Advertisement

ಹಸಿರು ಗಾಜಿನ ಬನಗಳೇ…

04:32 PM Apr 28, 2018 | |

ಅಕ್ವೇರಿಯಂ ಅಂದ್ರೆ ಏನು ಅಂತ ಕೇಳಿದರೆ ಥಟ್ಟನೆ ಎಲ್ಲರೂ ಉತ್ತರ ಹೇಳಿಬಿಡ್ತಾರೆ. ಆದ್ರೆ, ಟೆರೇರಿಯಂ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಬಹುಮಹಡಿ ಕಟ್ಟಡದ ಬೆಂಗಳೂರಿಗರು ಈ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು…

Advertisement

ಗಾರ್ಡನಿಂಗ್‌ ಅಂದ್ರೆ ನಂಗೆ ತುಂಬಾ ಇಷ್ಟ. ಆದ್ರೆ, ಈ ಬೆಂಗ್ಳೂರಲ್ಲಿ ಗಿಡ ಬೆಳೆಸೋಕೆ ಎಲ್ಲಿದೆ ಜಾಗ ಅಂತೀರ. ಹಾಗಾದ್ರೆ ನೀವು ಟೆರೇರಿಯಂ ಮೂಲಕ ಗಿಡ ಬೆಳೆಸಬಹುದು. ಒಂದು ಸಣ್ಣ ಗಾಜಿನ ಹೂಜಿಯೊಳಗೆ ಹಚ್ಚಹಸಿರನ್ನು ಸೃಷ್ಟಿಸುವ ವಿಧಾನವೇ ಟೆರೇರಿಯಂ. ಹೇಗೆ ನೀವು ಮನೆಯೊಳಗೆ ಸಣ್ಣ ಸಣ್ಣ ಕುಂಡಗಳಲ್ಲಿ ಗಿಡ ನೆಟ್ಟಿದ್ದೀರೋ, ಅದೇ ರೀತಿ ಪಾರದರ್ಶಕವಾದ ಗಾಜಿನ ಪಾತ್ರೆಗಳ ಒಳಗೂ ದಟ್ಟವಾಗಿ ಗಿಡ ಬೆಳೆಸಬಹುದು. ಅಕ್ವೇರಿಯಂನಂತೆ, ಟೆರೇರಿಯಂ ಕೂಡ ಅಲಂಕಾರಿಕ ವಸ್ತುವಾಗಿ ಪ್ರಸಿದ್ಧಿ ಪಡೆದಿದೆ.

ಈ ಕುರಿತು ಹೆಚ್ಚಿನ ಮಾಹಿತಿ ನೀಡಲು, ರಿಲಯನ್ಸ್‌ ರೀಟೇಲ್‌ನ ಪ್ರಾಜೆಕ್ಟ್ ಈವ್‌ ವತಿಯಿಂದ, “ದಿ ಶಿ ಸೆಶನ್ಸ್‌’ ಎಂಬ ಟೆರೇರಿಯಂ (ಭೂಚರಾಲಯ) ಕಾರ್ಯಾಗಾರ ನಡೆಯುತ್ತಿದೆ. ಯಾವ ರೀತಿಯ ಗಾಜಿನ ಪಾತ್ರೆಗಳನ್ನು ಉಪಯೋಗಿಸಬಹುದು? ಯಾವ್ಯಾವ ಗಿಡಗಳನ್ನು ಬೆಳೆಸಬಹುದು? ಆ ಗಿಡಗಳಿಗೆ ನೀರು, ಬೆಳಕಿನ ಅಗತ್ಯ ಎಷ್ಟಿರುತ್ತದೆ? ಗಿಡ ಬೆಳೆಯಲು ಯಾವ ರೀತಿಯ ಮಣ್ಣು ಸೂಕ್ತ ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿ ನಿಮಗೆ ಉತ್ತರ ಸಿಗಲಿದೆ.

ಎರಡು ಬಗೆಯ ವಿಧಾನ: ಓಪನ್‌ ಹಾಗೂ ಕ್ಲೋಸ್ಡ್ ಟೆರೇರಿಯಂ ಎಂಬ ಎರಡು ವಿಧಾನಗಳಲ್ಲಿ ಗಿಡ ಬೆಳೆಸಬಹುದು. ತೆರೆದ ಗಾಜಿನ ಪಾತ್ರೆಯಲ್ಲಿ ಕೆಲವು ಜಾತಿಯ ಗಿಡಗಳನ್ನು ಬೆಳೆಸಬಹುದಾಗಿದ್ದು, ಇನ್ನು ಕೆಲವು ಸಸ್ಯಗಳು ಮುಚ್ಚಿದ ಗಾಜಿನೊಳಗೆ ಮಾತ್ರ ಬೆಳೆಯುತ್ತವೆ. ಯಾವ ಸಸ್ಯವನ್ನು ಯಾವ ಪದ್ಧತಿಯಲ್ಲಿ ಬೆಳೆಸಬಹುದು ಎಂಬುದನ್ನು ತಿಳಿಯಲು ಈ ಕಾರ್ಯಾಗಾರಕ್ಕೆ ಬನ್ನಿ. 

ಹಿಂದೆಲ್ಲ ಇದು ಇತ್ತಾ?: ಇತ್ತೀಚೆಗೆ ಪ್ರಚಲಿತಗೊಂಡಿರುವ ಈ ಪದ್ಧತಿಗೆ ಸುದೀರ್ಘ‌ ಇತಿಹಾಸವಿದೆ. 1842ರಲ್ಲಿ ಸಸ್ಯಶಾಸ್ತ್ರಜ್ಞ ನಥಾನಿಯಲ್‌ ಬಾಗಾÏ ವಾರ್ಡ್‌ರ ಪ್ರಯೋಗಾಲಯದಲ್ಲಿ ಮೊದಲ ಬಾರಿಗೆ ಈ ಮಾದರಿಯಲ್ಲಿ ಗಿಡವನ್ನು ಬೆಳೆಸಲಾಯ್ತು. ಬೆಳೆಸಲಾಯ್ತು ಅನ್ನೋದಕ್ಕಿಂತ, ಬೆಳೆಯಿತು ಅಂದರೇ ಹೆಚ್ಚು ಸರಿ. ಯಾಕೆಂದರೆ, ಕೀಟಗಳ ಚಲನವಲನಗಳನ್ನು ಗಮನಿಸಲು ವಾರ್ಡ್‌ ಇಟ್ಟಿದ್ದ ಗಾಜಿನ ಪಾತ್ರೆಯೊಂದರಲ್ಲಿ ಜರೀಗಿಡದ ಬೀಜಕ (ern spore)ವೊಂದು ಗಿಡವಾಗಿ ಬೆಳೆಯಿತು. ಮುಂದೆ ಈ ಕುರಿತು ಹಲವಾರು ಪ್ರಯೋಗಗಳು, ಸಂಶೋಧನೆಗಳು ನಡೆದವು. ಈ ಪದ್ಧತಿಯನ್ನು “ವಾರ್ಡಿಯನ್‌ ಕೇಸ್‌’ ಎನ್ನಲಾಗುತಿತ್ತು.

Advertisement

ಎಲ್ಲಿ?: ಪ್ರಾಜೆಕ್ಟ್ ಈವ್‌, ಜಯನಗರ 4ನೇ ಬ್ಲಾಕ್‌ 
ಯಾವಾಗ?: ಏ.28, ಶನಿವಾರ ಮಧ್ಯಾಹ್ನ 3
ಹೆಚ್ಚಿನ ಮಾಹಿತಿಗೆ: 99000 40911

Advertisement

Udayavani is now on Telegram. Click here to join our channel and stay updated with the latest news.

Next