Advertisement

ಮೆಳ್ಳಿಗೇರಿಯಲ್ಲಿಹಸಿರೇ ಉಸಿರು

12:20 PM Nov 11, 2019 | Suhan S |

ಮುಧೋಳ: ಜಿಲ್ಲೆಯ 619 ಕಂದಾಯ ಗ್ರಾಮಗಳಲ್ಲೇ ಒಳಚರಂಡಿ ವ್ಯವಸ್ಥೆ ಹೊಂದುವ ಮೂಲಕ ಇಡೀ ರಾಜ್ಯದ ಗಮನ ಸೆಳೆದ ತಾಲೂಕಿನ ಮೆಳ್ಳಿಗೇರಿ ಗ್ರಾಮ ಇದೀಗ ಹಸಿರಿನಿಂದ ಕಂಗೊಳಿಸುತ್ತಿದೆ.

Advertisement

ಸಾರ್ವಜನಿಕರ ಸಹಭಾಗಿತ್ವ ಹಾಗೂ ಸ್ಥಳೀಯ ಆಡಳಿತ ಆಸಕ್ತಿ ವಹಿಸಿದರೆ ಗ್ರಾಮದಲ್ಲಿ ಅಮೂಲಾಗ್ರ ಬದಲಾವಣೆ ಮಾಡಬಹುದು ಎಂಬುದಕ್ಕೆ ಈ ಗ್ರಾಮವೇ ಉತ್ತಮ ಉದಾಹರಣೆಯಾಗಿದೆ. ಗ್ರಾಮದ ಹಸಿರೀಕರಣಕ್ಕಾಗಿ ಗ್ರಾಪಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳಿಂದ ಗ್ರಾಮದಲ್ಲಿ ಅಂದಾಜು 2500 ಸಸಿಗಳು ಬೆಳೆದು ನಿಂತು ಹಸಿರಿನಿಂದ ಕಂಗೊಳಿಸುತ್ತಿವೆ.

ಸರ್ಕಾರ 2019-20ನ್ನು “ಜಲಾಮೃತ ವರ್ಷ’ ಎಂದು ಘೋಷಿಸಿದೆ. ಈ ಕಾರ್ಯಕ್ರಮದಡಿ ಗ್ರಾಮೀಣ ಪ್ರದೇಶದಲ್ಲಿ ನೀರು ಉಳಿತಾಯ ಮಾಡುವುದು ಮುಖ್ಯ ಉದ್ದೇಶ. ಮೆಳ್ಳಿಗೇರಿ ಗ್ರಾಪಂ ಅಧಿಕಾರಿಗಳು ಇದೇ ಯೋಜನೆಯಡಿ ಒಳಚರಂಡಿ ಹಾಗೂ ಹೆಚ್ಚುವರಿ ನೀರು ಬಳಸಿಕೊಂಡು ಉದ್ಯಾನವನ ಅಭಿವೃದ್ಧಿಗೆ ಮುಂದಾಗಿದ್ದಾರೆ. ಅರಣ್ಯ ಇಲಾಖೆ ಹಾಗೂ ಗ್ರಾಪಂ ಸಹಯೋಗದಲ್ಲಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಿಂದುಗಡೆ 2000 ಹಾಗೂ ಮುಧೋಳ ರಸ್ತೆಗೆ ಹೊಂದಿಕೊಂಡಂತೆ 500 ಸಸಿಗಳನ್ನು ನೆಟ್ಟು ಅವುಗಳಿಗೆ ಸೂಕ್ತ ಕಾವಲುಗಾರರನ್ನು ನೇಮಿಸಿ ರಕ್ಷಣೆ ಮಾಡಲಾಗುತ್ತಿದೆ. ಈ ಸಸಿಗಳನ್ನು ಗ್ರಾಪಂದಿಂದಲೇ ಸ್ವತಂತ್ರವಾಗಿ ಪೋಷಿಸಲಾತ್ತಿದೆ. ಒಟ್ಟಿನಲ್ಲಿ ಸರ್ಕಾರದ ಇಚ್ಛಾಶಕ್ತಿ ಹಾಗೂ ಸ್ಥಳೀಯರ ಆಸಕ್ತಿಯಿಂದ “ಗಾಂಧಿ  ಗ್ರಾಮ ಪ್ರಶಸ್ತಿ ಪುರಸ್ಕೃತ’ ಮೆಳ್ಳಿಗೇರಿ ಹಚ್ಚ ಹಸಿರಿನಿಂದ ಕಂಗೊಳಿಸುವಂತಾಗಿದೆ.

 

-ಗೋವಿಂದಪ್ಪ ತಳವಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next