Advertisement
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಪದೇ ಪದೇ ಭತ್ತವನ್ನು ಬೆಳೆಯಲು ಅತೀಯಾದ ರಸಾಯನಿಕ ಮತ್ತು ನೀರಿನ ಬಳಕೆಯಿಂದ ಒಂದು ಲಕ್ಷ ಹೆಕ್ಟೇರ್ ಭೂಮಿ ಸವಳು-ಜವಳು ಆಗಿದ್ದು ರೈತರು ರಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕವನ್ನು ಬಳಕೆ ಮಾಡುವುದರಿಂದ ಕೃಷಿಯ ಮೇಲೆ ಅಧಿಕ ಖರ್ಚು ಮಾಡುವುದು ಅನಿವಾರ್ಯವಾಗಿದೆ. ಮುಂಗಾರು ಮತ್ತು ಬೇಸಿಗೆ ಸಂದರ್ಭದಲ್ಲಿ ಭತ್ತ ಬೆಳೆಯುವ ಹವ್ಯಾಸವನ್ನು ಕಳೆದ ಮೂರು ದಶಕಗಳಿಂದ ಅಚ್ಚುಕಟ್ಟು ರೈತರು ಅಳವಡಿಸಿಕೊಂಡಿರುವುದರಿಂದ ಸೇಂಗಾ, ಕಬ್ಬು ಬಾಳೆ ಮತ್ತು ಹತ್ತಿ ಬೆಳೆ ಬೆಳೆಯುವುದನ್ನು ಸಂಪೂರ್ಣವಾಗಿ ಕೈ ಬಿಟ್ಟಿದ್ದರಿಂದ ಮರಳಿಯ ಸಕ್ಕರೆ ಕಾರ್ಖಾನೆ, ಆಯಿಲ್ ಮಿಲ್ ಮತ್ತು ಹತ್ತಿ ಮಿಲ್ ಮುಚ್ಚಿವೆ. ಬರೀ ಭತ್ತ ಬೆಳೆಯುವುದರಿಂದ ಭೂಮಿ ಸಂಪೂರ್ಣ ನಾಶವಾಗಿದೆ. ಕೃಷಿ ಇಲಾಖೆ ಕೃಷಿ ವಿವಿ ವಿಶೇಷ ಅಧ್ಯಾಯನ ಮೂಲಕ ಸರಕಾರ ವರದಿ ಸಲ್ಲಿಸಿದ ನಂತರ ರಸಾಯನಿಕ ಗೊಬ್ಬರಕ್ಕೆ ಹಂತ ಹಂತವಾಗಿ ಸಬ್ಸಿಡಿ ಕಡಿಮೆ ಮಾಡಲಾಗುತ್ತಿದೆ.
Related Articles
Advertisement
ಈ ಹಿಂದೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಜಂತ್ರೋಪಾ(ಕಾಣಿಗಿ ಗಿಡ) ಎಲೆ,ಲೆಕ್ಕಿ ಎಲೆ ಮತ್ತು ಸೆಣಬು ಸಸ್ಯವನ್ನು ಭೂಮಿಯಲ್ಲಿ ಬೆಳೆಸಿ ಅದನ್ನು ಕಡಿದು ಭೂಮಿಗೆ ನೀರು ಬಿಟ್ಟು ಕೊಳೆಸಲಾಗುತ್ತಿತ್ತು. ಕಳೆದ ಮೂರು ದಶಕಗಳಿಂದ ಭತ್ತ ಬೆಳೆಯುವ ದಾವಂತದಲ್ಲಿ ರೈತರು ತಿಪ್ಪೆ ಸಗಣಿ ಗೊಬ್ಬರದ ಬದಲಿಗೆ ಸರಕಾರಿ ಗೊಬ್ಬರ ಅತೀಯಾಗಿ ಬಳಕೆ ಮಾಡಿ ಭೂಮಿಯನ್ನು ಬಂಜರು ಮಾಡಿಕೊಂಡಿದ್ದಾರೆ. ಭೂಮಿ ಆರೋಗ್ಯವಾಗಿದ್ದರೆ ಬೆಳೆಯುವ ಅಧಿಕ ಇಳುವರಿ ಬರಲು ಸಾಧ್ಯವಾಗುತ್ತದೆ. ಫಲವತ್ತತೆ ಹೆಚ್ಚಲು ಇದೀಗ ಕೃಷಿ ಇಲಾಖೆ ಹಸಿರೆಲೆಗೊಬ್ಬರ(ಪಿಳ್ಳಿಪಿಸಿರು) ಬೀಜ ವಿತರಣೆಗೆ ಮುಂದಾಗಿದ್ದು ರೈತರು ಸದುಪಯೋಗಪಡಿಸಇಕೊಳ್ಳಬೇಕಿದೆ.
-ಸಂತೋಷ ಪಟ್ಟದ ಕಲ್ಲು ಸಹಾಯಕ ತಾಲೂಕು ಕೃಷಿ ನಿರ್ದೇಶಕರು. ಅತೀಯಾದ ರಸಗೊಬ್ಬರ ಕ್ರಿಮಿನಾಶಕ ಮತ್ತು ನೀರಿನ ಬಳಕೆಯಿಂದ ಮತ್ತು ಪದೇ ಪದೇ ಭತ್ತವನ್ನು ಬೆಳೆಯುವುದರಿಂದ ಸುಮಾರು ಒಂದು ಲಕ್ಷ ಹೆಕ್ಟೇರ್ ಭೂಮಿ ಬರಡಾಗಿದೆ.ಇದರಿಂದ ಮುಂದಿನ ದಿನಗಳಲ್ಲಿ ಪರಿಣಾಮ ಬೀರಲಿದ್ದು ರೈತರು ಮುಂಜಾಗೃತೆ ವಹಿಸದಿದ್ದರೆ ತೊಂದರೆಯಾಗುತ್ತದೆ. ಭತ್ತ ಕಟಾವಿನ ನಂತರ ಹಸಿರೆಲೆಗೊಬ್ಬರ ಸೃಷ್ಠಿ ಮಾಡುವ ಡಯಾಂಚ, ಸೆಣಬು ಸೇರಿ ವಿವಿಧ ಸಸ್ಯಗಳ ಎಲೆಗಳನ್ನು ಗದ್ದೆಯಲ್ಲಿ ಕೊಳೆಸಿ ಅದನ್ನು ಭೂಮಿಯಲ್ಲಿ ಸೇರಿಸಬೇಕು. ಕೃಷಿ ಇಲಾಖೆ ಮತ್ತು ಕೃಷಿ ವಿವಿ ಈಗಾಗಲೇ ಹಲವಾರು ಸೆಮಿನಾರ್‌ಗಳ ಮೂಲಕ ರೈತರಿಗೆ ಮನವರಿಕೆ ಮಾಡಲಾಗಿದೆ. ಮಣ್ಣಿನಲ್ಲಿ ಸಾರಜನಕ ಮತ್ತು ಬಯೀಪಾಸ್ ಹೆಚ್ಚು ಮಾಡಲು ತೇವಾಂಶ ಹೋಗದಂತೆ ತಡೆದು ಕೆಲ ಜೀವಕೋಶ ನಾಶವಾಗದಂತೆ ತಡೆಯಲು ರೈತರು ಹಸಿರೆಲೆ ಗೊಬ್ಬರದ ಬೀಜ ಚಲ್ಲಬೇಕು.
-ಡಾ|ಮಸ್ತಾನರಡ್ಡಿ ಬೇಸಾಯ ಶಾಸ್ತçಜ್ಞರು ಮತ್ತು ಮುಖ್ಯಸ್ಥರು ಕೃಷಿಮಹಾವಿದ್ಯಾಲಯ. – ಕೆ.ನಿಂಗಜ್ಜ