Advertisement

ಸಸಿಯಾಗಿ ನಳನಳಿಸುವ ರಕ್ಷಾ”ಬಂಧನ’

06:00 AM Aug 25, 2018 | Team Udayavani |

ಹೊಸದಿಲ್ಲಿ: ರಾಖಿ ಸೀಸನ್‌ ಮುಗಿಯುತ್ತಿದ್ದಂತೆ, ರಕ್ಷಾಬಂಧನದ ಬಾಳಿಕೆಯೂ ಮುಗಿಯುವ ಬದಲಾಗಿ ಹೊಸದೊಂದು ಸಸಿಯಾಗಿ ಅದು ಪುನರ್ಜನ್ಮ ತಾಳಿದರೆ? ಹೌದು. ಉತ್ತರಾಖಂಡದ ಇವಾಲ್‌ ಫೌಂಡೇಷನ್‌ ಇಂಥದ್ದೊಂದು ಬಿತ್ತಿ ಬೆಳೆಯಬಹುದಾದಂಥ ರಾಖಿಗಳನ್ನು ಪರಿಚಯಿಸಿದೆ. ಈ ರಾಖಿಗಳಲ್ಲಿ ಯಾವುದಾದರೂ ಗಿಡದ ಬೀಜವನ್ನು ಇರಿಸಲಾಗಿರುತ್ತವೆ. ರಾಖಿ ಹಬ್ಬದ ಸಂಭ್ರಮ ಮುಗಿಯುತ್ತಿದ್ದಂತೆ ಅದನ್ನು ಮನೆಯ ಅಂಗಳದಲ್ಲಿ ಬಿತ್ತಿ, ಪೋಷಿಸಿದರೆ ಒಂದು ಸುಂದರ ಸಸಿ ಮನೆಯ ಅಂಗಳದಲ್ಲಿ ನಳನಳಿಸುತ್ತದೆ.

Advertisement

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್‌ ರಾಖಿಗಳು ಅದರಲ್ಲೂ ಹೆಚ್ಚಾಗಿ ಚೀನಾದಿಂದ ಬರುತ್ತಿರುವ ರಾಖಿಗಳೇ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ. ನಾವು ತಯಾರಿಸುವ ರಾಖಿ ಉತ್ತರಾಖಂಡದ ಗ್ರಾಮವೊಂದರಲ್ಲಿ ತಯಾರಾಗುತ್ತದೆ. ಗ್ರಾಮಸ್ಥರೇ ಇದನ್ನು ತಯಾರಿಸುತ್ತಾರೆ. ಕಚ್ಚಾವಸ್ತುಗಳೂ ನಮ್ಮ ತೋಟದ್ದೇ ಎಂದು ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next