Advertisement

ಕಡಿಮೆ ವೇತನ ಇದ್ದರೂ ಸಿಗಲಿದೆ ಗ್ರೀನ್‌ ಕಾರ್ಡ್‌

01:31 AM Jan 23, 2021 | Team Udayavani |

ವಾಷಿಂಗ್ಟನ್‌: ಡೆಮಾಕ್ರಾಟ್‌ನ ಜೋ ಬೈಡೆನ್‌ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಲೇ ಅಮೆರಿಕದಲ್ಲಿ ವಲಸಿಗರಿಗೆ ಕೆಂಪುಹಾಸಿನ ಸ್ವಾಗತ ಸಿಗುವ ಎಲ್ಲ ಲಕ್ಷಣಗಳೂ ಗೋಚರಿಸಿವೆ. ಅಷ್ಟೇ ಅಲ್ಲ, ಅಮೆರಿಕದಲ್ಲಿರುವ ಸಾವಿರಾರು ಭಾರ ತೀಯ ಐಟಿ ವೃತ್ತಿಪರರು, ಹಲವು ದಶಕ ಗಳಿಂದಲೂ ಕಾನೂನಾತ್ಮಕ ಖಾಯಂ ವಾಸ ಪ್ರಮಾಣಪತ್ರಕ್ಕಾಗಿ ಕಾಯುತ್ತಿರುವವರಿಗೂ ಹೊಸ ಆಶಾಕಿರಣ ಮೂಡಿದೆ.

Advertisement

46ನೇ ಅಧ್ಯಕ್ಷರಾಗಿ ಪ್ರಮಾಣ ಸ್ವೀಕ ರಿಸಿದ ಕೆಲವೇ ಗಂಟೆಗಳಲ್ಲಿ ಬೈಡೆನ್‌, ತಮ್ಮ ಮಹತ್ವಾಕಾಂಕ್ಷಿ ವಲಸೆ ಸುಧಾರಣಾ ಮಸೂದೆಯನ್ನು ಕಾಂಗ್ರೆಸ್‌ನ ಅನುಮೋ ದನೆಗೆ ಕಳುಹಿಸಿಕೊಟ್ಟಿದ್ದಾರೆ. ಯುಎಸ್‌ ನಾಗರಿಕತ್ವ ಕಾಯ್ದೆ 2021 ಎಂಬ ಹೆಸರಿನ ಮಸೂದೆ ಇದಾಗಿದೆ.

ಕಡಿಮೆ ವೇತನವಿದ್ದರೂ ಗ್ರೀನ್‌ಕಾರ್ಡ್‌: ಹೊಸ ಮಸೂದೆಯಿಂದಾಗಿ ಕುಟುಂಬ ಆಧಾರಿತ ವಲಸೆ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆಯಾಗಲಿದೆ. ವೀಸಾಗಾಗಿ ದೀರ್ಘಾವಧಿಯ ಕಾಯುವಿಕೆ ತಪ್ಪಲಿದೆ, ಪ್ರತೀ ದೇಶಕ್ಕೆ ವಿಧಿಸಲಾಗುತ್ತಿದ್ದ ವೀಸಾ ಮಿತಿಯೂ ಏರಿಕೆಯಾಗಲಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಲ್ಲದೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌, ಗಣಿತ ಮತ್ತಿತರ ಕ್ಷೇತ್ರಗಳಲ್ಲಿ ಪದವಿಯನ್ನು ಅಮೆರಿಕದ ವಿವಿಗಳಲ್ಲಿ ಪೂರೈಸಿದವರು ಅಮೆರಿಕದಲ್ಲೇ ಉಳಿಯಲೂ ಅವಕಾಶ ಸಿಗಲಿದೆ. ಕಡಿಮೆ ವೇತನ ಹೊಂದಿರು ವವರೂ ಗ್ರೀನ್‌ ಕಾರ್ಡ್‌ ಹೊಂದುವ ಅವಕಾಶವನ್ನು ಪಡೆಯಲಿದ್ದಾರೆ.ಇದೇ ವೇಳೆ, ಈ ಮಸೂದೆಯ ಕುರಿತು ರಿಪಬ್ಲಿ ಕನ್‌ ಪಕ್ಷದ ಕೆಲವು ಸಂಸದರು ಆಕ್ಷೇಪ ವನ್ನೂ ವ್ಯಕ್ತಪಡಿಸಿದ್ದು, ಮಸೂದೆಯು ಸಾಕಷ್ಟು ಗಡಿ ಭದ್ರತಾ ನಿಯಮಗಳನ್ನು ಒಳಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಅನುಕೂಲಗಳೇನು? :

  • ಕಡಿಮೆ ವೇತನ ಇರುವವರಿಗೂ ಗ್ರೀನ್‌ಕಾರ್ಡ್‌ ಸೌಲಭ್ಯ
  • ಅಮೆರಿಕ ವಿವಿಯ ಪದವೀಧರರಿಗೆ ದೇಶದಲ್ಲೇ ಉಳಿಯಲು ಅವಕಾಶ
  • ಧರ್ಮಾಧಾರಿತ ತಾರತಮ್ಯಕ್ಕೆ ಕಡಿವಾಣ
  • ವಲಸೆ ನೀತಿ ಜಾರಿಗೆ ಹೆಚ್ಚುವರಿ ಅನುದಾನ

ಮಸೂದೆಯಲ್ಲಿರುವ ಅಂಶಗಳೇನು? :

  • ದಾಖಲೆರಹಿತ ವಲಸಿಗರಿಗೆ ಕಾನೂನಾತ್ಮಕ ಸ್ಥಾನಮಾನ ಮತ್ತು ನಾಗರಿಕತ್ವ ನೀಡುವುದು. ಇದಕ್ಕಾಗಿ ವಲಸಿಗರು 2021ರ ಜ.1ರಂದು ಅಥವಾ ಅದಕ್ಕೂ ಮುನ್ನವೇ ಅಮೆರಿಕಕ್ಕೆ ಬಂದವರಾಗಿರಬೇಕು
  • ಆರಂಭದಲ್ಲಿ ಈ ವಲಸಿಗರಿಗೆ ಕೆಲಸದ ಪರವಾನಿಗೆ ಹಾಗೂ ವಿದೇಶಕ್ಕೆ ತೆರಳಲು ಅನುಮತಿಯನ್ನೂ ನೀಡಲಾಗುತ್ತದೆ. ಒಮ್ಮೆ ದೇಶ ಬಿಟ್ಟು ಹೋದರೆ ಮತ್ತೆ ದೇಶದೊಳಕ್ಕೆ ಬರಲು ಅನುಮತಿಯೂ ಸಿಗುತ್ತದೆ
  • ಅವರು ಸರಿಯಾಗಿ ತೆರಿಗೆ ಪಾವತಿಸುತ್ತಿದ್ದರೆ, 5 ವರ್ಷಗಳ ಬಳಿಕ ಅವರ ಹಿನ್ನೆಲೆಗಳ ಪರಿಶೀಲನೆ ನಡೆಸಿ ಗ್ರೀನ್‌ಕಾರ್ಡ್‌ ನೀಡಲಾಗುತ್ತದೆ.
  • 3 ವರ್ಷಗಳ ಕಾಲ ಗ್ರೀನ್‌ ಕಾರ್ಡ್‌ ಹೊಂದಿ, ಹೆಚ್ಚುವರಿ ಹಿನ್ನೆಲೆ ಪರೀಕ್ಷೆಯಲ್ಲಿ ಪಾಸಾದರೆ, ಅಂಥವರು ಅಮೆರಿಕದ ಪೌರತ್ವಕ್ಕೂ ಅರ್ಜಿ ಹಾಕಬಹುದು
Advertisement
Advertisement

Udayavani is now on Telegram. Click here to join our channel and stay updated with the latest news.

Next