Advertisement
ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಆರೆಸ್ಸೆಸ್‌ನ ದಕ್ಷಿಣ ಪ್ರಾಂತ ಸಹಸಂಪರ್ಕ ಪ್ರಮುಖ್ ಪ್ರಕಾಶ್ ಪಿ.ಎಸ್. ಶುಭಾಶಂಸನೆಗೈದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಅದಾನಿ ಯುಪಿಸಿಎಲ್‌ನ ಕಿಶೋರ್ ಆಳ್ವ, ವಿಹಿಂಪದ ಪ್ರೊ| ಎಂ.ಬಿ. ಪುರಾಣಿಕ್, ಟಿ. ಶಂಭು ಶೆಟ್ಟಿ, ಜಗದೀಶ್ ಅಲ್ಸೆ, ಪ್ರಕಾಶ್ ಕ್ರಮಧಾರಿ ಉಪಸ್ಥಿತರಿದ್ದರು. ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರು ಸ್ವಾಗತಿಸಿ, ಪ್ರಸ್ತಾವನೆಗೈದು, ಪರಿಸರ ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ಕೈಗೊಂಡಿರುವ ಈ ಮಹಾ ಅಭಿಯಾನ ಯಶಸ್ಸಿಗೆ ಎಲ್ಲರೂ ಸಹಕರಿಸುತ್ತಿದ್ದಾರೆ. ಆ. 15ರವರೆಗೆ ಅಭಿಯಾನ ನಡೆಯಲಿದೆ. ಶಾಲೆ, ಕಾಲೇಜು, ಆಸ್ಪತ್ರೆ, ಗ್ರಾ. ಪಂ., ದೇವಸ್ಥಾನ, ಭಜನ ಮಂಡಳಿ, ಯುವಕ/ಯುವತಿ ಮಂಡಲಗಳು, ವಿವಿಧ ಒಕ್ಕೂಟ ಮೊದಲಾದ ಸಂಸ್ಥೆಯವರನ್ನು ಸಂಪರ್ಕಿಸಲಾಗಿದ್ದು, ಅವರವರಿಗೆ ಉಪಲಭ್ಯವಿರುವ ಜಾಗದಲ್ಲಿ ಸಾಧ್ಯವಾದಷ್ಟರ ಮಟ್ಟಿಗೆ ಗಿಡ ನೆಡಲು ಮನವಿ ಮಾಡಲಾಗಿದೆ. ಯುಪಿಸಿಎಲ್ ಕೂಡ ಹಲವು ಲಕ್ಷ ಗಿಡ ನೆಡುವ ಭರವಸೆಯನ್ನು ಸಮರ್ಥ ಭಾರತಕ್ಕೆ ನೀಡಿದೆ ಎಂದರು.