ಶಾಶ್ವತಗೊಳಿಸಲು ರೈಲ್ವೇ ಇಲಾಖೆಯಿಂದ ಬೇಕಿವೆ ಪೂರಕ ಕ್ರಮಗಳು
Advertisement
ಮಂಗಳೂರು: ಮಂಗಳೂರು ಜಂಕ್ಷನ್-ವಿಜಯಪುರ ನಡುವೆ ಆರಂಭಗೊಂಡಿರುವ ತಾತ್ಕಾಲಿಕ ರೈಲಿಗೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಸಾಮಾನ್ಯ ದರ್ಜೆಯ ಎಲ್ಲ ಬೋಗಿಗಳು ಭರ್ತಿಯಾಗುತ್ತಿವೆ. ರೈಲನ್ನು ಇನ್ನಷ್ಟು ಜನಪ್ರಿಯಗೊಳಿಸಲು ಪೂರಕ ಕ್ರಮ ಕೈಗೊಳ್ಳುವ ಮೂಲಕ ಖಾಯಂಗೊಳಿಸಲು ನೈಋತ್ಯ ರೈಲ್ವೇ ಶ್ರಮಿಸಬೇಕಿದೆ.
Related Articles
ಮಂಗಳೂರು-ವಿಜಯಪುರ ನಡುವೆ ಎಸಿ ಟು-ಟೈರ್‌ಗೆ 2,045 ರೂ. ಎಸಿ ತ್ರಿ ಟೈರ್‌ಗೆ 1,450 ರೂ., ದ್ವಿತೀಯ ದರ್ಜೆ ಸ್ಲಿಪರ್‌ಗೆ 530 ರೂ. ಮತ್ತು ಸಾಮಾನ್ಯಕ್ಕೆ 214 ರೂ. ದರ ಇದೆ. ದ್ವಿತೀಯ ದರ್ಜೆ ಸ್ಲಿàಪರ್ ಮತ್ತು ಸಾಮಾನ್ಯ ದರ್ಜೆ ದರಗಳು ಬಸ್ ಯಾನ ದರಕ್ಕೆ ಹೋಲಿಸಿದರೆ ಬಹಳಷ್ಟು ಕಡಿಮೆ. ಬಸ್ ದರ 800ರಿಂದ 1,000 ರೂ. ವರೆಗೆ ಇರುತ್ತದೆ. ಪ್ರಸ್ತುತ ಈ ರೈಲಿಗೆ ಬಿ.ಸಿ. ರೋಡ್, ಪುತ್ತೂರು, ಸುಬ್ರಹ್ಮಣ್ಯದಲ್ಲಿ ನಿಲುಗಡೆಯೂ ಇದೆ.
Advertisement
ಪೂರಕ ಪ್ರಯತ್ನ ಅಗತ್ಯಉತ್ತರ ಕರ್ನಾಟಕದಿಂದ ಕರಾವಳಿಗೆ ಶಿಕ್ಷಣ, ವ್ಯವಹಾರ, ಉದ್ಯೋಗ, ಚಿಕಿತ್ಸೆ ನಿಮಿತ್ತ ಗಣನೀಯ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಸಾಮಾನ್ಯ ಜನತೆ ಹೆಚ್ಚಾಗಿ ಜನರಲ್ ಅಥವಾ ದ್ವಿತೀಯ ದರ್ಜೆ ಸ್ಲಿàಪರ್ ಬೋಗಿ ಆಯ್ದುಕೊಳ್ಳುತ್ತಾರೆ. ಆದುದರಿಂದ ಜನರಲ್ ಬೋಗಿಗಳನ್ನು ಹೆಚ್ಚಿಸುವ ಅಗತ್ಯವಿದೆ. ತಾತ್ಕಾಲಿಕ ನೆಲೆಯ ರೈಲನ್ನು ಖಾಯಂಗೊಳಿಸಲು ರೈಲ್ವೇ ಮಂಡಳಿ ಒಪ್ಪಿಗೆ ಸೂಚಿಸಬೇಕಿದ್ದರೆ ತಾತ್ಕಾಲಿಕ ಸಂಚಾರ ಅವಧಿಯಲ್ಲಿ ಉತ್ತಮ ನಿರ್ವಹಣೆ, ಲಾಭ ದಾಖಲಾಗಿರಬೇಕು. ಆದ್ದರಿಂದ 3 ತಿಂಗಳ ಅವಧಿಯಲ್ಲಿ ಉತ್ತಮ ನಿರ್ವಹಣೆ ತೋರುವುದಕ್ಕಾಗಿ ಪ್ರಚಾರ, ಮಾಹಿತಿಯಂತಹ ಪೂರಕ ಕ್ರಮಗಳು ಅವಶ್ಯ. ವೇಳಾಪಟ್ಟಿ ಬದಲಿಸಿ
ರೈಲು ಪ್ರಸ್ತುತ ಮಂಗಳೂರು ಜಂಕ್ಷನ್‌ವರೆಗೆ ಮಾತ್ರ ಇದ್ದು, ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸುವುದು ಅಗತ್ಯ. ಸಮಯದಲ್ಲೂ ಬದಲಾವಣೆ ಮಾಡಿದರೆ ಅನುಕೂಲ. ಪ್ರಸ್ತುತ ರೈಲು ಸಂಜೆ 6.40ಕ್ಕೆ ವಿಜಯಪುರದಿಂದ ಹೊರಟು ರಾತ್ರಿ 12.30ಕ್ಕೆ ಹುಬ್ಬಳ್ಳಿಗೆ ಬರುತ್ತದೆ. ಮರುದಿನ ಮಧ್ಯಾಹ್ನ 12.40ಕ್ಕೆ ಮಂಗಳೂರು ಜಂಕ್ಷನ್‌ಗೆ ತಲುಪುತ್ತದೆ. ಇದನ್ನು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುವಂತೆ ಬದಲಾಯಿಸಬೇಕು. ಮಧ್ಯಾಹ್ನ 1 ಗಂಟೆಗೆ ವಿಜಯಪುರದಿಂದ ಹೊರಟು ರಾತ್ರಿ 7ಕ್ಕೆ ಹುಬ್ಬಳ್ಳಿಗೆ ಬಂದು, ಮರುದಿನ ಬೆಳಗ್ಗೆ 8.30ಕ್ಕೆ ಮಂಗಳೂರು ತಲುಪುವಂತೆ ಮತ್ತು ಮಂಗಳೂರಿನಿಂದ ಸಂಜೆ 4.30ರ ಬದಲು ರಾತ್ರಿ 7 ಗಂಟೆಗೆ ಹೊರಟು ಮರುದಿನ 8 ಗಂಟೆಗೆ ಹುಬ್ಬಳ್ಳಿ ತಲುಪುವಂತೆ ಮಾಡಿದರೆ ಹೆಚ್ಚು ಪ್ರಯೋಜನಕಾರಿ ಎಂದು ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘದ ತಾಂತ್ರಿಕ ಸಲಹೆಗಾರ ಅನಿಲ್ ಹೆಗ್ಡೆ “ಉದಯವಾಣಿ’ಗೆ ತಿಳಿಸಿದ್ದಾರೆ. ಮಂಗಳೂರು ಜಂಕ್ಷನ್-ವಿಜಯಪುರ ರೈಲನ್ನು ಖಾಯಂಗೊಳಿಸುವ ಕುರಿತು 2 ತಿಂಗಳ ಅನಂತರ ನಿರ್ಧರಿಸಲಾಗುವುದು. ಹೆಚ್ಚಿನ ಪ್ರಮಾಣದ ಪ್ರಯಾಣಿಕರು ಸೇವೆ ಪಡೆದು ರೈಲು ಜನಪ್ರಿಯ ಆಗುವ ಸಾಧ್ಯತೆ ಇದೆ.
– ಇ. ವಿಜಯಾ, ನೈಋತ್ಯ ರೈಲ್ವೇ ಮುಖ್ಯ ಪಿಆರ್‌ಒ ವಿಜಯಪುರ-ಮಂಗಳೂರು ರೈಲು ಸಂಚಾರದಿಂದ ಉತ್ತರ ಕರ್ನಾಟಕ ಮತ್ತು ಕರಾವಳಿಯ ಜನರಿಗೆ ಅನುಕೂಲವಾಗಿದೆ. 4 ಜನರಲ್ ಬೋಗಿಗಳು ಭರ್ತಿಯಾಗುತ್ತಿದ್ದು, ಹೆಚ್ಚಿನ ಬೋಗಿಗಳಿಗೆ ಬೇಡಿಕೆ ಇದೆ. ಹೆಚ್ಚುವರಿಯಾಗಿ 4 ಜನರಲ್ ಬೋಗಿ ಜೋಡಿಸುವಂತೆ ಸಚಿವ ಸುರೇಶ್ ಅಂಗಡಿಯವರಿಗೆ ಬೇಡಿಕೆ ಸಲ್ಲಿಸಲಾಗಿದೆ.
-ಕುತ್ಬದ್ದೀನ್ ಖಾಜಿ,
ಅಧ್ಯಕ್ಷರು, ಕರ್ನಾಟಕ ರೈಲ್ವೇ ಅಭಿವೃದ್ಧಿ ಹೋರಾಟ ಸಮಿತಿ – ಹುಬ್ಬಳ್ಳಿ