Advertisement
ಇನ್ನೂ 4೦ ರ ಹರೆಯದ ಮಹಿಳೆಯಂತೆ ಕಾಣುವ ಮೀನಾಕ್ಷಿ ಅಮ್ಮ ಅವರು ಬಿದಿರಿನ ಗಳ ಹಿಡಿದು ಪುತ್ರನೊಂದಿಗೆ ಸಮದಂಡಿನ ಹೋರಾಟ ನೀಡಿ ಬೆರಗು ಮೂಡಿಸುತ್ತಾರೆ.
Related Articles
Advertisement
3,000 ವರ್ಷಗಳ ಇತಿಹಾಸ ಹೊಂದಿರುವ ಕಳರಿ ಸಮರ ಕಲೆಯಲ್ಲಿ ಯೋಗ ಮತ್ತು ನೃತ್ಯ ಅಡಕವಾಗಿದ್ದು, ಕತ್ತಿಯೊಂದಿಗೆ ಗುರಾಣಿ ಮತ್ತು ಬಿದಿರಿನ ಗಳಗಳನ್ನು ಹಿಡಿದು ರೋಮಾಂಚನಕಾರಿಯಾಗಿ ಹೋರಾಟ ನಡೆಸುವುದು ವಿಶೇಷ.
ಈ ಕಲೆಯಿಂದ ತಮಗೆ ಅಪಾಯವಾಗುವ ಸಾಧ್ಯತೆಯನ್ನು ಅರಿತ ಬ್ರಿಟಿಷರು 1804ರಲ್ಲಿ ನಿಷೇಧ ಹೇರಿದ್ದರು. ಗುಪ್ತವಾಗಿದ್ದ ಕಳರಿ ಕಲೆ ಸ್ವಾತಂತ್ರ್ಯದ ಬಳಿಕವೇ ಮತ್ತೆ ಮುನ್ನೆಲೆಗೆ ಬಂದಿತ್ತು .
ಕಳರಿಯನ್ನು ಈಗ ಕ್ರೀಡೆಯಾಗಿ ದೇಶದಲ್ಲಿ ಅಭ್ಯಾಸ ನಡೆಸಲಾಗುತ್ತಿದ್ದು ಪ್ರೋತ್ಸಾಹವೂ ನೀಡಲಾಗುತ್ತಿದೆ.
ಮೀನಾಕ್ಷಿ ಅಮ್ಮನವರ ಕಳರಿ ಶಾಲೆಯ ಒಳಗೆ ಪುತ್ರ ಸಂಜೀವ್ ಅವರು ಕಚ್ಚೆಯನ್ನು ಉಟ್ಟುಕೊಂಡು ಎದೆಗಾರಿಕೆ ತೋರುತ್ತಾ,ಬಾಲಕರು ಮತ್ತು ಬಾಲಕಿಯರಿಗೆ ಸಮರ ಕಲೆಯನ್ನು ಕಲಿಸುವ ವೇಳೆ ಮಾತನಾಡಿದರು.
‘ಕಲರಿಯಲಿ ಎರಡು ವಿಧಗಳಿದ್ದು ಒಂದು ಶಾಂತಿಯುತ ಇನ್ನೊಂದು ಸಮರಕ್ಕಾಗಿ’ ಎಂದು ಸಂಜೀವ್ ತಿಳಿಸಿದರು.
‘ನಾನು ನನ್ನ ಸಹೋದರನೊಂದಿಗೆ ಕಳರಿಯನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದೇನೆ. ಇಲ್ಲವಾದಲ್ಲಿ ಪುರಾತನ ಕಲೆ ನಶಿಸಿ ಹೋಗುತ್ತದೆ. ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಂಪೂರ್ಣವಾಗಿ ಕಳರಿಯಲ್ಲಿ ತೊಡಗಿಸಿಕೊಂಡರೆ ವಿರೋಧಿಗಳು ಮರೆಯಾಗುತ್ತಾರೆ. ದೇಹವೇ ಕಣ್ಣಾಗುತ್ತದೆ.ಇದು ಮನಸ್ಸನ್ನು, ದೇಹ ಮತ್ತು ಆತ್ಮವನ್ನು ಶುದ್ಧೀಕರಿಸಿ ಏಕಾಗ್ರತೆಯನ್ನು ಜಾಗ್ರತಿ ಮಾಡಿಸುತ್ತದೆ. ವೇಗ ಮತ್ತು ತಾಳ್ಮೆ ಬರಿಸುತ್ತದೆ. ದೈಹಿಕ ಮತ್ತು ಮಾನಸಿಕ ಶಕ್ತಿ ನೀಡುತ್ತದೆ’ ಎಂದು ಮೀನಾಕ್ಷಿ ಅಮ್ಮ ಅವರ ಮೊಮ್ಮಗಳು ಸಿವಿಲ್ ಇಂಜಿನಿಯರ್ ಆಗಿರುವ ಅಲಕಾ ಅವರು ಕವಿತೆಯ ರೂಪದಲ್ಲಿ ಕಲೆಯ ಮಹತ್ವವನ್ನು ಹೇಳಿದರು.
2017 ರಲ್ಲಿ ಮೀನಾಕ್ಷಿ ಅಮ್ಮ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.