Advertisement

ರಣಜಿ ಸೆಮಿಫೈನಲ್‌ ಆಡುವ ಶಮಿ, ಸಾಹಾ

06:15 AM Dec 15, 2017 | Team Udayavani |

ಕೋಲ್ಕತಾ: ಟೀಮ್‌ ಇಂಡಿಯಾ ಸದಸ್ಯರಾದ ವೃದ್ಧಿಮಾನ್‌ ಸಾಹಾ ಮತ್ತು ಮೊಹಮ್ಮದ್‌ ಶಮಿ ರಣಜಿ ಸೆಮಿಫೈನಲ್‌ನಲ್ಲಿ ಬಂಗಾಲ ತಂಡದ ಪರ ಆಡಲು ಸಜ್ಜಾಗಿದ್ದಾರೆ. ದಿಲ್ಲಿ ವಿರುದ್ಧದ ಈ ಪಂದ್ಯ ತಟಸ್ಥ ತಾಣವಾದ ಪುಣೆಯಲ್ಲಿ ಡಿ. 17ರಿಂದ ಆರಂಭವಾಗಲಿದೆ.

Advertisement

ಸಾಹಾ ಮತ್ತು ಶಮಿ ಅವರನ್ನು ಬಂಗಾಲ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದರಿಂದ ಇಬ್ಬರಿಗೂ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೆಚ್ಚಿನ ಅಭ್ಯಾಸ ಲಭಿಸಿದಂತಾಗಲಿದೆ. ಬಂಗಾಲ ತಂಡವನ್ನು ಮನೋಜ್‌ ತಿವಾರಿ ಮುನ್ನಡೆಸಲಿದ್ದಾರೆ.

ಅಶೋಕ್‌ ದಿಂಡ ಜತೆಗೂಡಿದ ಶಮಿ ರಣಜಿ ಲೀಗ್‌ ಹಂತದಲ್ಲಿ ಉತ್ತಮ ಬೌಲಿಂಗ್‌ ಸಾಧನೆಗೈದಿದ್ದರು. ಉರುಳಿದ 94 ವಿಕೆಟ್‌ಗಳಲ್ಲಿ 48 ವಿಕೆಟ್‌ಗಳನ್ನು ಇವರಿಬ್ಬರೇ ಸೇರಿಕೊಂಡು ಉಡಾಯಿಸಿದ್ದರು.

ಬಂಗಾಲ ತಂಡ: ಮನೋಜ್‌ ತಿವಾರಿ (ನಾಯಕ), ಸುದೀಪ್‌ ಚಟರ್ಜಿ, ಅಭಿಮನ್ಯು ಈಶ್ವರನ್‌, ವೃದ್ಧಿಮಾನ್‌ ಸಾಹಾ, ಶ್ರೀವತ್ಸ ಗೋಸ್ವಾಮಿ, ಅನುಸ್ತೂಪ್‌ ಮಜುಮಾªರ್‌, ಅಭಿಷೇಕ್‌ ರಾಮನ್‌, ಆಮಿರ್‌ ಗನಿ, ಪ್ರದೀಪ್ತ ಪ್ರಾಮಾಣಿಕ್‌, ಅಶೋಕ್‌ ದಿಂಡ, ಮೊಹಮ್ಮದ್‌ ಶಮಿ, ಮುಕೇಶ್‌ ಕುಮಾರ್‌, ಕಾನಿಷ್‌R ಸೇಥ್‌, ಬಿ. ಅಮಿತ್‌, ವೃತ್ತಿಕ್‌ ಚಟರ್ಜಿ.

Advertisement

Udayavani is now on Telegram. Click here to join our channel and stay updated with the latest news.

Next