Advertisement
ಸೋಮವಾರದಿಂದ ಸೋಲಾರ್ ಬಳಕೆಗೆ ಬೆಸ್ಕಾಂ ಅನುಮತಿ ನೀಡಿದ್ದು, ಈ ಮೂಲಕ ಬೆಂಗಳೂರು ವಿವಿ ವಾರ್ಷಿಕ ಒಂದು ಕೋಟಿ ವಿದ್ಯುತ್ ಬಿಲ್ ಉಳಿಸಲಿದೆ. ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ ಮತ್ತಿತರ ಸಿಬ್ಬಂದಿ ಸಮ್ಮುಖದಲ್ಲಿ ಚಾಲನೆ ಪಡೆದ ಸೌರ ವಿದ್ಯುತ್ ಘಟಕ ಪ್ರಾಯೋಗಿಕವಾಗಿ ಒಂದು ತಿಂಗಳ ಕಾಲ ಕಾರ್ಯನಿರ್ವಹಿಸಲಿದೆ. ಬಳಿಕ ವಿವಿ ಅಗತ್ಯಗಳಿಗೆ ಬಳಸಕೊಂಡು ಉಳಿದ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡಲು ಬೆಸ್ಕಾಂ-ವಿವಿ ನಡುವೆ ಒಪ್ಪಂದ ಏರ್ಪಡಲಿದೆ.
Related Articles
Advertisement
“ಉದಯವಾಣಿ’ ಫಲಶೃತಿ: ವಿವಿ ಆವರಣದಲ್ಲಿ ವಸೋಲಾರ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಬಳಕೆಗೆ ಅನುಮತಿ ಸಿಗದಿರುವ ಕುರಿತು ಆ.31ರಂದು, “ಗ್ರಿಡ್ ಸಿದ್ಧವಾದರೂ ಸಿಗದ ಸೌರ ವಿದ್ಯುತ್’ ಎಂಬ ಶೀರ್ಷಿಕೆಯಡಿ “ಉದಯವಾಣಿ’ ವರದಿ ಪ್ರಕಟಿಸಿತ್ತು. ಈ ವೇಳೆ ಬೆಸ್ಕಾಂ ಅಧಿಕಾರಿಗಳು 15 ಕೆಲಸದ ದಿನಗಳಲ್ಲಿ (ವರ್ಕಿಂಗ್ ಡೇಸ್) ಬೆಂಗಳೂರು ವಿವಿಗೆ ರೂಫ್ ಟಾಪ್ ಸೋಲಾರ್ ಬಳಕೆಗೆ ಅನುಮತಿ ನೀಡುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಂದಿನ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆಯಾದ ಹಿನ್ನಲೆ ಅನುಮತಿ ನೀಡುವ ಕಾರ್ಯ ವೇಗ ಕಳದುಕೊಂಡಿತ್ತಾದರೂ, ನಂತರ ಸೆಪ್ಟೆಂಬರ್‌ನಲ್ಲಿ ನಡೆದ ಕೆಇಆರ್‌ಸಿ ಸಭೆಯಲ್ಲಿ ಬೆಂಗಳೂರು ವಿವಿ ಮತ್ತು ಜಿಕೆವಿಕೆ ಅವರಣದಲ್ಲಿನ ರೂಫ್ ಟಾಪ್ ಸೋಲಾರ್ ಬಳಕೆಗೆ ಅನುಮತಿ ನೀಡಿದೆ.
ರೂಫ್ ಟಾಪ್ ಸೋಲಾರ್ ಅಳವಡಿಸಿಕೊಂಡ ರಾಜ್ಯದ ಮೊದಲ ವಿವಿ ಎಂಬ ಖ್ಯಾತಿಗೆ ಬೆಂಗಳೂರು ವಿಶ್ವವಿದ್ಯಾಲಯ ಪಾತ್ರವಾಗಿದೆ. ವಿವಿ ಆವರಣವನ್ನು ಸಂಪೂರ್ಣವಾಗಿ ಸೋಲಾರ್ ಮತ್ತು ಗ್ರೀನ್ ಕ್ಯಾಂಪಸ್ ಮಾಡುವುದೇ ನಮ್ಮ ದ್ಯೆàಯ. ಉಳಿದಿರುವ 20 ಕಟ್ಟಡಗಳ ಮೇಲೂ ಸೋಲಾರ್ ಪ್ಯಾನಲ್ ಅಳವಡಿಸಿದರೆ ವಿವಿ ನಿರ್ವಹಣೆಗೆ ಬೇಕಿರುವ ಹಣ ಬೆಸ್ಕಾಂ ಮೂಲಕ ಸಿಗಲಿದೆ. ಬಳಕೆಗೆ ಸಿದ್ಧವಿದ್ದ ರೂಫ್ ಟಾಪ್ ಸೋಲಾರ್ ಬಳಸಲು ಅನುಮತಿ ಪಡೆಯುವ ಬೆಂಗಳೂರು ವಿವಿ ಪ್ರಯತ್ನಕ್ಕೆ ಉದಯವಾಣಿ ಧ್ವನಿಗೂಡಿಸಿದ್ದು, ವರದಿ ಪ್ರಕಟವಾದ ತಿಂಗಳೊಳಗೆ ಅನುಮತಿ ದೊರತಿರುವುದು ಸಂತಸ ತಂದಿದೆ.-ಪ್ರೊ.ಕೆ.ಆರ್.ವೇಣುಗೋಪಾಲ್, ಬೆಂಗಳೂರು ವಿವಿ ಕುಲಪತಿ