Advertisement
ನಗರದಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ ಹಾಗೂ ಕಡಿಮೆ ತ್ಯಾಜ್ಯ ಉಂಟಾಗುವ ರೀತಿಯಲ್ಲಿ ಮದುವೆ ಸಮಾರಂಭವನ್ನು ನಿರ್ವಹಿಸಿದ ಮದುವೆಗೆ ಪಾಲಿಕೆ ಹಾಗೂ ಜಿಲ್ಲಾಡಳಿತ “ಹಸಿರು ವಿವಾಹ’ ಎಂಬ ಅಭಿನಂದನಾ ಪ್ರಮಾಣ ಪತ್ರ ನೀಡಲಾಗುತ್ತದೆ.
Related Articles
Advertisement
ಹಸಿರು ವಿಹಾರಕ್ಕೆ ಸಾಕ್ಷಿಯಾದ ಮೊದಲ ಮದುವೆ: ಪಾಲಿಕೆ “ಹಸಿರು ವಿವಾಹ’ ಇತ್ತೀಚಿಗಷ್ಟೆ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆಯಿತುಯ. ಪಾಲಿಕೆ ಎಂಜಿನಿಯರ್ ಮಹೇಶ್ ಪುತ್ರ ನಿಶ್ಚಲ್ ಹಾಗೂ ಪೂಜಾ ಬಿ. ಶೇಷಾದ್ರಿ ಜೋಡಿ ಪರಿಸರ ಸ್ನೇಹಿ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮತ್ತು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರು ಕಲ್ಯಾಣ ಮಂಟಪಕ್ಕೆ ತೆರಳಿ ಅಭಿನಂದನಾ ಪ್ರಮಾಣಪತ್ರ ಪ್ರದಾನ ಮಾಡಿ ಅವರ ದಾಂಪತ್ಯ ಜೀವನಕ್ಕೆ ಶುಭಕೋರಿದರು.
ಪ್ಲಾಸ್ಟಿಕ್ ಬದಲು ಸ್ಟೀಲ್ ಬಳಕೆ: ಮದುವೆ ಮಂಟಪವನ್ನು ಸಂಪೂರ್ಣವಾಗಿ ಹಸಿರುಮಯ ಮಾಡಲಾಗಿತ್ತು. ಧಾರೆ ಮಂಟಪದಿಂದ ಹಿಡಿದು ಊಟದವರೆಗೂ ಬಳಸುವ ವಸ್ತುಗಳನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಲಾಗಿತ್ತು. ಪ್ಲಾಸ್ಟಿಕ್ ಮತ್ತು ಬಾಳೆ ಎಲೆಯ ಬದಲಾಗಿ ಅಂದಾಜು 2 ಸಾವಿರ ಸ್ಟೀಲ್ ತಟ್ಟೆ ಹಾಗೂ ಲೋಟ ಬಳಸಲಾಯಿತು. ಇದರೊಂದಿಗೆ ಮದುವೆ ಮನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬರುವ ತ್ಯಾಜ್ಯ ಕಡಿಮೆಯಾಗಿ ಕೇವಲ 48 ಕೆಜಿಯಷ್ಟು ತ್ಯಾಜ್ಯ ಉತ್ಪತ್ತಿಯಾಯಿತು.
ಏನಿದು ಹಸಿರು ವಿವಾಹ?: ಕೊಳೆಯದಂತಹ ಪದಾರ್ಥಗಳನ್ನು ಕಡಿಮೆ ಬಳಕೆ ಮಾಡುವುದು. ವೇದಿಕೆ ಅಲಂಕಾರದಿಂದ ಅಡುಗೆ ಕೊಠಡಿಯಲ್ಲಿ ಉತ್ಪತಿಯಾಗುವ ಕೊಳೆಯುವ ತ್ಯಾಜ್ಯವನ್ನು ಕಂಪೋಸ್ಟ್ ಘಟಕಕ್ಕೆ ವಿಲೇವಾರಿ ಮಾಡಿಸುವುದು. ಉಳಿದ ಊಟವನ್ನು ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ನೀಡುವುದು, ವಿವಾಹದಲ್ಲಿ ಯಾವುದೇ ರೀತಿ ಪ್ಲಾಸ್ಟಿಕ್ ಬಳಸದೇ ಸ್ಟೀಲ್ ತಟ್ಟೆ, ಲೋಟ ಬಳಸುವುದು. ಇದರಿಂದ 5 ಟನ್ ತ್ಯಾಜ್ಯ ಉತ್ಪತ್ತಿಯಾಗುವ ಬದಲು 50 ಕೆಜಿ ಹಸಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇಂತಹ ಮದುವೆಯೇ “ಹಸಿರು ವಿವಾಹ’ ಪಟ್ಟಿಗೆ ಸೇರುತ್ತದೆ.