Advertisement

ಗ್ರೇಟಾಗೆ “ಟೈಮ್‌ ವರ್ಷದ ವ್ಯಕ್ತಿ’ಗೌರವ

10:04 AM Dec 12, 2019 | mahesh |

ನ್ಯೂಯಾರ್ಕ್‌: ಜಾಗತಿಕ ತಾಪಮಾನವನ್ನು ಖಂಡಿಸಿ ಕಳೆದ ವರ್ಷ ಸ್ವೀಡನ್‌ನ ಸಂಸತ್‌ನ ಮುಂದೆ ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ವಿಶ್ವಾದ್ಯಂತ ಹೊಸ ಹೋರಾಟಕ್ಕೆ ಮುನ್ನುಡಿ ಬರೆದಿದ್ದ 16 ವರ್ಷದ ಗ್ರೇಟಾ ಥನ್‌ಬರ್ಗ್‌ ಟೈಮ್‌ ನಿಯತಕಾಲಿಕೆಯ “2019ರ ವರ್ಷದ ವ್ಯಕ್ತಿ’ ಬಿರುದು ಪಡೆದಿದ್ದಾರೆ. ಈ ಪ್ರಶಸ್ತಿ ಘೋಷಣೆ ಆಗು ವಾಗ ಗ್ರೇಟಾ ಮ್ಯಾಡ್ರಿಡ್‌ನ‌ಲ್ಲಿ ಹವಾಮಾನಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಶೃಂಗದಲ್ಲಿ ಭಾಗಿಯಾಗಿದ್ದರು. ವರ್ಷದ ವ್ಯಕ್ತಿ ಬಿರುದು ಕುರಿತು ಪ್ರತಿಕ್ರಿಯಿಸಿರುವ ಗ್ರೇಟಾ, “ನಾಳೆ ಎಂಬುದೇ ಇಲ್ಲ ಎಂದು ಭಾವಿಸುತ್ತಾ ನಾವು ಬದುಕ ಬಾರದು. ಏಕೆಂದರೆ, ನಾಳೆ ಎಂಬುದು ಖಂಡಿತಾ ಇದೆ. ಅದನ್ನೇ ನಾವು ಹೇಳುತ್ತಿರುವುದು’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next