ಈ ಯೋಜನೆಗಾಗಿ ಅರ್ಜಿ ಸಲ್ಲಿಸಬಹುದೇ?
ಇಲ್ಲ, ಈ ಯೋಜನೆ ಗೃಹಬಳಕೆದಾರರಿಗೆ ಮಾತ್ರ.

- ವಿದ್ಯುತ್‌ ಬಿಲ್‌ನ ಖಾತೆ ಸಂಖ್ಯೆಯನ್ನು ನಾನು ಎಲ್ಲಿ ಹುಡುಕಬೇಕು?
ವಿದ್ಯುತ್‌ ಬಿಲ್ಲಿನ ಖಾತೆ ಸಂಖ್ಯೆಯು ಪ್ರತಿ ತಿಂಗಳ ವಿದ್ಯುತ್‌ ಬಿಲ್‌ನಲ್ಲಿ ಲಭ್ಯವಿರುತ್ತದೆ.

- ನನ್ನ ಆಧಾರ್‌ ಕರ್ನಾಟಕದ ಹೊರಗೆ ನೋಂದಾ ಯಿಸಲ್ಪಟ್ಟಿದೆ. ನಾನು ಈ ಯೋಜನೆ ಪಡೆಯಬಹುದೇ?
ಹೌದು, ನೀವು ಕರ್ನಾಟಕದ ವಿಳಾಸ ಪುರಾವೆಯೊಂದಿಗೆ ಕರ್ನಾಟಕದಲ್ಲಿ ಎಲ್ಲಿಯಾದರೂ ವಾಸಿಸುತ್ತಿದ್ದರೆ, ನೀವು ಯೋಜನೆಗೆ ಅರ್ಹರಾಗಿದ್ದೀರಿ.

 - ನಾನು ವಿದ್ಯುತ್‌ ಬಿಲ್‌ ಬಾಕಿಯನ್ನು ಉಳಿಸಿಕೊಂಡಿದ್ದರೆ ಯೋಜನೆಗೆ ಅರ್ಹನೇ?
ಹೌದು. ಆದರೆ ಜೂನ್‌ 30ರ ವರೆಗಿನ ವಿದ್ಯುತ್‌ ಬಾಕಿಯನ್ನು 3 ತಿಂಗಳೊಳಗೆ ಪಾವತಿಸಬೇಕು, ಪಾವತಿಸದಿದ್ದರೆ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.

- ಒಂದು ವೇಳೆ ನಾನು ಈ ಯೋಜನೆಯ ಫ‌ಲಾನುಭವಿ ಯಾಗಿ, ನನಗೆ ನಿಗದಿಪಡಿಸಿರುವ ಉಚಿತ ವಿದ್ಯುತ್‌ಗಿಂತ ಜಾಸ್ತಿ ಯೂನಿಟ್‌ ಬಳಸಿದರೆ, ನಾನು ಆ ಹೆಚ್ಚಿನ ಯೂನಿಟ್‌ಗಳಿಗೆ ಪಾವತಿಸಬೇಕಾಗುತ್ತದೆ ಎಂಬುದು ನನಗೆ ತಿಳಿದಿದೆ. ಆದರೆ ಹೆಚ್ಚಿನ ಯೂನಿಟ್‌ ಬಳಕೆಯ ಬಿಲ್‌ ಪಾವತಿಸದಿದ್ದರೆ, ನನ್ನನ್ನು ಈ ಯೋಜನೆಯಿಂದ ಅನರ್ಹಗೊಳಿಸಲಾಗುವುದೇ?
ಇಲ್ಲ. ಬಾಕಿ ಪಾವತಿಸದಿದ್ದರೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು. ಬಾಕಿಯನ್ನು ಪಾವತಿಸಿದ ಬಳಿಕ ಪುನಃ ಈ ಯೋಜನೆಯ ಸೌಲಭ್ಯಗಳನ್ನು ಪಡೆಯಬಹುದು.

- ವಿದ್ಯುತ್‌ ಬಿಲ್‌ ನನ್ನ ದಿವಂಗತ ತಂದೆಯ ಹೆಸರಿನ ಲ್ಲಿದೆ? ಇದಕ್ಕಾಗಿ ನಾನು ಹೇಗೆ ಅರ್ಜಿ ಸಲ್ಲಿಸಬಹುದು?
ವಿದ್ಯುತ್‌ ಸಂಪರ್ಕವನ್ನು ನಿಮ್ಮ ಹೆಸರಿಗೆ ವರ್ಗಾ ಯಿಸಬೇಕು ಮತ್ತು ಅನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಹೆಸರಿನ ಬದಲಾವಣೆಯನ್ನು ಎಲ್ಲ ಉಪ ವಿಭಾಗಗಳಲ್ಲಿನ ಜನ ಸ್ನೇಹಿ ವಿದ್ಯುತ್‌ ಸೇವಾ ಕೌಂಟರ್‌ಗಳಲ್ಲಿ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next