Advertisement

ಹೊಸ ಆಲೋಚನೆಗಳಿದ್ದರೆ ಇಂಟೀರಿಯರ್‌ ಡಿಸೈನಿಂಗ್‌ ವಿಪುಲ ಅವಕಾಶ

11:07 PM Sep 10, 2019 | mahesh |

ಇಂದು ಶಿಕ್ಷಣದ ಜತೆ ಬೇಕಾಗಿರುವುದು ಕೌಶಲ. ಉತ್ತಮ ಕೌಶಲ ಇದ್ದರೆ ಯುವಜನಾಂಗಕ್ಕೆ ಅವಕಾಶಗಳು ಹೆಚ್ಚು. ಜತೆಗೆ ಇಂದು ಯುವಜನಾಂಗಕ್ಕೆ ಆಯ್ಕೆಗಳೂ ಹೆಚ್ಚಿವೆ. ಹೊಸ ಹೊಸ ಕೋರ್ಸ್‌ಗಳೂ ಆರಂಭವಾಗಿದೆ.

Advertisement

ಆಧುನಿಕ ಕಾಲದಲ್ಲಿ ಮನೆ, ಆಫೀಸನ್ನು ಸುಂದರವಾಗಿಸಲು ಎಲ್ಲರೂ ಬಯಸುತ್ತಾರೆ. ಆದ್ದರಿಂದ ಇಂಟೀರಿಯರ್‌ ಡಿಸೈನ್‌ಗೆ ಆದ್ಯತೆ ಹೆಚ್ಚಾಗಿದೆ. ಒಂದಷ್ಟೂ ಹೊಸ ಆಲೋಚನೆಗಳು, ಕೌಶಲಗಳಿದ್ದರೆ ಅಂಥವರಿಗೆ ಇಂಟೀರಿಯರ್‌ ಡಿಸೈನರ್‌ಗಳಾಗಿ ಕೆಲಸ ಮಾಡಬಹುದು.

ಇಂಟೀರಿಯರ್‌ ಡಿಸೈನಿಂಗ್‌ ಎಂದರೆ?
ಇಂಟೀರಿಯರ್‌ ಡಿಸೈನ್‌ ಎಂದರೆ ಮನೆ ಅಥವಾ ಆಫೀಸ್‌ ಅನ್ನು ಸುಂದರಗೊಳಿಸುವುದು. ಹೊಸ ಹೊಸ ಆಲೋಚನೆಗಳೊಂದಿಗೆ ಕ್ರಿಯಾಶೀಲವಾಗಿ ಯೋಚಿಸಿ ಮನೆಯನ್ನು ಸುಂದರವಾಗಿ ಮಾಡುವುದು ಇವರ ಕೆಲಸ.

1 ಹೊಸ ಆಲೋಚನೆಗಳು
ಇಂದು ಪ್ರತಿಯೊಬ್ಬರೂ ಬಯಸುವುದು ಹೊಸತನ. ಹೊಸ ಕ್ರಿಯಾಶೀಲ ಡಿಸೈನ್‌ಗಳಿಗೆ ಆದ್ಯತೆ. ಆದ್ದರಿಂದ ಈ ಕ್ಷೇತ್ರದಲ್ಲಿ ಹೊಸ ಹೊಸ ಆಲೋಚನೆಗಳು ಅಗತ್ಯ. ಅಂತಹ ಇಂಟೀರಿಯರ್‌ ಡಿಸೈನರ್‌ಗಳಿಗೆ ಅವಕಾಶವೂ ಹೆಚ್ಚಿದೆ.

2 ಕಲ್ಪನೆ
ಉತ್ತಮ ಇಂಟೀರಿಯರ್‌ ಡಿಸೈನರ್‌ ಆಗಬೇಕಾದರೆ ಕಲ್ಪನೆ ಮಾಡಿಕೊಳ್ಳುವ ಕಲೆಯೂ ಗೊತ್ತಿರಬೇಕು. ಯಾವ ಡಿಸೈನ್‌ಗಳನ್ನು ಎಲ್ಲಿ ಬಳಸಿದರೆ ಉತ್ತಮ? ಹೇಗೆ ಬಳಸಿದರೆ ಉತ್ತಮ ಎಂಬುದರ ಬಗ್ಗೆ ಮನಸ್ಸಿನಲ್ಲಿಯೇ ಒಂದು ಕಲ್ಪನೆ ಅಗತ್ಯ.

Advertisement

3 ಸಾಮಾನ್ಯ ಜ್ಞಾನ
ಒಬ್ಬ ಉತ್ತಮ ಇಂಟೀರಿಯರ್‌ ಡಿಸೈನರ್‌ ಆಗಲು ಆತನಿಗೆ ಅವುಗಳ ಕುರಿತೂ ಒಂದು ಸಾಮಾನ್ಯ ಜ್ಞಾನದ ಆವಶ್ಯಕತೆಯಿದೆ.

ಕೌಶಲಗಳು
ಇಂಟೀರಿಯರ್‌ ಡಿಸೈನರ್‌ ಕೋರ್ಸಿಗೆ ಸೇರಬೇಕಾದರೆ ಪಿಯುಸಿ ಮುಗಿಸಿರಬೇಕು.ಆದರೆ ಉತ್ತಮ ಇಂಟೀರಿಯರ್‌ ಡಿಸೈನರ್‌ಗಳಿಗೆ ಬೇಕಾಗಿರುವುದು ಒಂದಿಷ್ಟು ಕೌಶಲಗಳು.

ವ್ಯಾಪ್ತಿ
ಇಂಟೀರಿಯರ್‌ ಡಿಸೈನರ್‌ ಕ್ಷೇತ್ರಕ್ಕೆ ಆದ್ಯತೆ ಹೆಚ್ಚಿದೆ. ಯಾಕೆಂದರೆ ಇಂದು ಮನೆ, ಆಫೀಸುಗಳ ಒಳಗಿನ ಸೌಂದರ್ಯಕ್ಕೂ ಜನ ಹೆಚ್ಚು ಮಹತ್ವ ಕೊಡುತ್ತಿದ್ದಾರೆ. ಆದ್ದರಿಂದ ಈ ಕ್ಷೇತ್ರಗಳಲ್ಲಿ ಅವಕಾಶಗಳು ಹೆಚ್ಚುತ್ತಿವೆ. ಮನೆಯಲ್ಲಿ , ಆಫೀಸು, ಆಸ್ಪತ್ರೆ, ವಸ್ತುಸಂಗ್ರಾಹಲಾಯ, ಹೊಟೇಲುಗಳಲ್ಲೂ ಇಂಟೀರಿಯರ್‌ ಡಿಸೈನಿಂಗ್‌ಗೆ ಅವಕಾಶವಿದೆ. ಇದು ಉತ್ತಮ ಉದ್ಯೋಗ ಕ್ಷೇತ್ರವಾಗಿ ಮಾರ್ಪಟ್ಟಿದೆ.

ಕೋರ್ಸ್‌ಗಳು ಎಲ್ಲೆಲ್ಲಿವೆ?
·ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್‌ ಅಹಮದಾಬಾದ್‌ ·ನ್ಯಾಶ‌ನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್‌ ಟೆಕ್ನಾಲಜಿ, ನವದೆಹಲಿ ·ಪರ್ಲ್ ಅಕಾಡೆಮಿ ಆಫ್ ಫ್ಯಾಷನ್‌, ಮುಂಬಯಿ ·ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್‌ ಟೆಕ್ನಾಲಜಿ, ಗಾಂಧಿನಗರ

ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next