Advertisement

ಮಣಿಪಾಲ ಶಿಕ್ಷಣ ಸಂಸ್ಥೆಗಳ ಮಹತ್ವದ ಸಾಧನೆ

09:25 AM Jun 13, 2020 | mahesh |

ಹೊಸದಿಲ್ಲಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ರಾಷ್ಟ್ರೀಯ ಸಾಂಸ್ಥಿಕ ರ್‍ಯಾಂಕಿಂಗ್‌ ಪ್ರೇಮ್‌ವರ್ಕ್‌ (ಎನ್‌ಐಆರ್‌ಎಫ್)ನ ಶ್ರೇಯಾಂಕ ಪಟ್ಟಿಯಲ್ಲಿ ಮಣಿಪಾಲ ಶಿಕ್ಷಣ ಸಂಸ್ಥೆಗಳು ಬಹುತೇಕ ಪಟ್ಟಿಯಲ್ಲಿ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿವೆ.

Advertisement

ದಂತವೈದ್ಯ ವಿಭಾಗದಲ್ಲಿ ಮಣಿಪಾಲ್‌ ಕಾಲೇಜ್‌ ಆಫ್ ಡೆಂಟಲ್‌ ಕಾಲೇಜ್‌ಗೆ 2ನೇ ಸ್ಥಾನ, ಮಂಗಳೂರಿನಲ್ಲಿರುವ ಮಣಿಪಾಲ್‌ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸಸ್‌ ಸಂಸ್ಥೆಗೆ 6ನೇ ಸ್ಥಾನ ಲಭ್ಯವಾಗಿದೆ. ಫಾರ್ಮಸಿ (ಔಷಧ ವಿಜ್ಞಾನ) ವಿಭಾಗದಲ್ಲಿ ಮಣಿಪಾಲ್‌ ಕಾಲೇಜ್‌ ಆಫ್ ಫಾರ್ಮಾಸ್ಯುಟಿಕಲ್‌ ಸೈನ್ಸಸ್‌ ಸಂಸ್ಥೆ 7ನೇ ರ್‍ಯಾಂಕಿಂಗ್‌ ಪಡೆದಿದೆ. ವೈದ್ಯಕೀಯ ವಿಭಾಗದಲ್ಲಿ ಮಣಿಪಾಲದಲ್ಲಿರುವ ಕಸ್ತೂರ್‌ಬಾ ವೈದ್ಯಕೀಯ ಕಾಲೇಜು 9ನೇ ಸ್ಥಾನ ಪಡೆದಿದೆ ಹಾಗೂ ಮಂಗಳೂರಿನಲ್ಲಿರುವ ಕಸ್ತೂರ್‌ಬಾ ಮೆಡಿಕಲ್‌ ಕಾಲೇಜ್‌ 21ನೇ ಸ್ಥಾನ ಪಡೆದಿದೆ. ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ಮಣಿಪಾಲದಲ್ಲಿರುವ ಟಿ.ಎ. ಪೈ ಮ್ಯಾನೇಜ್‌ಮೆಂಟ್‌ ಇನ್ಸ್ಟಿಟ್ಯೂಟ್‌ 27ನೇ ಸ್ಥಾನ ಗಳಿಸಿದ್ದು, ವಿಶ್ವವಿದ್ಯಾಲಯಗಳ ರ್‍ಯಾಂಕಿಂಗ್‌ನಲ್ಲಿ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಷನ್‌ (ಮಾಹೆ) 8ನೇ ಸ್ಥಾನ ಲಭಿಸಿದೆ. ಇನ್ನುಳಿದಂತೆ, ವಾಸ್ತುಶಿಲ್ಪ ವಿಭಾಗದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಷನ್‌ (ಉಡುಪಿ) ಸಂಸ್ಥೆಗೆ 12ನೇ ಸ್ಥಾನ ಹಾಗೂ ಎಂಜಿನಿಯರಿಂಗ್‌ ವಿಭಾಗದಲ್ಲಿ ಮಣಿಪಾಲ್‌ ಇನ್ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಗೆ 45ನೇ ಸ್ಥಾನ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next