ಮೆಲ್ಬರ್ನ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಗ್ರೆಗ್ ಬಾರ್ಕ್ಲೇ ಅವರು ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
ಶನಿವಾರ ಮೆಲ್ಬೋರ್ನ್‌ನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಬಾರ್ಕ್ಲೇ ಎದುರಾಳಿಯಾಗಿದ್ದ ಜಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷ ಡಾ. ತವೆಂಗ್ವಾ ಮುಕುಹ್ಲಾನಿ ಸ್ಪರ್ಧೆಯಿಂದ ಹಿಂದೆ ಸರಿದರು. ಹೀಗಾಗಿ ನ್ಯೂಜಿಲೆಂಡ್ ಕ್ರಿಕೆಟ್ ನ ಮಾಜಿ ಮುಖ್ಯಸ್ಥ ಬಾರ್ಕ್ಲೇ ಈಗ ತನ್ನ ಎರಡನೇ ಅವಧಿಯನ್ನು ಇನ್ನೂ ಎರಡು ವರ್ಷಗಳ ಕಾಲ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ:ಸಮೃದ್ಧ ಭವಿಷ್ಯಕ್ಕಾಗಿ ಮತ ಹಾಕಿ.: ಹಿಮಾಚಲ ಪ್ರದೇಶದ ಜನತೆಗೆ ರಾಹುಲ್ ಮನವಿ
ಒಬ್ಬರನ್ನು ಚುನಾಯಿತರಾಗಿ ಘೋಷಿಸಲು ಕೇವಲ ಸರಳ ಬಹುಮತದೊಂದಿಗೆ, ಬಾರ್ಕ್ಲೇ 17 ಸದಸ್ಯರ ಮಂಡಳಿಯಲ್ಲಿ ಹನ್ನೆರಡು ನಿರ್ದೇಶಕರ ಬೆಂಬಲವನ್ನು ಹೊಂದಿದ್ದರು. ಇದರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಬೆಂಬಲವೂ ಸೇರಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರತಿನಿಧಿಸಿದ್ದಾರೆ.