Advertisement
ಕನ್ನಡ ಚಿತ್ರರಂಗಕ್ಕೂ ಪೊಲೀಸ್ ಸ್ಟೋರಿಗಳಿಗೂ ಅವಿನಾಭಾವ ಸಂಬಂಧ. ಕನ್ನಡದಲ್ಲಿ ಈಗಾಗಲೇಸಾಕಷ್ಟು ಪೊಲೀಸ್ ಸ್ಟೋರಿಗಳು ಬಂದಿವೆ. ಅಂದಿನಿಂದ ಇಂದಿನವರೆಗಿನ ಬಹುತೇಕ ಎಲ್ಲಾ ನಾಯಕ ನಟರು ಪೊಲೀಸ್ ಯೂನಿಫಾರಂನಲ್ಲಿ ಖಡಕ್ ಆಗಿ ಖದರ್ ತೋರಿದ್ದಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಎರಡು ಚಿತ್ರಗಳು ಪೊಲೀಸ್ ಸ್ಟೋರಿ ಮೂಲಕ ಕುತೂಹಲ ಹುಟ್ಟಿಸಿವೆ. ಶಿವರಾಜಕುಮಾರ್ ಅಭಿನಯದ “ರುಸ್ತುಂ’ ಹಾಗೂ ರಕ್ಷಿತ್ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’. ಈ ಎರಡು ಚಿತ್ರಗಳ ಕುರಿತು ರಕ್ಷಿತ್ ಹಾಗೂ “ರುಸ್ತುಂ’ ನಿರ್ದೇಶಕ ರವಿವರ್ಮ ಇಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ …
Related Articles
ಅದಕ್ಕೆ ಸಾಕಷ್ಟು ಸಮಯ ತಗೊಂಡಿತು. ಆದರೆ, ಇದೊಂದು ನಮಗೆ ಒಳ್ಳೆಯ ಅನುಭವ ಕೊಟ್ಟಿತು. ನಾವು ಬರವಣಿಗೆ ನಂಬಿದವರು. ಇಷ್ಟೊಂದು ಸಮಯ ತಗೊಂಡ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ಸ್ಕ್ರಿಪ್ಟ್ ಚೆನ್ನಾಗಿ ಬಂದಿದೆ. “ಅವನೇ ಶ್ರೀಮನ್ನಾರಾಯಣ’ ಸ್ಕ್ರಿಪ್ಟ್ ಸಮಯದಲ್ಲಿ ನಾವು ಸಾಕಷ್ಟು ಕಲಿತೆವು. ನಾವು ನಾಳೆ ಇನ್ನೊಂದು ಸ್ಕ್ರಿಪ್ಟ್ ಮಾಡುವಾಗ ಇಷ್ಟು ಸಮಯ ಬೇಕಾಗಲ್ಲ. ಏಕೆಂದರೆ ಅಲ್ಲಿನ
ಅನುಭವ ಇಲ್ಲಿ ವರ್ಕೌಟ್ ಆಗುತ್ತದೆ’ ಎಂದು “ಅವನೇ ಶ್ರೀಮನ್ನಾರಾಯಣ’ದ ಸ್ಕ್ರಿಪ್ಟ್ ಅನುಭವ ಬಿಚ್ಚಿಡುತ್ತಾರೆ ರಕ್ಷಿತ್.
Advertisement
ದೊಡ್ಡ ಹಿಟ್ ಕೊಟ್ಟ ನಾಯಕ ಇಷ್ಟೊಂದು ಗ್ಯಾಪ್ ತಗೊಂಡಿರೋದು ಎಷ್ಟು ಸರಿ, ಈ ಬಗ್ಗೆ ಬೇಸರವಿದೆಯೇ ಎಂದರೆ ಖಂಡಿತಾ ಇಲ್ಲ ಎಂಬ ಉತ್ತರ ರಕ್ಷಿತ್‌ರಿಂದ ಬರುತ್ತದೆ. “ನನಗೆ ಬೇಗನೇ ಬಂದು ಬಿಡಬೇಕೆಂಬ ಆತುರವಿಲ್ಲ. ಒಂದು ಒಳ್ಳೆಯ ಸಿನಿಮಾ ಬಂದರೆ ಜನ ನೋಡೇ ನೋಡುತ್ತಾರೆ. ಆ ನಂಬಿಕೆ ನನಗಿದೆ. ನಾವು ಒಳ್ಳೆಯ ಕಂಟೆಂಟ್ ಕೊಟ್ಟರೆ ಖಂಡಿತಾ ಜನ ಬರುತ್ತಾರೆ. ಅಲ್ಲಿ ಲೇಟಾಗಿದೆ, ಜನ ಮರೆತು ಬಿಡುತ್ತಾರಾ ಎಂಬ ಪ್ರಶ್ನೆ ಬರಲ್ಲ. ಹಾಡು, ಟ್ರೇಲರ್ ಬಿಟ್ಟು, ಚೆನ್ನಾಗಿ ಪಬ್ಲಿಸಿಟಿ ಮಾಡಿದರೆ ಜನ ಸಿನಿಮಾದತ್ತ ತಿರುಗಿ ನೋಡುತ್ತಾರೆ. ಈಗಾಗಲೇ ಕುತೂಹಲ ಬಿಲ್ಡ್ ಆಗಿದೆ ಅಂದುಕೊಂಡಿದ್ದೇನೆ’ ಎನ್ನುವುದು ರಕ್ಷಿತ್ ಮಾತು.
“ಅವನೇ ಶ್ರೀಮನ್ನಾರಾಯಣ’ ಚಿತ್ರ ಬರೋಬ್ಬರಿ 200 ದಿನ ಚಿತ್ರೀಕರಣ ಮಾಡಿದೆ. 200 ದಿನ ಚಿತ್ರೀಕರಣ ಮಾಡಿದ ಕನ್ನಡದ ಮೊದಲ ಚಿತ್ರ ಎಂಬ ಮಾತೂ ಇದೆ. ಎಲ್ಲಾ ಓಕೆ, ಇಷ್ಟೊಂದು ಚಿತ್ರೀಕರಣ ಮಾಡಲು ಕಾರಣವೇನು ಎಂದರೆ ಚಿತ್ರದ ಗುಣಮಟ್ಟ ಎಂಬ ಉತ್ತರ ರಕ್ಷಿತ್‌ರಿಂದ ಬರುತ್ತದೆ. “ನಾವು ಕೆಲವೇ ಕೆಲವು ದೃಶ್ಯಗಳನ್ನಷ್ಟೇ ಫೋಕಸ್ ಮಾಡಿ, ಅದನ್ನಷ್ಟೇ ಚೆನ್ನಾಗಿ ತೆಗೆದಿಲ್ಲ. ಪ್ರತಿ ಫ್ರೆಮ್ ಬಗ್ಗೆಯೂ ಗಮನಹರಿಸಿದ್ದೆವೆ. “ಕಿರಿಕ್ ಪಾರ್ಟಿ’ಯಲ್ಲಿ ಒಂದು ದಿನಕ್ಕೆ ಎರಡೂರು ಸೀನ್ ತೆಗೆದರೆ, ಇಲ್ಲಿ ಒಂದೊಂದು ಸೀನ್ ಶೂಟ್ ಗೆ ಮೂರ್‍ನಾಲ್ಕು ದಿನ ಬೇಕಾಗಿತ್ತು. ಒಂದು ದಿನಕ್ಕೆ 8-9 ಶಾಟ್ಸ್ ಅಷ್ಟೇ ತೆಗೆಯುತ್ತಿದ್ದೆವು. ಮೊದಲ ಬಾರಿಗೆ ದೊಡ್ಡ ಸೆಟ್ ಹಾಕಿ. ಎಲ್ಲವೂ ನಮಗೆ ಹೊಸ ಅನುಭವ’ ಎನ್ನುವ ರಕ್ಷಿತ್, ಈ ಚಿತ್ರದಲ್ಲಿ ಒಂದು ಹೊಸ ಕಲ್ಪನಾ ಲೋಕವನ್ನೇ ಸೃಷ್ಟಿಸಿದ್ದೇವೆ. ಇಲ್ಲಿನ ಕಥೆಯನ್ನು ನೀವು ಎಲ್ಲಿ ಬೇಕಾ ದರೂ ಮಾಡಬಹುದು, ಯಾವ ಜಾಗದಲ್ಲಾದರೂ ಇಡಬಹುದು. ಅದೇ ಕಾರಣದಿಂದ ಒಂದು ರಿಸ್ಕ್ ತಗೊಂಡು, ಡಬ್ ಮಾಡುವ ನಿರ್ಧಾರಕ್ಕೆ ಬಂದೆವು.
ದಕ್ಷಿಣ ಭಾರತದ ಭಾಷೆಗಳಿಗೆ ಡಬ್ ಮಾಡುವ ಆಲೋಚನೆ ನಮಗೆ ಮೊದಲೇ ಇತ್ತು. ಆದರೆ, ಹಿಂದಿಗೆಇರಲಿಲ್ಲ. “ಕೆಜಿಎಫ್’ ಚಿತ್ರದ ಯಶಸ್ಸಿನ ನಂತರ ಹಿಂದಿ ಬಗ್ಗೆಯೂ ಯೋಚಿಸಿದೆವು. ಇದು ಸಂಪೂರ್ಣ
ಇಂಡಿಯನ್ ಸಬೆjಕ್ಟ್. ಅದಕ್ಕೆ ನಾವು ವೆಸ್ಟರ್ನ್ ಟಚ್ ಕೊಟ್ಟಿದ್ದೇವೆ. ಪ್ರೇಕ್ಷಕರಿಗೆ ಹೊಸ ಅನುಭವ
ಕೊಡೋದಂತೂ ಗ್ಯಾರಂಟಿ’ ಎಂದು ವಿಶ್ವಾಸದಿಂದ ಹೇಳುತ್ತಾರೆ ರಕ್ಷಿತ್. ಇನ್ನು, ಇಡೀ ಚಿತ್ರದಲ್ಲಿ ರಕ್ಷಿತ್
ಪೊಲೀಸ್ ಯೂನಿಫಾರ್ಮ್ನಲ್ಲೇ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಮಾಡಿದ ಸಿನಿಮಾಕ್ಕೂ ಈ ಸಿನಿಮಾಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ರಕ್ಷಿತ್‌ಗೆ ಹೊಸ ಅನುಭವ ಕೊಟ್ಟಿದೆಯಂತೆ. “ನನಗೆ ಇಲ್ಲಿನ ಪ್ರತಿಯೊಂದು ವಿಭಾಗವೂ ಹೊಸತಾಗಿತ್ತು. ಅದು ಸೆಟ್‌ನಿಂದ
ಹಿಡಿದು ಮೇಕಿಂಗ್‌ವರೆಗೂ. ಇವತ್ತು ಕನ್ನಡ ಚಿತ್ರರಂಗ ಎಷ್ಟು ಬೆಳೆದಿದೆ ಎಂದರೆ ಇಡೀ ಸೆಟ್‌ನಲ್ಲಿ ಸಿನಿಮಾ ಮುಗಿಸಬಹುದು. ಹೊಸತನ, ಕ್ರಿಯೇಟಿವ್ ಆಗಿ ಯೋಚನೆ ಮಾಡಿ, ಸಿನಿಮಾ ಕಟ್ಟಿಕೊಟ್ಟಿದ್ದೇವೆ’ ಎನ್ನುತ್ತಾರೆ. “ಅವನೇ ಶ್ರೀಮನ್ನಾರಾಯಣ’ ಚಿತ್ರದ ನಡುವೆಯೇ ರಕ್ಷಿತ್ “777 ಚಾರ್ಲಿ’ಯಲ್ಲೂ ಬಿಝಿಯಾಗಿದ್ದರು. ಎರಡು ಸಿನಿಮಾಗಳನ್ನು ಒಟ್ಟಿಗೆ ಮಾಡಿದ ಅನುಭವ ಅವರದು. “ಅವನೇ ಶ್ರೀಮನ್ನಾರಾಯಣ’ನಿಗೆ ಹೋಲಿಸಿದರೆ “ಚಾರ್ಲಿ’ ಸಂಪೂರ್ಣ ಭಿನ್ನ. “ಅವನೇ …’ಯಲ್ಲಿ ತುಂಬಾ ಕಾಮಿಡಿ ಮಾಡುವ, ಭಿನ್ನ ಬಾಡಿಲಾಂಗ್ವೇಜ್ ಇದ್ದರೆ “ಚಾರ್ಲಿ’ಯಲ್ಲಿ ಸೆಟಲ್ಡ್ ಆ್ಯಕ್ಟಿಂಗ್ ಇದೆ. ಇನ್ನು ಚಿತ್ರದಲ್ಲಿ ಶ್ವಾನವೊಂದು ಪ್ರಮುಖ ಪಾತ್ರ ಮಾಡಿದೆ. ಅದರ ಮೂಡ್‌ಗೆ ತಕ್ಕಂತೆ ನಾವು ನಟಿಸಬೇಕು. ನಾವು ಎಷ್ಟೇ ಚೆನ್ನಾಗಿ ನಟಿಸಿ, ನಾಯಿಯೇನಾದರೂ ಸರಿಯಾಗಿ ನಟಿಸದೇ ಹೋದರೆ ಮತ್ತೆ ಶೂಟ್ ಮಾಡಬೇಕು. ಅದೇ ನಾಯಿ ಚೆನ್ನಾಗಿ ನಟಿಸಿ, ನಾವು ಇನ್ನೂ ಚೆನ್ನಾಗಿ ಮಾಡುತ್ತೇವೆ ಎಂದರೆ ಅವಕಾಶವಿರುವುದಿಲ್ಲ’ ಎನ್ನುತ್ತಾ ನಗುತ್ತಾರೆ ರಕ್ಷಿತ್. ಈಗಾಗಲೇ ಚಾರ್ಲಿ 40 ದಿನಗಳ ಚಿತ್ರೀಕರಣ
ಮುಗಿಸಿದ್ದು, ಇನ್ನೂ 60 ದಿನಗಳ ಚಿತ್ರೀಕರಣ ಬಾಕಿ ಇದೆ. ಈ ಸಿನಿಮಾ ಮುಗಿಸಿಕೊಂಡು ರಕ್ಷಿತ್ “ಪುಣ್ಯಕೋಟಿ’ ಕಡೆ ಹೋಗಲಿದ್ದಾರೆ. ಇದು ರಕ್ಷಿತ್ ನಟನೆ, ನಿರ್ದೇಶನದ ಮತ್ತೂಂದು ಸಿನಿಮಾ. ರವಿಪ್ರಕಾಶ್ ರೈ