ಮೊಟ್ಟೆ ಇಡುವ ಜಾಗವನ್ನು ಹೆಣ್ಣು ಹಕ್ಕಿ ಗುರುತಿಸಿ, ಗೂಡು ಕಟ್ಟುತ್ತದೆ. ಆನಂತರ ಮೊಟ್ಟೆಗೆ ಕಾವು ಕೊಡುವ ಮತ್ತು ಅದನ್ನು ರಕ್ಷಿಸುವ ಹೊಣೆಯನ್ನು ಗಂಡು ಹಕ್ಕಿ ಹೊತ್ತುಕೊಳ್ಳುತ್ತವೆ. ಗಾತ್ರದಲ್ಲಿ ಗಂಡಿಗಿಂತ ಹೆಣ್ಣು ಹಕ್ಕಿಯೇ ದೊಡ್ಡದಾಗಿರುತ್ತದೆ.
Advertisement
ಉರುಟಾದ ಕಾಡು ಕೋಳಿಯನ್ನು ತುಂಬಾ ಹೋಲುವ ಹಕ್ಕಿ ಇದು. ಎಷ್ಟೋ ಜನಕ್ಕೆ ಇದು ಕಾಡುಕೋಳಿಯೇ ಇರಬೇಕು ಅನ್ನೋ ಅನುಮಾನ ಇತ್ತು. ಆದರೆ ಸೂಕ್ಷವಾಗಿ ಗಮನಿಸಿದಾಗ ಇದು ಪ್ರತ್ಯೇಕ ಗುಂಪಿನ ಕುಟುಂಬಕ್ಕೆ ಸೇರಿದ ಬಣ್ಣದ ಪಟ್ಟೆ ಇರುವ ಚಿಕ್ಕ ಹಕ್ಕಿ ಎಂದು ತಿಳಿಯಿತು.
Related Articles
Advertisement
ಈ ಹಕ್ಕಿಯ ಎದೆಯ ಮೇಲೆ ಹಾರದಂತೆ ಬಿಳಿ ಬಣ್ಣದ ರೇಖೆ ಇದೆ. ದೊಡ್ಡ ಬಣ್ಣದ ಗೊರವ ಇತರ ಗೊರವ ಹಕ್ಕಿಗಿಂತ ಭಿನ್ನಾವಾಗಿದೆ. ಇತರ ಗೊರವ ಹಕ್ಕಿಗೆ ಚಿಕ್ಕ ಕಾಲಿರುತ್ತದೆ. ಆದರೆ ದೊಡ್ಡ ಗೊರವ ಬಣ್ಣದ ಹಕ್ಕಿಗೆ ಉದ್ದ ಕಾಲಿದೆ. ಕಾಲು ಹಳದಿ ಛಾಯೆಹಸಿರು ಬಣ್ಣದಿಂದ ಕೂಡಿದೆ. ಹಾರುವಾಗ ಹಾಗೂ ಇದನ್ನು ನೋಡುವಾಗ ಅದಕ್ಕಿಂತ ಪ್ರತ್ಯೇಕ ಲಕ್ಷಣ ಇರುವುದನ್ನು ನೋಡಿ ಇದನ್ನು ಸುಲಭವಾಗಿ ಗುರುತಿಸ ಬಹುದು. ಹೆಣ್ಣು ಹಕ್ಕಿ ಹೆಚ್ಚು ಗಾಢ ಬಣ್ಣದಿಂದ ಕೂಡಿದ್ದು ಗಂಡಿಗಿಂತ ದೊಡ್ಡದಾಗಿರುತ್ತದೆ. ಗಂಡು ಹಕ್ಕಿಯ ಬಣ್ಣ ಸ್ವಲ್ಪ ಮಂಕಾಗಿರುತ್ತದೆ. ದೇಹದ ಮೇಲಿರುವ ಚಿತ್ತಾರ- ಎರಡೂ ಹಕ್ಕಿಯಲ್ಲಿ ಒಂದೇರೀತಿ ಇರುವುದು. ಇದು ಹಾಡು ಹಕ್ಕಿಯಲ್ಲ. ಆದರೂ ಗಂಡು ಹಕ್ಕಿ ಮರಿಮಾಡುವ ಸಮಯದಲ್ಲಿ ಶ್ರಿಲ್, ಟರಿಲ ಎಂಬ ದನಿ ಹೊರಡಿಸುತ್ತದೆ. ಹೆಣ್ಣು ಅದರೊಟ್ಟಿಗೆ ಕ್ರೋಕ್ ದನಿ ಹೊರಡಿಸಿ ಸಂಭಾಷಿಸುತ್ತದೆ.
ಕೆಸರು ಪ್ರದೇಶ, ನದೀ ತೀರದ ಭಾಗ, ಭತ್ತದ ಗದ್ದೆ ಇರುವ ಕೆಸರು ಪ್ರದೇಶದಲ್ಲಿ ಸದಾ ಮಣ್ಣು ಕೆದಕುತ್ತಾ ಕೆಸರಿನಲ್ಲಿ ಕುಕ್ಕಿ ಕುಕ್ಕಿ ಅಲ್ಲಿರುವ ಮಣ್ಣಿನ ಹುಳ ಮತ್ತು ಎರೆಹುಳದ ಮೊಟ್ಟೆಯನ್ನು ಚಿಕ್ಕ ಕ್ರಿಮಿಯನ್ನು ಆಯ್ದು ತಿನ್ನುವುದು. ಇದು ಸಮುದ್ರ ತೀರ, ಗಜನಿ ಕೆಸರು. ನದೀ ತೀರ, ಭತ್ತದ ಗದ್ದೆ ಯಲ್ಲಿ ಜೋಡಿಯಾಗಿ ಇಲ್ಲವೇ 10-12ರ ಗುಂಪಿನಲ್ಲಿ ಇರುತ್ತದೆ. ಇದು ತುಂಬಾ ಸೂಕ್ಷ್ಮ ಸ್ವಭಾವದ ಹಕ್ಕಿ. ಮನುಷ್ಯರ ಸುಳಿವು ಸಿಕ್ಕ ತಕ್ಷಣ ಬಹುಬೇಗ ಹಾರಿ ದೂರ ಹೋಗುವುದು.
ಮೊಟ್ಟೆ ಇಡುವ ಜಾಗವನ್ನು -ಹೆಣ್ಣು ಹಕ್ಕಿ ನಿರ್ಧರಿಸುವುದು. ಹೀಗೆ ಗೂಡು ಮಾಡುವ ಜಾಗ ನಿರ್ಧಾರವಾದ ನಂತರ ಮೊಟ್ಟೆ ರಕ್ಷಣೆ ಮತ್ತು ಕಾವುಕೊಡುವ ಕಾರ್ಯವನ್ನು ಗಂಡು ನಿರ್ವಹಿಸುತ್ತದೆ. ಕೆಲವೊಮ್ಮೆ ಮೃದ್ವಂಗಿಗಳನ್ನು ಭತ್ತ ಮತ್ತು ಹುಲ್ಲಿನ ಬೀಜಗಳನ್ನು ಸಹ ತಿನ್ನುತ್ತದೆ. ಹೆಚ್ಚಾಗಿ, ಶೀತ ಪ್ರದೇಶಗಳಲ್ಲಿ ಈ ಹಕ್ಕಿ ಗೂಡು ನಿರ್ಮಿಸಿ, ಮರಿ ಮಾಡುತ್ತದೆ.
ಪಿ.ವಿ.ಭಟ್ ಮೂರೂರು