Advertisement

ಕಲಬುರಗಿಯಲ್ಲಿ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್

08:28 AM May 05, 2020 | keerthan |

ಕಲಬುರಗಿ: ಕೋವಿಡ್-19 ಸೋಂಕಿನ ಹಾಟ್ ಸ್ಪಾಟ್ ಕಲಬುರಗಿಯಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಇಂದಿನಿಂದಲೇ ಮದ್ಯದ ಅಂಗಡಿ ತೆರೆಯಬಹುದು ಎಂದು ಜಿಲ್ಲಾಧಿಕಾರಿ ಶರತ್ ಬಿ ಹೇಳಿದರು.

Advertisement

ಮದ್ಯದ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ಮಾಡಬೇಕು. ಅಂಗಡಿ ತೆರೆಯುವ ಮುನ್ನ ಹಳೆ ಸಂಗ್ರಹದ ಮಾಹಿತಿ ಬರೆದಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ ಎಂದು‌ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ತಿಳಿಸಿದರು.

ಕಂಟೋನ್ಮೆಂಟ್ ಝೋನ್ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಉಳಿದಂತೆ ಎಲ್ಲೂ ಶಾಪಿಂಗ್ ಮಾಲ್ ಮತ್ತು ಬಟ್ಟೆ ಅಂಗಡಿಗಳು ತೆರೆಯಲು ಅವಕಾಶ ಇಲ್ಲ.‌ ಹೊಟೇಲ್ ನಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ಇರುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next