Advertisement
ಪಣಂಬೂರಿನ ನವ ಮಂಗಳೂರು ಬಂದರು ಸಮೀಪದಲ್ಲೇ ಇರುವ ವಿಶೇಷ ಆರ್ಥಿಕ ವಲಯ (ಎಸ್‌ಇಝಡ್)ದ ಸುಮಾರು 100 ಎಕರೆಗಿಂತಲೂ ಅಧಿಕ ಜಾಗದಲ್ಲಿ ಪ್ರಸ್ತಾವಿತ ಹಸುರು ಹೈಡ್ರೋಜನ್ ಘಟಕ ಅಥವಾ ದಾಸ್ತಾನು ಕೇಂದ್ರ ನಿರ್ಮಾಣಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ.
ಮಂಗಳೂರಿನಲ್ಲಿ ಅರಬಿ ಸಮುದ್ರದ ನೀರು ಲಭ್ಯವಿದ್ದು, ಕಡಲ ತೀರದಲ್ಲಿಯೇ ಘಟಕ ನಿರ್ಮಾಣ ಮಾಡಲು ಅವಕಾಶವಿದೆ. ಜತೆಗೆ ಶೇಖರಣೆಗೆ ಅಗತ್ಯವಿರುವ ಜಾಗ ಸಮೀಪ ದಲ್ಲೇ ಇರುವ ವಿಶೇಷ ಆರ್ಥಿಕ ವಲಯದಲ್ಲಿ ಲಭ್ಯವಾದರೆ ಅನುಕೂಲವಾಗುತ್ತದೆ. ನವಮಂಗಳೂರು ಬಂದರಿನಿಂದ ವಿದೇಶಗಳಿಗೆ ರಫ್ತು ಸುಲಭಸಾಧ್ಯ. ಗ್ರೀನ್ ಹೈಡ್ರೋಜನ್
ಉತ್ಪಾದನ ಘಟಕವನ್ನು ಮಂಗಳೂರಿನಲ್ಲಿ ಆರಂಭಿಸಲು ಕೆಲವು ಕಂಪೆನಿಯವರು ಈಗಾಗಲೇ ಸರ್ವೇ ನಡೆಸಿದ್ದಾರೆ. ರಫ್ತು ಮಾಡಲು ಸುಲಭ ವಾಗುವಂತೆ ನವಮಂಗಳೂರು ಬಂದರು ಸಮೀಪದ ಎಸ್‌ಇಝಡ್ ನಲ್ಲಿಯೇ ಜಾಗ ಪರಿಶೀಲಿಸಿದ್ದಾರೆ. ಅಂತಿಮ ತೀರ್ಮಾನ ಇನ್ನಷ್ಟೇ ಆಗಬೇಕಿದೆ.
Related Articles
Advertisement