Advertisement

“ಸಮಾಜ ಪರಿವರ್ತನೆಯಲ್ಲಿ ಮಹಿಳೆಯರ ಪಾತ್ರ ಮಹತ್ತರ’

11:11 PM Jan 24, 2020 | mahesh |

ಬೆಳ್ತಂಗಡಿ: ಸಮಾಜ ಪರಿವರ್ತನೆಯಲ್ಲಿ ಮಹಿಳೆಯರ ಪಾತ್ರ ಮಹತ್ತರ. ಹೆಣ್ಣು ಸಂಸ್ಕಾರ – ಸಂಸ್ಕೃತಿಯನ್ನು ಅರಿತು ಸಮಾಜದಲ್ಲಿ ಗೌರವ ಸಂಪಾದನೆ ಮಾಡಬೇಕು. ಲೈಂಗಿಕ ದೌರ್ಜನ್ಯ ತಡೆಗೆ ಹೆಣ್ಣು ಮಕ್ಕಳು ಆತ್ಮರಕ್ಷಣೆ ಕಲೆಯನ್ನು ಸಿದ್ಧಿಸಿಕೊಳ್ಳಬೇಕು ಎಂದು ಜಿ.ಪಂ. ಸದಸ್ಯೆ ಸೌಮ್ಯಲತಾ ಜಯಂತ್‌ ಗೌಡ ಹೇಳಿದರು.

Advertisement

ದ.ಕ. ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾ.ಪಂ., ಪ.ಪಂ., ಸ್ತ್ರೀ ಶಕ್ತಿ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಬೆಳ್ತಂಗಡಿ ಆಶ್ರಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ಸಲುವಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಶುಕ್ರವಾರ ಮಿನಿ ವಿಧಾನಸೌಧದಲ್ಲಿ ನಡೆದ ಜಾಥಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ತಾ.ಪಂ. ಸದಸ್ಯರಾದ ಗೋಪಿನಾಥ್‌ ನಾಯಕ್‌, ವಿಜಯ ಗೌಡ, ಕೇಶವತಿ, ವಿನೂಷಾ ಪ್ರಕಾಶ್‌, ಜಯಶೀಲಾ, ಸುಶೀಲಾ, ತಾಲೂಕು ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಶಾಂತಾ ಬಂಗೇರ, ಉ± ‌ತಹಶೀಲ್ದಾರ್‌ ಅನಂತಪದ್ಮನಾಭ, ಪ.ಪಂ. ಮುಖ್ಯಾಧಿಕಾರಿ ಸುಧಾಕರ್‌, ಬೆಳಾಲು ಪಿಡಿಒ ಮೋಹನ ಬಂಗೇರ, ಮಹಿಳಾ – ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು, ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು, ಸ್ತ್ರೀ ಶಕ್ತಿ ಸಂಘ ಟನೆಯ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಪ್ರಿಯಾ ಆಗ್ನೇಸ್‌ ಅವರು ಪ್ರಸ್ತಾವಿಸಿ, ಸ್ವಾಗತಿಸಿ ದರು. ಪಿಡಿಒ ಮೋಹನ ಬಂಗೇರ ಕಾರ್ಯಕ್ರಮ ನಿರೂಪಿಸಿ, ಮೇಲ್ವಿಚಾರಕಿ ಸುಲೋಚನಾ ವಂದಿಸಿದರು.

ಪ್ರತಿಜ್ಞಾ ವಿಧಿ
ಮಿನಿ ವಿಧಾನಸೌಧ ಮುಂಭಾಗ ದಲ್ಲಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಜಾಥಾಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಜಾಥಾ ಬಗ್ಗೆ, ಮತದಾನ ಜಾಗೃತಿ ವಿಚಾರವಾಗಿ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next