ಹೊಸದಿಲ್ಲಿ: ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಕೀಗನ್ ಪೀಟರ್‌ಸನ್ ಅವರ ಆಟ ಭಾರತದ ಲೆಜೆಂಡ್ರಿ ಕ್ರಿಕೆಟರ್ ಗುಂಡಪ್ಪ ವಿಶ್ವನಾಥ್ ಅವರ ಬ್ಯಾಟಿಂಗನ್ನು ನೆನಪಿಸುತ್ತದೆ ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
“ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕ್ರಮವಾಗಿ 72 ಮತ್ತು 82 ರನ್ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕೀಗನ್ ಪೀಟರ್‌ಸನ್ ಬ್ಯಾಟಿಂಗ್ ಶೈಲಿ ನನ್ನ ಬಾಲ್ಯದ ಹೀರೋ ಗುಂಡಪ್ಪ ವಿಶ್ವನಾಥ್ ಅವರನ್ನು ನೆನಪಿಸಿತು’ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
“ತಮ್ಮ ಕಾಲದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ವಿಶ್ವನಾಥ್ ಭಾರತಕ್ಕಾಗಿ 91 ಟೆಸ್ಟ್ ಮತ್ತು 25 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಇದನ್ನೂ ಓದಿ:ಸರಣಿ ಸೋಲಿನ ಬೆನ್ನಲ್ಲೇ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ
ಅತ್ಯುತ್ತಮ ಸ್ಕ್ವೇರ್ ಕಟ್ ಮಾಡುತ್ತಿದ್ದ ಅವರು ಬಲವಾದ ಮಣಿಕಟ್ಟುಗಳನ್ನು ಹೊಂದಿದ್ದರು. ಪೀಟರ್‌ಸನ್ ಕೂಡ ಬಲಿಷ್ಠ ಮಣಿಕಟ್ಟು ಹೊಂದಿದ್ದಾರೆ. ಅವರ ಪ್ರದರ್ಶನವನ್ನು ನೋಡಿದರೆ ಖಂಡಿತವಾಗಿಯೂ ದಕ್ಷಿಣ ಆಫ್ರಿಕಾದ ಭವಿಷ್ಯದ ತಾರೆ ಎನಿಸುತ್ತಾರೆ’ ಎಂದು ರವಿ ಶಾಸ್ತ್ರಿ ಹೇಳಿದರು.