Advertisement

ಕೃಷಿ ಅಭಿಯಾನಕ್ಕೆ ಹಸಿರು ನಿಶಾನೆ

11:47 AM May 29, 2019 | Team Udayavani |

ಕೊಳ್ಳೇಗಾಲ: ಸರ್ಕಾರ ಕೃಷಿ ಅಭಿಯಾನದ ಅಡಿಯಲ್ಲಿ ಎಲ್ಲಾ ಇಲಾಖೆಯ ಸೌಲಭ್ಯಗಳ ಮಾಹಿತಿಯನ್ನು ನೀಡಲಿದ್ದು, ರೈತರು ಮತ್ತು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎಸ್‌.ಜೆ. ಕೃಷ್ಣ ಹೇಳಿದರು.

Advertisement

ನಗರದ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿ ಮಂಗಳವಾರ ಕೃಷಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದ ಬಳಿಕ ಮಾತನಾಡಿ, ರೈತರಿಗೆ ಇದೊಂದು ಉಪಯುಕ್ತ ಕಾರ್ಯಕ್ರಮವಾಗಿದ್ದು, ಅಭಿಯಾನದ ವೇಳೆ ಕಾನೂನು ಅರಿವಿನ ಬಗ್ಗೆ ಗ್ರಾಮಸ್ಥರಿಗೆ ತಿಳಿವಳಿಕೆ ನೀಡಬೇಕು ಎಂದರು.

ಸರ್ಕಾರ ರೈತರಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಇಲಾಖೆಗಳ ಅಡಿಯಲ್ಲಿ ಸೌಲಭ್ಯಗಳ ಮಾಹಿತಿಯನ್ನು ಕೃಷಿ ಅಭಿಯಾನದಲ್ಲಿ ದೊರೆಯಲಿದ್ದು, ಮಾಹಿತಿ ಪಡೆದುಕೊಂಡು ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮೇಲೆ ಬರಬೇಕೆಂದು ಸಾರ್ವಜನಿಕರಿಗೆ ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಟಿ.ಶ್ರೀಕಾಂತ್‌, ಅಪರ ಸಿವಿಲ್ ನ್ಯಾಯಾಲಯ ನ್ಯಾಯಾಧೀಶ ಸಂತೋಷ್‌ ಕೊಠಾರಿ, ತಾಲೂಕು ಕೃಷಿ ಸಹಾಯಕ ಉಪ ನಿರ್ದೇಶಕ ಮಹದೇವಯ್ಯ, ಸಹಾಯಕ ಅಧಿಕಾರಿ ರಮೇಶ್‌ ಬಾಬು, ರೈತ ಮುಖಂಡರಾದ ಶೈಲೇಂದ್ರ, ಅಣಗಳ್ಳಿ ಬಸವರಾಜು, ಚನ್ನಬಸವರಾಧ್ಯ, ಮಧುವನಹಳ್ಳಿ ಬಸವರಾಜು, ಶಿವಕುಮಾರ್‌, ವಕೀಲರ ಸಂಘದ ಅಧ್ಯಕ್ಷ ಬಸವರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next