Advertisement

2ಜಿ ಗಿಂತ ದೊಡ್ಡ ಹಗರಣ: ಯುಪಿಎ ವಿರುದ್ಧ ಮೋದಿ ಕಿಡಿ

06:00 AM Dec 14, 2017 | Harsha Rao |

ಹೊಸದಿಲ್ಲಿ: ಕಾಮನ್‌ವೆಲ್ತ್‌, 2ಜಿ ಹಾಗೂ ಕಲ್ಲಿದ್ದಲಿಗಿಂತ ದೊಡ್ಡ ಹಗರಣವೆಂದರೆ ಸಾಲ ನೀಡಿಕೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದಿನ ಯುಪಿಎ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಯುಪಿಎ ಆಡಳಿತದ ಅವಧಿಯಲ್ಲಿ ಬ್ಯಾಂಕ್‌ಗಳಿಗೆ ನೀಡಿದ ಮರುಪಾವತಿ ಯಾಗದ ಸಾಲವೇ ಬಹುಕೋಟಿ ಹಗರಣವಾಗಿದೆ. ಯುಪಿಎ ಅವಧಿಯಲ್ಲಿ ಆಯ್ದ ಉದ್ಯಮಿಗಳಿಗೆ ಸಾಲ ನೀಡಲು ಬ್ಯಾಂಕ್‌ಗಳ ಮೇಲೆ ಒತ್ತಡ ಹೇರಲಾಗಿತ್ತು. ಯುಪಿಎ ಆಡಳಿತದ ಅವಧಿಯಲ್ಲಿನ ಆರ್ಥಿಕ ತಜ್ಞರು ಎನ್‌ಡಿಎ ಸರಕಾರಕ್ಕೆ ಬಿಟ್ಟು ಹೋದ ಹೊರೆ ಇದು ಎಂದಿದ್ದಾರೆ. ಅಲ್ಲದೆ ಸಾಲ ನೀಡುವಂತೆ ಬ್ಯಾಂಕ್‌ಗಳಿಗೆ ಸರಕಾರ ಒತ್ತಡ ಹೇರುತ್ತಿದ್ದಾಗ ಫಿಕ್ಕಿ ಏನು ಮಾಡುತ್ತಿತ್ತು ಎಂದೂ ಅವರು ಕೇಳಿದ್ದಾರೆ. ಈ ಹಿಂದಿನ ಸರ್ಕಾರದ ನೀತಿಯಿಂದಾಗಿ ಬ್ಯಾಂಕಿಂಗ್‌ ವಲಯ ಯಾವ ಮಟ್ಟಕ್ಕೆ ಹೋಗಿದೆ ಎಂದು ಫಿಕ್ಕಿಯಂತಹ ಸಂಘಟನೆಗಳು ಅಧ್ಯಯನ ನಡೆಸಲಿಲ್ಲ  ಎಂದು ಮೋದಿ ಟೀಕಿಸಿದ್ದಾರೆ.

Advertisement

ಉದ್ಯಮಗಳ ಸಂಘಟನೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಳೆದ ಮೂರು ವರ್ಷಗಳಲ್ಲಿ 21 ವಲಯಗಳಲ್ಲಿ 87 ಸುಧಾರಣೆಗಳನ್ನು ಮಾಡಿದ್ದೇವೆ. 30 ಕೋಟಿ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ. ನಾವು ಪಾರದರ್ಶಕ, ಸಂವೇದನಶೀಲ ಮತ್ತು ಜನರ ಅಗತ್ಯವನ್ನು ಅರ್ಥೈಸಿಕೊಳ್ಳುವ ವ್ಯವಸ್ಥೆಯನ್ನು ರೂಪಿಸುತ್ತಿದ್ದೇವೆ ಎಂದಿದ್ದಾರೆ. ಸರಕು ಮತ್ತು ಸೇವಾ ತೆರಿಗೆ ಅಗತ್ಯವಿದೆ ಎಂದು ಉದ್ಯಮ ಬಯಸಿತು. ನಾವು ಅದನ್ನು ಒದಗಿಸಿ ದ್ದೇವೆ. ಈ ವ್ಯವಸ್ಥೆ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿದಷ್ಟೂ ಸಲೀಸಾಗುತ್ತದೆ ಎಂದು ಅವರು ಹೇಳಿದ್ದಾರೆ.

ಠೇವಣಿ ಸುರಕ್ಷಿತ: ಬ್ಯಾಂಕ್‌ಗಳಲ್ಲಿನ ಠೇವಣಿ ಸುರಕ್ಷತೆ ಗಾಗಿಯೇ ಎಫ್ಆರ್‌ಡಿಐ ಮಸೂದೆ ರಚಿಸಲಾಗಿದೆ.
ಆದರೆ ಅದರ ಬಗ್ಗೆ  ಅಪಪ್ರಚಾರ ನಡೆಸಲಾಗುತ್ತಿದೆ ಎಂದಿದ್ದಾರೆ.

ಮೋದಿ-ಸಿಂಗ್‌ ಹಸ್ತಲಾಘವ
ಗುಜರಾತ್‌ ಚುನಾವಣ ಪ್ರಚಾರದ ವೇಳೆ  ವಾಗ್ಯುದ್ಧ ನಡೆಸಿದ್ದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹಸ್ತಲಾಘವ ನಡೆಸಿದ್ದಾರೆ. 2001ರ ಸಂಸತ್‌ ದಾಳಿಯಲ್ಲಿ ಹುತಾತ್ಮರಾದ ವರಿಗೆ ಗೌರವ ಅರ್ಪಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಭೇಟಿ ನಡೆದಿದೆ. ಸಂಜೆಯ ವೇಳೆಗೆ ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಗುಜರಾತ್‌ನಲ್ಲಿ ಪಾಕಿಸ್ಥಾನ ಟೀಕೆಯ ಮಾತಿನಿಂದ ತಮಗೆ ನೋವಾಗಿದೆ ಎಂಬ ಬಗ್ಗೆ ಹೇಳಿರುವ ವೀಡಿಯೋ ಕೂಡ ಬಿಡುಗಡೆಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next