Advertisement

ಡೇ-ನೈಟ್‌ ಟೆಸ್ಟ್‌ ಪಂದ್ಯಕ್ಕೆ ಭರ್ಜರಿ ಟಿಕೆಟ್‌ ಮಾರಾಟ

09:56 AM Nov 12, 2019 | Team Udayavani |

ಕೋಲ್ಕತಾ: ಈಡನ್‌ ಗಾರ್ಡನ್ಸ್‌ನಲ್ಲಿ ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ದೇಶದ ಪ್ರಪ್ರಥಮ ಹಗಲು-ರಾತ್ರಿ ಟೆಸ್ಟ್‌ ಪಂದ್ಯಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊದಲ 3 ದಿನ ತಲಾ 50 ಸಾವಿರದಷ್ಟು ವೀಕ್ಷಕರು ಸೇರುವ ಸಾಧ್ಯತೆ ಇದೆ ಎಂದು ಬಂಗಾಲ ಕ್ರಿಕೆಟ್‌ ಮಂಡಳಿ (ಕ್ಯಾಬ್‌) ತಿಳಿಸಿದೆ.

Advertisement

“ಈಗಾಗಲೇ ಆಲ್‌ಲೈನ್‌ ಟಿಕೆಟ್‌ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 17 ಸಾವಿರ ಟಿಕೆಟ್‌ಗಳು ವೀಕ್ಷಕರ ಕೈಸೇರಿವೆ. ಮೊದಲ 3 ದಿನಗಳ ಆಟದ ಟಿಕೆಟ್‌ಗಳಿಗೆ ವಿಶೇಷ ಬೇಡಿಕೆ ಇದೆ. ಈ 3 ದಿನ ತಲಾ 50 ಸಾವಿರ ವೀಕ್ಷಕರು ಸೇರುವ ಸಾಧ್ಯತೆ ಇದೆ. ನ. 14ರಿಂದ ಕೌಂಟರ್‌ ಸೇಲ್‌ ಆರಂಭವಾಗಲಿದ್ದು, ಇದೆಲ್ಲವೂ ಮಾರಾಟವಾದರೆ ಈಡನ್‌ ಗಾರ್ಡನ್ಸ್‌ ಫ‌ುಲ್‌ ಹೌಸ್‌ ಆಗಲಿದೆ’ ಎಂದು ಬಂಗಾಲ ಕ್ರಿಕೆಟ್‌ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next