Advertisement
ಇನ್ನು ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸಾಂಪ್ರದಾಯಿಕ ಶೈಲಿಯ ಹಲವು ಚಿಕನ್ ಡಿಶಸ್ ಗಳು ಜನಪ್ರಿಯಗೊಂಡಿವೆ. ಇದೇ ಸಾಲಿನಲ್ಲಿ ಬರುವ ಗ್ರೀನ್ ಚಿಕನ್ ಚಾಪ್ಸ್ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.ಗ್ರೀನ್ ಚಿಕನ್ ಚಾಪ್ಸ್
ಬೇಕಾಗುವ ಸಾಮಗ್ರಿಗಳು: ಚಿಕನ್ 1 ಕೆ.ಜಿ., ಹಸಿಮೆಣಸು 10, ಚಕ್ಕೆ 2, ಲವಂಗ 7, ಗೋಡಂಬಿ 5, ಬೆಣ್ಣೆ 2 ಚಮಚ ,ಕೊತ್ತಂಬರಿ ಸೊಪ್ಪು 1ಕಟ್ಟು, ಪುದೀನಾ ಸೊಪ್ಪು 1 ಕಟ್ಟು , ಮೊಸರು 1 ಕಪ್, ಎಣ್ಣೆ 2 ಚಮಚ, ಈರುಳ್ಳಿ 4 , ಶುಂಠಿ-ಬೆಳ್ಳುಳ್ಳಿ ಪೇಸ್ಟ್ 3 ಚಮಚ, ಅರಿಶಿನ ಪುಡಿ 2 ಚಮಚ, ಧನಿಯಾ ಪುಡಿ 2 ಚಮಚ, ತುಪ್ಪ 3 ಚಮಚ, ಗರಂ ಮಸಾಲ ಪುಡಿ 1 ಚಮಚ, ಪೆಪ್ಪರ್ ಪುಡಿ 1ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಚಿಕನ್ ಚಾಪ್ಸ್ ಗೆ ಮೊದಲು ಮಸಾಲವನ್ನು ತಯಾರಿಸಬೇಕು. ಮಿಕ್ಸಿ ಜಾರಿಗೆ ಹಸಿಮೆಣಸು, ಚಕ್ಕೆ, ಲವಂಗ, ಗೋಡಂಬಿ , ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಮತ್ತು ಮೊಸರನ್ನು ಹಾಕಿ ಚೆನ್ನಾಗಿ ನುಣ್ಣಗೆ ಆಗುವವರೆಗೆ ರುಬ್ಬಿಕೊಳ್ಳಿ. ನಂತರ ಚಿಕನ್‌ನ್ನು ನೀರಿನಲ್ಲಿ ತೊಳೆದು ನಿಮಗೆ ಬೇಕಾಗುವ ರೀತಿಯಲ್ಲಿ ಕಟ್ ಮಾಡಿಕೊಳ್ಳಿ. ತದನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವ ತನಕ ಫ್ರೈ ಮಾಡಿ. ಆಮೇಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಚಿಕನ್,ಅರಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸುಮಾರು 5 ರಿಂದ 10 ನಿಮಿಷ ಹಾಗೇ ಬಿಡಿ. ಆಮೇಲೆ ರುಬ್ಬಿಟ್ಟ ಮಸಾಲೆ ಮತ್ತು ಧನಿಯಾ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸುಮಾರು 15 ರಿಂದ 20 ನಿಮಿಷಗಳವರೆಗೆ ಬೇಯಿಸಿರಿ. ನಂತರ ಬೆಣ್ಣೆ ಅಥವಾ ತುಪ್ಪ ,ಗರಂ ಮಸಾಲ,ಪೆಪ್ಪರ್ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. 5 ನಿಮಿಷಗಳ ಕಾಲ ಹಾಗೇ ಬಿಡಿ .ರುಚಿಕರವಾದ ಗ್ರೀನ್ ಚಿಕನ್ ಚಾಪ್ಸ್ ಚಪಾತಿ,ನಾನ್ ಹಾಗೂ ಅನ್ನ ಜೊತೆಗೂ ಸಹ ಸವಿಯಬಹುದು.