Advertisement
ಶಾಶ್ವತ ನೀರಾವರಿ ಯೋಜನೆಗಳು ಇಲ್ಲ. ಕೇವಲ ಕೆರೆಗಳು ಮತ್ತು ಕುಂಟೆಗಳು ಇದ್ದರೂ ಸಹ ಇರುವ ಅಲ್ಪಸಲ್ಪದ ನೀರಿನಲ್ಲಿ ರೈತ ಬೆಳೆ ಬೆಳೆಯಬೇಕು. ಮಳೆ ಇಲ್ಲದಿರುವುದರಿಂದ ಕೆರೆಗಳನ್ನು ಸಹ ನೀರು ಇಲ್ಲದೆ ಬತ್ತಿ ಹೋಗುತ್ತಿದೆ.
Related Articles
Advertisement
ಹುರುಳಿಕಾಯಿ ಬೆಳೆಗೆ ಹೆಚ್ಚು ನೀರು ಅವಶ್ಯಕತೆ: ಈಗ ಬೇಸಿಗೆ ಹೆಚ್ಚಾಗಿರುವುದರಿಂದ ಹುರುಳಿಕಾಯಿಗೆ ನೀರು ಒದಗಿಸಲು ರೈತರಿಗೆ ಕಷ್ಟವಾಗುತ್ತಿದೆ. ಬಿತ್ತನೆ ಮಾಡಿ ಒಂದುವರೆ ಅಥವಾ ಎರಡು ತಿಂಗಳಲ್ಲಿ ಹುರುಳಿಕಾಯಿ ಬೆಳೆ ಬರುತ್ತದೆ. ಇದಕ್ಕೆ ಹೆಚ್ಚಾಗಿ ನೀರಿನ ಅವಶ್ಯಕತೆ ಇರುತ್ತದೆ. ಒಂದು ವೇಳೆ ನೀರು ಕಡಿಮೆಯಾದರೆ ಹುರುಳಿ ಕಾಯಿ ಕಟ್ಟು ವುದಿಲ್ಲ. ಸಮಯಕ್ಕೆ ಸರಿಯಾಗಿ ಕೊಯ್ಲು ಮಾಡಬೇಕು. ಒಂದು ದಿನ ತಡವಾದರೂ ಗಿಡದಲ್ಲೇ ಕಾಯಿ, ಬಲಿಯುತ್ತವೆ. ಇದಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಇರೋದಿಲ್ಲ.
ಬಿಸಿಲಿಗೆ ಬಾಡುತ್ತಿರುವ ತರಕಾರಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಹುರುಳಿಕಾಯಿ ಬೆಳೆಯಲಾಗುತ್ತದೆ. ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತದೆ ಬೆಂಗಳೂರಿಗೆ ಈ ಭಾಗದಿಂದ ಹೆಚ್ಚಿನ ಮಾಲು ಬರುತ್ತೆ. ಮಾರುಕಟ್ಟೆಗಳಲ್ಲಿ ಮಾಲು ಕಡಿಮೆ ಬರುತ್ತಿದ್ದು ಬೆಲೆ ಏರಿಕೆಯಾಗಿದೆ. ಉತ್ತಮ ಮಳೆಯಾದರೆ ರೈತರು ಬೆಳೆ ಬೆಳೆಯಲು ಮುಂದಾಗುತ್ತಾರೆ. ಅಲ್ಲಿಯವರೆಗೂ ಬೆಲೆ ಇಳಿಕೆಯಾಗುವುದಿಲ್ಲ. ಮಾರು ಕಟ್ಟೆಯಲ್ಲಿ ಎಷ್ಟೇ ತಾಜಾ ತರಕಾರಿ ತಂದರು ಬಿಸಿಲಿಗೆ ಬಾಡಿ ಹೋಗುತ್ತವೆ. ಒಂದು ವೇಳೆ ವ್ಯಾಪಾರ ವಾದರೆ ಪರವಾಗಿಲ್ಲ. ಹಾಗೆ ಉಳಿದರೆ ಬೆಂಡಾಗಿ ಹೋಗುತ್ತದೆ. ಗ್ರಾಹಕರು ಕೇಳುವುದಿಲ್ಲ ಏನು ಮಾಡುವುದು ಎಂದು ಚಿಲ್ಲರೆ ತರಕಾರಿ ವ್ಯಾಪಾರಿಗಳು ಹೇಳುತ್ತಾರೆ. ಕಳೆದ ಕೆಲ ತಿಂಗಳುಗಳ ಹಿಂದೆ ಟೊಮೋಟೋಗೆ ಬೆಲೆ ಏರಿಗೆಯಾಗಿದೆ.
ಬಾರಿ ಸದ್ದು ಮಾಡಿದ್ದು. ಇದೀಗ ಹುರುಳಿಕಾಯಿ ಸರದಿ ಪ್ರಾರಂಭವಾಗಿದೆ. ಬಾರಿ ಬಿಸಿಲು ಹಾಗೂ ವಿದ್ಯುತ್ ಸಮಸ್ಯೆಯಿಂದ ರೈತರು ಇರುವ ತೋಟ ಉಳಿಸಿಕೊಂಡರೆ ಸಾಕು ಎಂದು ಯಾರೂ ತರಕಾರಿ ಬೆಳೆಯಲು ಮುಂದಾಗದ ಕಾರಣ ಉತ್ಪಾದನೆ ಕುಂಠಿತವಾಗಿದ್ದು. ತರಕಾರಿ ಬೆಲೆ ಏರುತ್ತಲೇ ಇದೆ.
ಬೇಸಿಗೆಯಲ್ಲಿ ಹುರುಳಿಕಾಯಿ ಬೆಳೆಯಲು ಕಷ್ಟವಾಗುತ್ತದೆ. ಈ ಬೆಳೆಗೆ ಹೆಚ್ಚಿನ ನೀರನ್ನು ಹಾಯಿ ಸಬೇಕು. ಇಲ್ಲದಿದ್ದರೆ ಉತ್ತಮ ಇಳುವರಿ ಬರುವುದಿಲ್ಲ. ಮಳೆ ಇಲ್ಲದೆ ರೈತರು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹುರುಳಿಕಾಯಿ ಬೆಲೆ ಏರಿಕೆಯ ಕಂಡಿದೆ. ●ವಿಜಯಕುಮಾರ್, ರೈತ
ಪ್ರತಿಯೊಂದು ತರಕಾರಿ ಬೆಲೆ ಏರಿಕೆ ಕಂಡಿದೆ. ಮಳೆ ಇಲ್ಲದಿರುವುದು. ಹಾಗೂ ಬಿಸಿಲಿನ ತಾಪಮಾನಕ್ಕೆ ಮಾರುಕಟ್ಟೆಗಳಲ್ಲಿ ಹುರುಳಿಕಾಯಿ ಸಮರ್ಪಕವಾಗಿ ಬರುತ್ತಿಲ್ಲ. ವಿವಿಧ ಮಾರುಕಟ್ಟೆಗಳಿಗೆ ತೆರಳಿ ಹುರುಳಿಕಾಯಿ ತಂದು ಮಾರಾಟ ಮಾಡಲಾಗುತ್ತಿದೆ. ●ಆನಂದ್, ತರಕಾರಿ ವ್ಯಾಪಾರಿ
– ಎಸ್.ಮಹೇಶ್