Advertisement
ಸೆ. 14ರಂದು ಅಪರಾಹ್ನ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಹಯೋಗದಲ್ಲಿ ಸಾಂತಾಕ್ರೂಜ್ ಪೂರ್ವದ ಕಲೀನಾ ವಿದ್ಯಾನಗರಿಯ ಜೆ. ಪಿ. ನಾಯಕ್ ಭವನದಲ್ಲಿ ನಡೆದ ವಿಶೇಷ ಉಪನ್ಯಾಸ ಮತ್ತು ಹೆಸರಾಂತ ಕೇಶ ವಿನ್ಯಾಸಕ ಶಿವಾಸ್ ಹೇರ್ ಡಿಜೈನರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ. ಭಂಡಾರಿ ಯಶೋಗಾಥೆ, ಜೀವನ ಶೈಲಿಯಧಾರಿತ ಜಯಶ್ರೀ ಜಿ. ಶೆಟ್ಟಿ ರಚಿತ ‘ಸ್ಟೈಲಿಂಗ್ ಅಟ್ ದ ಟಾಪ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಶಿವರಾಮ ಅವರು ಭಂಡಾರಿ ಈ ಕೃತಿಯ ಮುಖೇನ ಸಮುದಾಯದ ಕೀರ್ತಿಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆ. ಕುಲವೃತ್ತಿಯನ್ನೇ ಪ್ರವೃತ್ತಿಯಾಗಿಸಿದ ಹಳ್ಳಿ ಹುಡುಗನ ಜಾಗತಿಕ ಸಾಧನೆ ಪ್ರಶಂಸನೀಯ. ತಾಯಿಯ ಮಮತೆಯ ಮೌಲ್ಯದ ಅನಿವಾರ್ಯತೆ ಏನೆಂಬುವುದನ್ನು ಆಧುನಿಕ ಯುವಜನತೆಗೆ ಅವರು ತೋರಿಸಿಕೊಟ್ಟಿದ್ದಾರೆ. ವ್ಯಕ್ತಿ ಉಸಿರು ಇರುವ ತನಕ ಮಾತ್ರವಾಗಿದ್ದರೆ ಆತನ ಸಾಧನೆಯ ವ್ಯಕ್ತಿತ್ವ ಪ್ರಪಂಚ ಇರುವ ತನಕ ಇರುತ್ತದೆ ಎನ್ನುವಂತೆ ನಮ್ಮ ಶಿವರಾಮ ಅವರ ಸಾಧನೆಯೂ ಸದಾ ಪ್ರಕಾಶಿಸುತ್ತಿರಲಿ ಎಂದು ಶುಭಹಾರೈಸಿದರು.
Related Articles
Advertisement
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭಾನ್ವಿತರನ್ನು ಗುರುತಿಸುವುದೇ ಪತ್ರಿಕಾ ಧರ್ಮವಾಗಿದೆ. ಇದನ್ನೇ ಕನ್ನಡಿಗ ಪತ್ರಕರ್ತರ ಸಂಘ ಮತ್ತು ಕನ್ನಡ ವಿಭಾಗ ಮಾಡುತ್ತಿದೆ. ಇಂತಹ ಕಾಯಕವನ್ನು ಈ ಕಾರ್ಯಕ್ರಮದ ಮೂಲಕ ಸಿದ್ಧಿಸಿದ್ದೇವೆ ಎಂದರು.
ಪತ್ರಕರ್ತರ ಸಂಘದ ಜತೆ ಕಾರ್ಯದರ್ಶಿ ಜಯರಾಮ ಎನ್. ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯ ಪ್ರೀತಂ ಎನ್. ದೇವಾಡಿಗ, ವಿಶೇಷ ಆಮಂತ್ರಿತ ಸದಸ್ಯರಾದ ನ್ಯಾಯವಾದಿ ವಸಂತ್ ಎಸ್. ಕಲಕೋಟಿ, ಸಾ. ದಯಾ, ಗೋಪಾಲ ತ್ರಾಸಿ, ಸವಿತಾ ಸುರೇಶ್ ಶೆಟ್ಟಿ, ಕರುಣಾಕರ್ ವಿ. ಶೆಟ್ಟಿ ಹಾಗೂ ನಗರದ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಉಪಸ್ಥಿತರಿದ್ದು ಶಿವರಾಮ ಭಂಡಾರಿ ಅವರನ್ನು ಅಭಿನಂದಿಸಿದರು.
ಕನ್ನಡ ವಿಭಾಗದ ಡಾ| ಉಮಾರಾವ್, ಕುಮುದಾ ಆಳ್ವ, ಮದುಸೂಧನ ರಾವ್, ಶೈಲಜಾ ಹೆಗಡೆ, ಡಾ| ಶ್ಯಾಮಲಾ ಪ್ರಕಾಶ್, ಸುರೇಖಾ ಎಸ್. ದೇವಾಡಿಗ, ಶ್ರೀಪಾದ ಪತಕಿ, ಗೀತಾ ಮಂಜುನಾಥ್ ಮತ್ತಿತರರ ಸಹಕಾರದೊಂದಿಗೆ ನಡೆಸಲ್ಪಟ್ಟ ಕಾರ್ಯ ಕ್ರಮದಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ರಂಗಕರ್ಮಿ ಸಾ. ದಯಾ ವಂದಿಸಿದರು.
ಇಲ್ಲಿನ ಹಳೆಯಂಗಡಿಯ ಪಡುಪಣಂಬೂರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಸಂಯೋಜನೆಯಲ್ಲಿ ಶ್ರೀ ನಾಲ್ಕೂರು ಪಂಜುರ್ಲಿ ದೈವಸ್ಥಾನ ಮತ್ತು ಗಾಯತ್ರಿ ಮಹಿಳಾ ಸಮಿತಿಯ ಸಹಕಾರದಲ್ಲಿ ಸೆ. 17ರಂದು ಬೆಳಗ್ಗೆ 9ಕ್ಕೆ ದೈವಸ್ಥಾನದ ವಠಾರದಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಜರಗಲಿದೆ. ಮಧ್ನಾಹ್ಯ 12ಕ್ಕೆ ಭಜನ ಸಂಕೀರ್ತನೆ, ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ.