Advertisement

ಕೋವಿಡ್‌: ಹೆಚ್ಚಿನ ಜಾಗೃತಿ ಅತ್ಯಗತ್ಯ

04:58 PM May 12, 2021 | Team Udayavani |

ಸಕಲೇಶಪುರ: ತಾಲೂಕಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲುಯಾರಿಗಾದರು ಆಸಕ್ತಿ ಇದ್ದಲ್ಲಿ ಸರ್ಕಾರದ ಸಂಬಳ ಜೊತೆಗೆ ನಾನು ಪ್ರತಿತಿಂಗಳು ನನ್ನ ವೈಯುಕ್ತಿಕ ಹಣ ನೀಡುತ್ತೇನೆ ಎಂದು ಶಾಸಕ ಎಚ್‌.ಕೆಕುಮಾರಸ್ವಾಮಿ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೋವಿಡ್‌ ಟಾಸ್ಕ್ ಫೋರ್ಸ್‌ ಸಭೆಯನ್ನು ಉದ್ದೇಶಿಸಿ ಮಾತನಾಡಿ,ಬೆಂಗಳೂರುಬಿಟ್ಟರೆ ಹಾಸನದಲ್ಲಿ ಹೆಚ್ಚು ಸೋಂಕು ದೃಢಪಡುತ್ತಿದ್ದು, ಸರ್ಕಾರಮಾರ್ಗಸೂಚಿ ಪಾಲಿಸಬೇಕಿದೆ. ಕೋವಿಡ್‌ ಕುರಿತು ಜನರಿಗೆ ಸರಿಯಾದ ಮಾಹಿತಿ ಇಲ್ಲ, ಸೋಂಕಿನ ಲಕ್ಷಣಗಳ ಕುರಿತು ಸಮಗ್ರ ಮಾಹಿತಿನೀಡಬೇಕು ಎಂದರು. ಕಳೆದ ಎರಡು ತಿಂಗಳಲ್ಲಿ ತಾಲೂಕಿನಲ್ಲಿ ಸುಮಾರು1980 ಕೊರೊನಾ ಟೆಸ್ಟ್‌ ಮಾಡಿದ್ದು, 1318 ಮಂದಿಗೆ ಪಾಸಿಟಿವ್‌ಬಂದಿದೆ.

630 ಜನ ಗುಣಮುಖರಾದರೆ 13 ಜನ ಸಾವನ್ನಪ್ಪಿದ್ದಾರೆ.ತಾಲೂಕಿನಲ್ಲಿ 45 ರಿಂದ 60 ವರ್ಷ ಮೇಲ್ಪಟ್ಟವರಿಗೆ ಸುಮಾರು 25000ಕೋವಿಡ್‌ ಲಸಿಕೆಗಳನ್ನು ನೀಡಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಆರಂಭಿಸಲಾಗಿದೆ. ಕ್ರಾಫ‌ರ್ಡ್‌ ಆಸ್ಪತ್ರೆಯಲ್ಲಿ ಒಟ್ಟು 43 ಬೆಡ್‌ ಗಳನ್ನುಕೋವಿಡ್‌ ರೋಗಿಗಳಿಗೆ ಮೀಸಲಾಗಿದ್ದು 16 ರೋಗಿಗಳಿಗೆ ಆಕ್ಸಿಜನ್‌ನೀಡಲಾಗುತ್ತಿದ್ದು 21 ಜನ ರೋಗಿಗಳಿಗೆ ಮಾಮೂಲಿ ಬೆಡ್‌ ನೀಡಲಾಗಿದೆಎಂದು ಮಾಹಿತಿ ನೀಡಿದರು.

ತಾಲೂಕಿನಲ್ಲಿ ಕೆಲವು ಖಾಸಗಿ ಆ್ಯಂಬುಲೆನ್ಸ್‌ಚಾಲಕರು ಕೋವಿಡ್‌ ರೋಗಿಗಳಿಂದ ದುಬಾರಿ ದರ ವಸೂಲುಮಾಡುತ್ತಿರುವ ಕುರಿತು ಚರ್ಚೆ ನಡೆಯಿತು. ಉಪವಿಭಾಗಾಧಿಕಾರಿಗಿರೀಶ್‌ ನಂದನ್‌, ತಹಶೀಲ್ದಾರ್‌ ಜೈಕುಮಾರ್‌, ಇ.ಓ ಹರೀಶ್‌,ಡಿವೈಎಸ್‌ಪಿ ಗೋಪಿ, ಟಿಎಚ್‌ಒ ಮಹೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next