Advertisement
ಶಾಲಾ ವಾಹನ ಚಾಲಕನೊಬ್ಬನನ್ನು ಜೀವಂತ ಹೂತುಹಾಕುವ ದುಷ್ಕರ್ಮಿಗಳ ಪ್ರಯತ್ನವನ್ನು ವಿಫಲಗೊಳಿಸಿರುವ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು, ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಸಮಯ ಮತ್ತು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ತಿಳಿದು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ, ಕೇವಲ ಒಂದು ಗಂಟೆಯೊಳಗೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಜೀವ, ಮುತ್ತು, ಅರ್ಜುನ್ ಮತ್ತು ಮುರಳಿ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮತ್ತೂಬ್ಬ ಆರೋಪಿ ಸಂತೋಷ್ ಎಂಬಾತ ದರೋಡೆ ಪ್ರಕರಣವೊಂದರಲ್ಲಿ ತಲಘಟ್ಟಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇಸ್ರೋ ಲೇಔಟ್ ಬಳಿ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಆರೋಪಿಗಳು, ಆಗಷ್ಟೇ ಶಾಲಾ ಮಕ್ಕಳನ್ನು ಅವರವರ ಮನೆಗಳಿಗೆ ಬಿಟ್ಟು ವಾಪಸ್ ಬರುತ್ತಿದ್ದ ಪ್ರದೀಪ್ ಎಂಬಾತನ ಸ್ಕೂಲ್ ವ್ಯಾನ್‌ಗೆ ಡಿಕ್ಕಿ ಹೊಡೆದಿದ್ದಾರೆ. ಚಾಲಕ ಪ್ರದೀಪ್ ಈ ಬಗ್ಗೆ ಪ್ರಶ್ನಿಸಿದ್ದರಿಂಧ ಕೋಪಗೊಂಢ ಆರೋಪಿಗಳು, ಆತನನ್ನು ಸ್ಮಶಾನಕ್ಕೆ ಹೊತ್ತೂಯ್ದು ಕೊಂದು,
ಹೂತುಹಾಕಲು ನಿರ್ಧರಿಸಿದ್ದರು!
Related Articles
Advertisement
ಹೂಳ್ಳೋದಷ್ಟೇ ಬಾಕಿಯಿತ್ತು!ಪ್ರದೀಪ್‌ನನ್ನು ಸ್ಮಶಾನಕ್ಕೆ ಕರೆದೊಯ್ದ ಆರೋಪಿಗಳು ಅಲ್ಲಿಯೇ ಮದ್ಯ ಸೇವಿಸಿದ್ದಾರೆ. ನಂತರ ಪ್ರದೀಪ್‌ನನ್ನು ಮನಸೋಯಿಚ್ಛೆ ಥಳಿಸಿದ್ದಾರೆ. ಪರಿಣಾಮ ಪ್ರದೀಪ್‌ಗೆ ಮೂಗು, ಬಾಯಿ ಮತ್ತು ಕೈ, ಕಾಲುಗಳಲ್ಲಿ ರಕ್ತಸ್ರಾವವಾಗಿ
ಅಸ್ವಸ್ಥರಾಗಿ ಕುಸಿದಿದ್ದಾರೆ. ಈ ವೇಳೆ ಆರೋಪಿಗಳು ಪಕ್ಕದಲ್ಲೇ ಗುಂಡಿ ತಗೆಯಲು ಮುಂದಾಗಿದ್ದಾರೆ. ಆಗಲೇ ರಾತ್ರಿ 7.30 ಆದ್ದರಿಂದ ಗುಂಡಿ ತೆಗೆಯಲು ಮೊಬೈಲ್ ಟಾರ್ಚ್ ಗಳನ್ನು ಬಳಸಿದ್ದಾರೆ. ಜತೆಗೆ ಕುಡಿದ ಮತ್ತಿನಲ್ಲಿ ಜೋರಾಗಿ ಮಾತನಾಡಿದ್ದಾರೆ. ಇತ್ತ ಆರೋಪಿಗಳಿಗಾಗಿ ಸ್ಮಶಾನಗಳನ್ನು ಜಾಲಾಡುತ್ತಿದ್ದ ತಂಡವೊಂದು ಅದೇ ಸ್ಮಶಾನಕ್ಕೆ ಬಂದಿದೆ. ಪೊಲೀಸರನ್ನು ಕಂಡ ಆರೋಪಿಗಳು ಅಲ್ಲಿಂದ ಕಾಲ್ಕಿಳಲು ಯತ್ನಿಸಿದ್ದಾರೆ. ಆದರೆ ಸುತ್ತ ನಾಕಾಬಂದಿ ಹಾಕಿದ ಪೊಲೀಶರು, ಎಲ್ಲರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಪ್ರದೀಪ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ವಿವರಿಸಿದರು. ಕೊಂದೇ ಬಿಡೋಣ ಎಂದು ತಮಿಳಲ್ಲಿ ಮಾತು
ಕಾರು ಮಾಲೀಕ ಕೆಂಚೇಗೌಡರಿಗೆ ಪ್ರದೀಪ್ ಕರೆ ಮಾಡಿದ ವೇಳೆ, ಹಿನ್ನೆಲೆಯಲ್ಲಿ ಆರೋಪಿಗಳು ತಮಿಳು ಭಾಷೆಯಲ್ಲಿ ಮಾತನಾಡುವುದು ಕೆಂಚೇಗೌಡ ಅವರ ಕಿವಿಗೆ ಬಿದ್ದಿತ್ತು. ಪ್ರದೀಪ್‌ನನ್ನು ಅಪಹರಿಸಿ ಸ್ಮಶಾನಕ್ಕೆ ಕರೆದೊಯ್ದು ಮುಗಿಸಿ ಬಿಡೋಣ,’ ಎಂದು ಆರೋಪಿಗಳು ಮಾತನಾಡಿಕೊಂಡಿದ್ದರು. ಈ ಮಾತುಕತೆ ಕೆಂಚೇಗೌಡರ ಮೊಬೈಲ್‌ನಲ್ಲಿ ರೆಕಾರ್ಡ್‌ಗಿತ್ತು. ಆರೋಪಿಗಳ ಭಾಷೆ, ಮಾತನಾಡುವ ರೀತಿ ಗಮನಿಸಿದ ಪೊಲೀಸರಿಗೆ ಇದು ಸ್ಲಂ ಯುವಕರ ಕೃತ್ಯ ಎಂಬುದು ಖಾತ್ರಿಯಾಗಿತ್ತು ಮೊಬೈಲ್ ನೆಟ್ವರ್ಕ್ ಕೊಟ್ಟ ಸುಳಿವು
ದೂರು ದಾಖಲಿಸಿಕೊಂಡ ಕೂಡಲೆ ಆರೋಪಿಗಳ ಬೆನ್ನುಬಿದ್ದ ತನಿಖಾ ತಂಡಗಳು, ಪ್ರದೀಪ್‌ರ ಮೊಬೈಲ್ ನೆಟ್‌ವರ್ಕ್ ಪರಿಶೀಲಿಸಿದ್ದು, ಕುಮಾರಸ್ವಾಮಿ ಲೇಔಟ್‌ನಿಂದ ಬನಶಂಕರಿಗೆ ಹೋಗುವ ಮಾರ್ಗ ಮಧ್ಯೆ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ. ನಂತರ ಮೂರು ವಿಶೇಷ ತಂಡಗಳು ಬನಶಂಕರಿ, ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಸ್ಲಂಗಳು, ಪಾರ್ಕ್‌ಗಳು ಹಾಗೂ ಸ್ಮಶಾನಗಳನ್ನು ಶೋಧಿಸಿವೆ. ಈ ವೇಳೇ ಕುಮಾರಸ್ವಾಮಿ ಲೇಔಟ್ ಮತ್ತು
ಯಾರಬ್‌ನಗರದ ಮಾರ್ಗ ಮಧ್ಯೆ ಇರುವ ಸ್ಮಶಾನದಲ್ಲಿ ಆರೋಪಿಗಳಿರುವುದು ಪತ್ತೆಯಾಯಿತು ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. ಸ್ಮಶಾನದ ಸಲಹೆ ನೀಡಿದ್ದು ಅಪ್ರಾಪ್ತ
ಕಾನೂನು ಸಂಘರ್ಷಕ್ಕೊಳಗಾದ (ಅಪ್ರಾಪ್ತ) ಹುಡುಗನೊಬ್ಬ ಈ ಕೃತ್ಯದಲ್ಲಿ ಆರೋಪಿಗಳಿಗೆ ಸಹಾಯ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದ್ದು, ಆತನನ್ನು ಭಾನುವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ. ಸೋಮವಾರ ಬೆಳಗ್ಗೆ ತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಆರೋಪಿಗಳು ದೀಪ್‌ನನ್ನು ಅಪಹರಿಸಿದಾಗ
ಈ ಯುವಕ “ನಮ್ಮ ತಾತ ಕೆಲಸ ಮಾಡುವ ಸ್ಮಶಾನಕ್ಕೆ ಕರೆದೊಯ್ದು ಅಲ್ಲಿಯೇ ಹೂತು ಬಿಡೋಣ,’ ಎಂದು ಸಲಹೆ ನೀಡಿದ್ದ. ಈ ನಡುವೆ ಆರೋಪಿಗಳ ಪೈಕಿ ಸಂತೋಷ್ ಎಂಬಾತ ಸ್ಮಶಾನದಿಂದ ತಪ್ಪಿಸಿಕೊಂಡು ತಲ್ಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿದ್ದ. ಇದೇ ವೇಳೆ ದರೋಡೆ ಪ್ರಕರಣವೊಂದರ ತನಿಖೇ ಕೈಗೊಂಡಿದ್ದ ತಲಘಟ್ಟಪುರ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ವಿಚಾರಣೆ ನಡೆಸಿದಾಗ ಅಪಹರಣದಲ್ಲಿ ಭಾಗಿಯಾಗಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.