Advertisement

ಸೆಮಿ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ

05:14 PM Apr 25, 2021 | Team Udayavani |

ಅಳ್ನಾವರ: ಕೋವಿಡ್ ಎರಡನೇ ಅಲೆಯ ಹರಡುವಿಕೆ ತಡೆಯಲು ಜಾರಿಗೆತಂದಿರುವ ವೀಕೆಂಡ್‌ ಲಾಕ್‌ಡೌನ್‌ಗೆ ತಾಲೂಕಿನಲ್ಲಿ ಶನಿವಾರ ಉತ್ತಮಸ್ಪಂದನೆ ಸಿಕ್ಕಿದ್ದು, ಜನರ ಓಡಾಟ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.ಸರ್ಕಾರದ ಮಾರ್ಗಸೂಚಿಯಂತೆ ಮುಂಜಾನೆ 6ರಿಂದ 10ರವರೆಗೆ ಅಗತ್ಯವಸ್ತುಗಳ ಮಾರಾಟ ನಡೆಯಿತು.

Advertisement

ಹೋಟೆಲ್‌, ಕಿರಾಣಿ ಅಂಗಡಿಗಳುಮುಚ್ಚಿದ್ದವು. ಸಾರಿಗೆ ಬಸ್‌ಗಳ ಸಂಚಾರಕ್ಕೆ ಅನುಮತಿಯಿದರೂಪ್ರಯಾಣಿಕರಿಲ್ಲದ ಕಾರಣ ಓಡಲಿಲ್ಲ. ಆಸ್ಪತ್ರೆ, ಔಷಧ ಅಂಗಡಿಗಳುತೆರೆದಿದ್ದವು. ಮೊದಲೇ ನಿಗದಿಯಾದ ಮದುವೆಗಳು ಸರ್ಕಾರದನಿರ್ದೇಶನಗಳನ್ನು ಪಾಲನೆ ಮಾಡಿಕೊಂಡು ನೆರವೇರಿದವು.

ತಹಶೀಲ್ದಾರ್‌ಅಮರೇಶ ಪಮ್ಮಾರ, ಪಪಂ ಮುಖ್ಯಾ ಧಿಕಾರಿ ವೈ.ಜಿ. ಗದ್ದಿಗೌಡರ,ಪಿಎಸ್‌ಐ ಎಸ್‌.ಆರ್‌. ಕಣವಿ ಅವರು ಕೋವಿಡ್‌ ಮಾರ್ಗಸೂಚಿಗಳಅನುಷ್ಠಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಯಶಸ್ವಿಗೊಳಿಸಲುಶ್ರಮಿಸುತ್ತಿದ್ದಾರೆ. ನಿಯಮಾವಳಿಗಳನ್ನು ಉಲ್ಲಂಘಿಸುವವರ ಮೇಲೆಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಜನರು ಅನಗತ್ಯವಾಗಿಓಡಾಡುವುದನ್ನು ನಿಲ್ಲಿಸಬೇಕು. ಕಾರಣವಿಲ್ಲದೆ ಓಡಾಡುವವರಿಗೆ ದಂಡವಿಧಿ ಸಲಾಗುವುದು ಮತ್ತು ವಾಹನಗಳನ್ನು ಹಿಡಿದಿಟ್ಟುಕೊಳ್ಳಲಾಗುತ್ತದೆ.ಇದಕ್ಕೆ ಆಸ್ಪದ ನೀಡದಿರುವಂತೆ ಸೂಚನೆ ಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next