Advertisement
ಕೆನಡಾ ನಿವಾಸಿಯಾದ ಜಸ್ಪಾಲ್ ಅತ್ವಾಲ್ ಎಂಬ ಸಿಕ್ಖ್ ಪ್ರತ್ಯೇಕತಾವಾದಿ ಭಾರತ ಪ್ರವಾಸದಲ್ಲಿರುವ ಜಸ್ಟಿನ್‌ಅವರ ಅಧಿಕೃತ ಸಮಾರಂಭಗಳಲ್ಲೇ ಕಾಣಿಸಿಕೊಂಡಿರುವುದು ಮತ್ತು ಆತನಿಗೆ ಜಸ್ಟಿನ್ ಭೋಜನ ಕೂಟಕ್ಕೆ ಆಹ್ವಾನ ನೀಡಿ ರು ವುದೇ ಇದಕ್ಕೆ ಕಾರಣ. ಇದೀಗ ವಿವಾದವಾಗಿ ಮಾರ್ಪಟ್ಟಿದ್ದು, ಇದರ ಪರಿಣಾಮವಾಗಿ, ಭಾರತದಲ್ಲಿರುವ ಕೆನಡಾ ರಾಯಭಾರಿ ನಾದಿರ್ ಪಟೇಲ್ ವತಿಯಿಂದ ಗುರುವಾರ ರಾತ್ರಿ ಏರ್ಪಾಟಾಗಿದ್ದ ರಾತ್ರಿ ಭೋಜನ ಕೂಟಕ್ಕೆ ಅತ್ವಾಲ್‌ಗೆ ನೀಡಲಾಗಿದ್ದ ಆಹ್ವಾನವನ್ನು ರದ್ದುಗೊಳಿಸಲಾಗಿದೆ.
ಅತ್ವಾಲ್ ಮೂಲತಃ ಸಿಕ್ಖ್ ಪ್ರತ್ಯೇಕತಾವಾದಿ. ಖಲಿಸ್ತಾನ್ ಉಗ್ರರ ಬೆಂಬಲಿಗ. 1986ರಲ್ಲಿ ಕೆನಡಾಕ್ಕೆ ಭೇಟಿ ನೀಡಿದ್ದ ಆಗಿನ ಪಂಜಾಬ್ ರಾಜ್ಯದ ಸಚಿವ ಮಲ್ಕಿಯತ್ ಸಿಂಗ್ ಸಂಧು ಅವರನ್ನು ಹತ್ಯೆಗೈಯ್ಯುವ ವಿಫಲ ಯತ್ನ ನಡೆಸಿ, ಆ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದ.
Related Articles
ಜಸ್ಟಿನ್ ಅವರ ದಿಲ್ಲಿ ಸಮಾರಂಭಕ್ಕೆ ಬಂದಿದ್ದ ಅತ್ವಾಲ್, ಮುಂಬಯಿಯ ಕಾರ್ಯಕ್ರಮದಲ್ಲಿ ಜಸ್ಟಿನ್ ಪತ್ನಿ ಸೋಫಿ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ.
Advertisement
ಮಹತ್ವದ ಬೆಳವಣಿಗೆಯಲ್ಲಿ ಅತ್ವಾಲ್‌ರನ್ನು ಉಗ್ರರ ಬ್ಲ್ಯಾಕ್‌ಲಿಸ್ಟ್‌ನಿಂದ ಈ ಹಿಂದೆಯೇ ತೆಗೆದು ಹಾಕ ಲಾಗಿದೆ ಎಂಬ ಅಂಶವೂ ಬಹಿರಂಗವಾಗಿದೆ. ಕೇಂದ್ರ ಗೃಹ ಸಚಿವಾಲಯವೇ ಇವರನ್ನು ತೆಗೆ ದುಹಾಕಿದ್ದು, ಈತ ಭಾರತದಲ್ಲೂ ಸ್ವತ್ಛಂದವಾಗಿ ಓಡಾಡಿಕೊಂಡಿದ್ದಾನೆ.