Advertisement

ಗೊಲ್ಲರಹಟ್ಟಿ ಅಭಿವೃದ್ಧಿಗೆ ಹೆಚ್ಚಿನ ಒತ್ತು

01:58 PM Sep 18, 2019 | Suhan S |

ಮಧುಗಿರಿ: ತಾಲೂಕಿನ ಕುರಿ ಸಾಕಣಿಕೆ ಮಾಡುವ ಗೊಲ್ಲರಹಟ್ಟಿಯ ಬಂಧುಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಎಲ್ಲ ಕ್ರಮಕೈಗೊಳ್ಳಲಾಗುವುದು. ಪ್ರತಿಯೊಬ್ಬರೂ ಸರ್ಕಾರದ ಸೌಲಭ್ಯಗಳನ್ನು ಪಡೆದು ಸ್ವಯಂ ಅಭಿವೃದ್ಧಿಗೆ ಪಣತೊಡಬೇಕು ಎಂದು ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು.

Advertisement

ಪಟ್ಟಣದ ಪಶು ಇಲಾಖೆ ಕಚೇರಿ ಆವರಣದಲ್ಲಿ ಪಶು ಇಲಾಖೆ, ಪಶು ವೈದ್ಯಕೀಯ ಇಲಾಖೆ ಹಾಗೂ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಸಂಚಾರ, ಅರೆ ಸಂಚಾರ ಕುರಿ ಸಾಕಣೆದಾರರಿಗೆ ಉಚಿತವಾಗಿ ತಾತ್ಕಾಲಿಕ ಟೆಂಟ್ ಹಾಗೂ ಇತರೆ ಸಾಮಗ್ರಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುರಿ-ಕೋಳಿ ಸಾಕಾಣಿಕೆಯಿಂದ ಆರ್ಥಿಕ ಲಾಭ: ಭೀಕರ ಬರಗಾರದಿಂದಾಗಿ ಬೇಸಾಯ ನಷ್ಟದಲ್ಲಿದೆ. ಹೀಗಾಗಿ ರೈತರು ಹಸು, ಕುರಿ, ಮೇಕೆ, ಕೋಳಿ ಸಾಕಾಣಿಕೆಯಿಂದ ಆರ್ಥಿಕ ಪ್ರಗತಿ ಸಾಧಿಸಬೇಕು. ಹಿಂದಿನ ಸರ್ಕಾರದ ಅವಧಿಯಲ್ಲಿ ಇಂತಹ ಸೌಲಭ್ಯ ಗಳು ಇರಲಿಲ್ಲ. ಕುರಿ ಸಾಕಾಣಿಕೆಗೆ ಬಹಳಷ್ಟು ಪರಿಶ್ರಮದ ಅಗತ್ಯವಾಗಿದೆ. ಸೋಮಾರಿಗಳಾದೇ ಸರ್ಕಾರದ ಸಬ್ಸಿಡಿ ಹಣಕ್ಕೆ ಮನಸೋಲದೆ ಕಷ್ಟಪಟ್ಟು ಕುರಿ ಸಾಕಾಣಿಕೆ ಮಾಡುವುದಾದರೆ ನಾನೇ ಖುದ್ದು ನಿಂತು, ನಿಮಗೆ ಬ್ಯಾಂಕಿನಿಂದ ಸಾಲ ಮಂಜೂರು ಮಾಡಿಸಿಕೊಡುತ್ತೇನೆ. ಇಲಾಖೆಯ ಕಾರ್ಯಕ್ರಮವು ಅರ್ಹ ಪ್ರತಿಯೊಬ್ಬ ಫ‌ಲಾನುಭವಿಗೂ ಸೌಲಭ್ಯ ತಲುಪಬೇಕು ಎಂದು ಹೇಳಿದರು.

ಅರ್ಹ ಫ‌ಲಾನುಭವಿಗಳ ಆಯ್ಕೆಯಾಗಲಿ: ಸರ್ಕಾರದ ಸೌಲಭ್ಯಗಳು ಅನರ್ಹರಿಗೆ ತಲುಪ ಬಾರದು. ಆದರೆ ಅರ್ಹರು ಇಂತಹ ಯೋಜನೆ ಗಳಿಂದ ವಂಚಿತರಾಗಬಾರದು. ಹೀಗಾಗಿ ಅರ್ಹ ಫ‌ಲಾನುಭವಿಗಳ ಆಯ್ಕೆಗೆ ಸ್ಥಳೀಯ ಜನಪ್ರತಿ ನಿಧಿಗಳಿಗೂ ಮಾಹಿತಿ ನೀಡದೆ, ಒಂದೇ ಹೋಬಳಿಯ ಫ‌ಲಾನುಭವಿಗಳ ಆಯ್ಕೆ ಮಾಡಿರುವುದು ಸರಿಯಲ್ಲ. ಉಳಿದ 5 ಹೋಬಳಿಯ ಕುರಿಗಾಹಿಗಳ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಮುಂದಿನ ಬಾರಿ ತಿಳಿಸಿ ಪಟ್ಟಿ ಅಂತಿಮಗೊಳಿಸಬೇಕು. ಜತೆಗೆ ಮಧ್ಯವರ್ತಿಗಳಿಗೆ ಅವಕಾಶ ನೀಡದಂತೆ ಸೌಲಭ್ಯವನ್ನು ವಿತರಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕುರಿ-ಮೇಕೆ ಸಾಕಾಣಿಕೆಗೆ ಒತ್ತು ನೀಡಿ: ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ನಿರ್ದೇಶಕ ಡಾ.ಕೆ.ನಾಗಣ್ಣ ಮಾತನಾಡಿ, ಉಪವಿಭಾಗ ಸತತ ಬರಗಾಲದಿಂದ ತತ್ತರಿಸಿದೆ. ಇಲ್ಲಿನ ರೈತರು ಕುರಿ-ಮೇಕೆ ಸಾಕಣೆಗೆ ಹೆಚ್ಚು ಒತ್ತು ನೀಡಬೇಕು. ಆಧುನಿಕ ಬೇಸಾಯದಿಂದ ಅಂರ್ತಜಲ ಬರಿದಾಗಿದೆ. ಕೆರೆ-ಕಟ್ಟೆಗಳಲ್ಲಿ ನೀರಿಲ್ಲ. ಆದ್ದರಿಂದ ಶಾಸಕರು ನರೇಗಾದಲ್ಲಿ ಕರಿಗಳಿಗೆ ನೀರಿನ ತೊಟ್ಟಿ ನಿರ್ಮಿಸಲು ಮುಂದಾಗಬೇಕು. ಶಿರಾದಲ್ಲಿ 26 ಕೋಟಿ ವೆಚ್ಚದಲ್ಲಿ ಕುರಿ ವಧಾಗಾರ ಸ್ಥಾಪನೆ ಯಾಗುತ್ತಿದೆ. 2 ಕೋಟಿ ವೆಚ್ಚದಲ್ಲಿ ಉಣ್ಣೆ ಖರೀದಿಗೆ ಕುರಿ ಅಭಿವೃದ್ಧಿ ಸಂಘ ಮುಂದಾಗಲಿದೆ. ಕ್ಷೇತ್ರದಲ್ಲಿ 15 ಸಾವಿರ ಕುರಿಗಳ ಮಾಲೀಕರು ಸೇರಿ ಸಂಘವನ್ನು ಸ್ಥಾಪಿಸಬಹುದು. ಇದರಿಂದ ಕುರಿ ಹಾಗೂ ಉಣ್ಣೆಯನ್ನು ಮಾರಲು ಮಾರುಕಟ್ಟೆ ಲಭ್ಯವಾಗಲಿದ್ದು, ಕುರಿ ಸಾಕಾಣಿಕೆದಾರರು ಲಾಭಗಳಿಸಬಹುದು. ಕುರಿಗಳನ್ನು ಸಾಕುವ ರೊಪ್ಪಗಳಲ್ಲಿ ಸ್ವಚ್ಛತೆ ಕಾಪಾಡಿ ಕೊಂಡರೆ ಕುರಿ ಸಾಕಾಣಿಕೆಯಲ್ಲಿ ಉತ್ತಮ ಲಾಭಗಳಿಸಬಹುದು. ಶಾಸಕರ ಬೇಡಿಕೆಯಂತೆ ಕ್ಷೇತ್ರಕ್ಕೆ ಮತ್ತಷ್ಟೂ ಸೌಲಭ್ಯವನ್ನು ನೀಡಲು ಅಗತ್ಯ ಕ್ರಮ ಕ್ಯಗೊಳ್ಳಲಾಗುವುದು ಎಂದರು.

Advertisement

ಮೃತ ಕುರಿಗಳಿಗೆ ಪರಿಹಾರ: ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾಗಭೂಷಣ್‌ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ 30 ಜಿಲ್ಲೆಗಳಲ್ಲಿ ಕುರಿ-ಉಣ್ಣೆ ಅಭಿವೃದ್ಧಿ ನಿಗಮದ ಶಾಖೆಗಳಿವೆ. ಹಲವು ಉಪಯುಕ್ತ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹಿಂದೆ ಮೃತ ಕುರಿಗೆ ಪರಿಹಾರವಿರರಿಲ್ಲ. ಈಗ 1 ಕುರಿ ಮೃತಪಟ್ಟರೆ 5 ಸಾವಿರ, 6 ತಿಂಗಳ ಮರಿ ಮೃತಪಟ್ಟರೆ 2500 ಸಾವಿರ ಪರಿಹಾರ ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ ಮೃತಪಟ್ಟ ಕುರಿಗಳ ಮಾಲೀಕರಿಗೆ 3 ಲಕ್ಷ ಪರಿಹಾರ ನೀಡಲಾಗಿದೆ. ಸ್ವಗ್ರಾಮದಿಂದ ಹೊರ ಜಿಲ್ಲೆಗಳಿಗೆ ವಲಸೆ ರೂಪದಲ್ಲಿ ಸಂಚಾರ ಮಾಡುವ ಕುರಿಗಾಹಿ ಗಳಿಗೆ ಅನುಕೂಲವಾಗಲೆಂದು ಈ ಟೆಂಟ್ ಹಾಗೂ ಪರಿಕರಗಳನ್ನು ನೀಡಲಾಗುತ್ತಿದೆ. ಮುಂದಿನ ದಿನದಲ್ಲಿ ಉಚಿತ ಜಂತುಹುಳು ನಿವಾರಣ ಔಷದ ಹಾಗೂ ಇತರೆ ಸೌಲಭ್ಯವನ್ನು ಹೆಚ್ಚಾಗಿ ನೀಡುವಂತೆ ನಾಗಣ್ಣನವರಲ್ಲಿ ಮನವಿ ಮಾಡಿದರು.

ತಾಪಂ ಉಪಾಧ್ಯಕ್ಷ ಲಕ್ಷ್ಮಿನರಸಪ್ಪ, ಕುರಿ ಸಾಕಣೆ ದಾರರ ಸಂಘಗಳ ಅಧ್ಯಕ್ಷರುಗಳಾದ ನಾಗಿರೆಡ್ಡಿ, ಶಿವಕುಮಾರ್‌ ಒಡೆಯರ್‌, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ನಾಗಭೂಷಣ್‌, ಎಪಿಎಂಸಿ ಮಾಜಿ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಜೆಡಿಎಸ್‌ ಎಸ್ಸಿ/ಎಸ್ಟಿ ಅಧ್ಯಕ್ಷ ಗುಂಡಗಲ್ಲು ಶಿವಣ್ಣ, ರೈತ ಮುಖಂಡ ರಾಮಕೃಷ್ಣಪ್ಪ, ರವಿಯಾದವ್‌, ಸಣ್ಣರಾಮಣ್ಣ, ಶಿವಣ್ಣ, ತಿಮ್ಮಣ್ಣ, ರವಿಶಂಕರ್‌ ಹಾಗೂ ನೂರಾರು ರೈತರು ಹಾಗೂ ಫ‌ಲಾನುಭವಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next