Advertisement

ಮಹನೀಯರ ತತ್ವಾದರ್ಶ ಪಾಲಿಸಿ

12:19 PM Jul 28, 2018 | |

ತಿ.ನರಸೀಪುರ: ಮಹನೀಯರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗಳಿಗೆ ಅರ್ಥ ಸಿಗಲಿದೆ ಎಂದು ಶಾಸಕ ಅಶ್ವಿ‌ನ್‌ಕುಮಾರ್‌ ಹೇಳಿದರು. 

Advertisement

ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ನಯನಜ ಕ್ಷತ್ರಿಯ ಸಂಘ ಏರ್ಪಡಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣ ಸರ್ವರಿಗೂ ಸಮಪಾಲು, ಸಮಬಾಳನ್ನು ಅಂದಿನ ಕಾಲದಲ್ಲೇ ನೀಡಿದ್ದರು. ಸವಿತಾ ಸಮಾಜದವರು ಸಂಘಟಿತರಾಗಿ ಹೋರಾಡುವ ಮೂಲಕ ಸರ್ಕಾರಿ ಸೌಲಭ್ಯವನ್ನು ಪಡೆಯುವ ಜೊತೆಗೆ ಮಕ್ಕಳಿಗೆ ಪೂರಕ ಶಿಕ್ಷಣ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು. 

ತಾಪಂ ಅಧ್ಯಕ್ಷ ಚೆಲುವರಾಜು ಮಾತನಾಡಿ, ವರ್ಗ ಭೇದವನ್ನು ಮರೆತು ಎಲ್ಲಾ ಸಮಾಜದ ವ್ಯಕ್ತಿಗಳಿಗೆ ತಮ್ಮ ಕಾಯಕದ ಮೂಲಕ ಕೈಲಾಸ ತೋರುವ ಸಮಾಜ ಮುಖ್ಯವಾಹಿನಿ ಬಾರದಿರುವುದು ವಿಷಾದನೀಯ.

ಸವಿತಾ ಸಮಾಜದವರು ವಿದ್ಯಾವಂತರಾಗಿ ಸಂಘಟನೆ ಮೂಲಕ ರಾಜಕೀಯ ಶಕ್ತಿ ಬೆಳೆಸಿಕೊಂಡಾಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು. ಇದಕ್ಕೂ ಮುನ್ನ ಪಟ್ಟಣದ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯ ಆವರಣದಿಂದ ಹೊರಟ ಮೆರವಣಿಗೆಗೆ ತಹಶೀಲ್ದಾರ್‌ ರಾಜು ಚಾಲನೆ ನೀಡಿದರು.

Advertisement

ಗಗೇಶ್ವರಿ ಹಿಲಾಲ್‌ ಶಿಕ್ಷಣ ಸಂಸ್ಥೆ ಶಿಕ್ಷಕ ಊ.ನಾ.ರಮೇಶ್‌, ವಾಟಾಳು ಶ್ರೀ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಜಿಪಂ ಸದಸ್ಯ ಮಂಜುನಾಥನ್‌, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ, ಸದಸ್ಯರಾದ ಉಮೇಶ್‌, ಚಂದ್ರಶೇಖರ್‌, ರಂಗಸ್ವಾಮಿ, ಕುಕ್ಕೂರು ಗಣೇಶ್‌, ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next