Advertisement

ತ್ರಾಲ್‌ನಲ್ಲಿ ಉಗ್ರರ ಅಟ್ಟಹಾಸ;3 ಸಾವು,7 ಯೋಧರಿಗೆ ಗಾಯ

01:04 PM Sep 21, 2017 | Team Udayavani |

 ಜಮ್ಮು: ಇಲ್ಲಿನ ತ್ರಾಲ್‌ ಪ್ರದೇಶದಲ್ಲಿ  ಉಗ್ರರು ಗುರುವಾರ ಅಟ್ಟಹಾಸಗೈದಿದ್ದು, ಸಚಿವರನ್ನು ಗುರಿಯಾಗಿರಿಸಿಕೊಂಡು  ಗ್ರೆನೇಡ್‌ ಎಸೆದ ಪರಿಣಾಮ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, 7 ಮಂದಿ ಸಿಆರ್‌ಪಿಎಫ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ಪುಲ್ವಾಮಾದ ತ್ರಾಲ್‌ನ ಬಸ್‌ಸ್ಟಾಂಡ್‌ ಬಳಿ ಕಾಮಾಗಾರಿ ಉದ್ಘಾಟನೆಗೆಂದು ಜಮ್ಮು ಮತ್ತು ಕಾಶ್ಮೀರದ ಸಚಿವ ನಯೀಮ್‌ ಅಖ್ತರ್‌ ಅವರು ಆಗಮಿಸಿದ್ದ ವೇಳೆ ಉಗ್ರರು ಹೊಂಚು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸಚಿವ ಅಖ್ತರ್‌ ಪಾರಾಗಿದ್ದು ಸ್ಥಳದಲ್ಲಿದ್ದ ಹಲವು ನಾಗರಿಕರೂ ಗಾಯಗೊಂಡಿರುವ ಬಗ್ಗೆ ಎಎನ್‌ಐ ವರದಿ ಮಾಡಿದೆ. 

ಗ್ರೆನೇಡ್‌ ಎಸೆದ ಬಳಿಕ ಉಗ್ರರು ಭಾರೀ ಗುಂಡಿನ ಮಳೆ ಸುರಿಸಿರುವ ಬಗ್ಗೆ ವರದಿಯಾಗಿದೆ.

ಇಂದು ಬೆಳಗ್ಗೆ ರಾಮ್‌ಬನ್‌ ಪ್ರದೇಶದಲಿ ಸೀಮಾ ಸಶಸ್ತ್ರ ಬಲ ಕ್ಯಾಂಪ್‌ ಬಳಿ ನಡೆದ 
 ಗುಂಡಿನ ಚಕಮಕಿಯಲ್ಲಿ  ಓರ್ವ ಯೋಧ ಹುತಾತ್ಮನಾಗಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next