ದಾವಣಗೆರೆ: ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರ ಕುಂದುಕೊರತೆ ಸಭೆ ನಡೆಸುವ ಮೂಲಕ ಅಹವಾಲು ಸ್ವೀಕರಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಸೂಚಿಸಿದ್ದಾರೆ.
ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಪಿಎಸ್‌ಐ ತಮ್ಮ ಠಾಣಾ ವ್ಯಾಪ್ತಿಯ ಎಸ್‌ಸಿ, ಎಸ್‌ಟಿ ಕಾಲೋನಿಗೆ ಆಗಿಂದಾಗ್ಗೆ ಭೇಟಿ ನೀಡಿ ಅವರ ಸಮಸ್ಯೆಗಳ ಬಗ್ಗೆ ಸಂಪೂರ್ಣವಾಗಿ ಅವಲೋಕಿಸಿ, ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ದಲಿತ ಮುಖಂಡರು ಮಾತನಾಡಿ, ದಲಿತ ಕೇರಿಗಳಲ್ಲಿ ಮತ್ತು ದಲಿತರ ಸಮಸ್ಯೆಗಳ ಕುರಿತು, ಮುಖ್ಯವಾಗಿ ಪೊಲೀಸ್ ಬೀಟ್ ವ್ಯವಸ್ಥೆ ಮತ್ತು ಜನಸ್ನೇಹಿ ಪೊಲೀಸ್, ಕೆಎಸ್ಸಾರ್ಟಿಸಿ ಬಸ್ ಸೌಲಭ್ಯ, ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗಳ ಮೇಲೆ ಕ್ರಮ, ದಲಿತರ ಮೇಲಿನ ದೌರ್ಜನ್ಯ ಸಂಬಂಧ ಠಾಣೆಗಳಲ್ಲಿ ದಾಖಲಿಸಿದ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ನೋಡಿಕೊಳ್ಳಬೇಕು ಹಾಗೂ ಕುಂದುಕೊರತೆ ಸಭೆಗಳನ್ನು ದಲಿತ ಕೇರಿಗಳಲ್ಲಿ ಮತ್ತು ತಾಲೂಕು ಹಾಗೂ ಠಾಣಾ ಮಟ್ಟದಲ್ಲಿ ನಡೆಸುವಂತೆ ಮನವಿ ಮಾಡಿದರು.
ನಾಗರಿಕ ಹಕ್ಕುಜಾರಿ ನಿರ್ದೇಶನಾಲಯ ಎಸ್‌ಪಿ ಎನ್. ರುದ್ರಮುನಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ರಾಜೀವ್, ಸಾರಿಗೆ ಪ್ರಾದೇಶಿಕ ಅ ಧಿಕಾರಿ ಎಚ್. ಬಣಕಾರ್, ಸಾರಿಗೆ ಇಲಾಖೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಟಾಳ್, ಜಿಲ್ಲಾ ಅಬಕಾರಿ ಅ ಧಿಕಾರಿ ರಮೇಶ್ ಬಿ. ಅಗಡಿ, ದಲಿತ ಮುಖಂಡರಾದ ದುಗ್ಗಪ್ಪ , ಹೆಗ್ಗೆರೆ ರಂಗಪ್ಪ, ಸೋಮಲಾಪುರದ ಹನುಂತಪ್ಪ, ಎಲ್.ಬಿ. ಗೋಣೇಪ್ಪ, ಗುಮ್ಮನೂರು ರಾಮಚಂದ್ರಪ್ಪ, ಕುಂದುವಾಡ ಮಂಜುನಾಥ, ಆವರಗೆರೆ ವಾಸು, ಸತೀಶ್ ಮಲೆಮಾಚಿಕೆರೆ, ಉಮಾಪತಿ ಇತರರು ಇದ್ದರು.