Advertisement

ಕರಾಚಿ ರ‍್ಯಾಲಿಯ ಮೇಲೆ ಸಿಂಧೂದೇಶ ಕ್ರಾಂತಿಕಾರಿ ಸೈನ್ಯದಿಂದ ಗ್ರೆನೇಡ್ ದಾಳಿ: 30 ಜನರಿಗೆ ಗಾಯ

09:37 AM Aug 06, 2020 | keerthan |

ಕರಾಚಿ: ಇಲ್ಲಿನ ನಡೆಯುತ್ತಿದ್ದ ರ‍್ಯಾಲಿಯೊಂದರ ಮೇಲೆ ಬುಧವಾರ ಗ್ರೆನೇಡ್ ದಾಳಿ ನಡದಿದ್ದು, 30 ಮಂದಿ ಗಾಯಗೊಂಡಿದ್ದಾರೆ.

Advertisement

ಜಮ್ಮು ಕಾಶ್ಮೀರ್ ಆರ್ಟಿಕಲ್ 370 ರದ್ದತಿಗೆ ಒಂದು ವರ್ಷವಾದ ಹಿನ್ನಲೆಯಲ್ಲಿ ಈ ದಿನವನ್ನು ಕಾಶ್ಮೀರದ ಮೇಲಿನ ಸ್ವಾಯತ್ತತೆಯನ್ನು ಭಾರತ ಹಿಂದೆತೆಗುಕೊಂಡ ದಿನ ಎಂದು ಪಾಕಿಸ್ಥಾನ ಪರಿಗಣಿಸಿದ್ದು, ಅದೆ ವಾರ್ಷಿಕೋತ್ಸವದ ರಾಲಿ ಆಯೋಜಿಸಲಾಗಿತ್ತು. ಈ ವೇಳೆ ಗ್ರೆನೇಡ್ ದಾಳಿಯಾಗಿದ್ದು, 30 ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಇವರಲ್ಲಿ ಓರ್ವ ನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಈ ದಾಳಿಯ ಹೊಣೆಯನ್ನು ಸಿಂಧೂದೇಶ ಕ್ರಾಂತಿಕಾರಿ ಸೈನ್ಯ ಎಂಬ ಸಂಘಟನೆ ಹೊತ್ತುಕೊಂಡಿದೆ ಎಂದು ವರದಿಯಾಗಿದೆ. ಈ ಸಂಘಟನೆ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿದ್ದು, ಕಳೆದ ಜೂನ್ ನಲ್ಲಿ ನಾಲ್ವರ ಹತ್ಯೆಗೆ ಕಾರಣವಾಗಿತ್ತು.

ಸಿಂಧೂ ಪ್ರಾಂತ್ಯದ ಸ್ವಾತಂತ್ಯಕ್ಕಾಗಿ ಈ ಗುಂಪು ಹೋರಾಟ ನಡೆಸುತ್ತಿದೆ. ಸಿಂಧೂ ಪ್ರಾಂತ್ಯವನ್ನು ದೇಶವನ್ನಾಗಿ ಮಾಡಿ., ಕರಾಚಿಯನ್ನು ರಾಜಧಾನಿಯನ್ನಾಗಿಸ ಬೇಕು ಎಂದು ಈ ಸಂಘಟನೆ  ಹೋರಾಟ ನಡೆಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next