Advertisement

ಸಂಸ್ಥೆಯ ಪ್ರಗತಿಗೆ ಸಹಕರಿಸಿದವರಿಗೆ ಕೃತಜ್ಞತೆ: ರತ್ನಾಕರ ಶೆಟ್ಟಿ

02:51 PM Sep 15, 2019 | Team Udayavani |

ಮುಂಬಯಿ, ಸೆ. 14: ಮಾತೃಭೂಮಿ ಕೋ. ಆಪರೇಟಿವ್‌ ಕ್ರೆಡಿಟ್ ಸೊಸೈಟಿಯು ಸಮಾಜದ ಒಂದು ಪ್ರತಿಷ್ಠಿತ ಆರ್ಥಿಕ ಸಂಸ್ಥೆಯಾಗಿದ್ದು, ಇದರ ಶಾಖೆಯನ್ನು ಇತರ ರಾಜ್ಯಗಳಲ್ಲಿ ತೆರೆಯುವುದರ ಮೂಲಕ ಇದರ ಸೇವೆಯನ್ನು ಮಲ್ಟಿಸ್ಟೇಟ್ ಆಗಿ ಪರಿವರ್ತಿಸಬಹುದು. ಇದರಿಂದ ಇನ್ನಷ್ಟು ಪ್ರಗತಿ ಪಥದತ್ತ ಸಾಗುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ನಮ್ಮೆಲ್ಲರ ಉದ್ದೇಶಿತ ಬ್ಯಾಂಕ್‌ ಆಗಿ ಪರಿವರ್ತಿಸುವ ಕಾರ್ಯವು ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಆದಷ್ಟು ಬೇಗನೇ ಈ ಕಾರ್ಯಕ್ಕೆ ಯಶಸ್ಸು ದೊರೆಯಲಿದೆ ಎಂದು ಮಾತೃಭೂಮಿ ಕೋ ಆಪರೇಟಿವ್‌ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಮುಂಡ್ಕೂರು ರತ್ನಾಕರ್‌ ಶೆಟ್ಟಿ ಅವರು ನುಡಿದರು.

Advertisement

ಸೆ. 14ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದ ಮಾತೃಭೂಮಿ ಕೋ ಆಪರೇಟಿವ್‌ ಕ್ರೆಡಿಟ್ ಸೊಸೈಟಿಯ 31ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಆರ್ಥಿಕ ವರ್ಷದಲ್ಲಿ ನಮ್ಮ ಸಂಸ್ಥೆಯು ಅಭಿವೃದ್ಧಿಯ ಪಥದಲ್ಲಿದ್ದು, ಉತ್ತಮವಾದ ಲಾಭವನ್ನು ಗಳಿಸಿದೆ. ಠೇವಣಿ ಸಂಗ್ರಹ ಹಾಗೂ ಸಾಲ ವಸೂಲಾತಿ ಉತ್ತಮವಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಮಾತೃಭೂಮಿ ಕೋ ಆಪರೇಟಿವ್‌ ಕ್ರೆಡಿಟ್ ಸೊಸೈಟಿಯ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದು ನುಡಿದರು.

ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಸಂಘಟಿತರಾಗಿ ಕಾರ್ಯನಿರ್ವಹಿಸಿದಾಗ ನಮ್ಮ ಉದ್ದೇಶಿತ ಕಾರ್ಯಗಳು ಯಶಸ್ವಿಯಾಗಲು ಸಾಧ್ಯ. ಪ್ರಸ್ತುತ ಆಡಳಿತ ಸಮಿತಿಗೆ ಎಲ್ಲರೂ ಸಹಕರಿಸಿ ಪ್ರೋತ್ಸಾಹಿಸಬೇಕು ಎಂದು ನುಡಿದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಮಾತನಾಡಿ, ಮಾತೃಭೂಮಿ ಸೊಸೈಟಿಯು ನಮ್ಮ ಹೆಮ್ಮೆಯ ಆರ್ಥಿಕ ಸಂಸ್ಥೆಯಾಗಿದ್ದು, ಇದನ್ನು ಬ್ಯಾಂಕ್‌ ಆಗಿ ಪರಿವರ್ತಿಸುವ ನಮ್ಮ ಕನಸು ಆದಷ್ಟು ಬೇಗ ನೆರವೇರಲಿ. ನಾವೆಲ್ಲರೂ ಒಂದಾಗಿ ಈ ಕೆಲಸದಲ್ಲಿ ಸಹಕರಿಸಬೇಕು ಎಂದರು.

ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಸುಭಾಶ್‌ ಶೆಟ್ಟಿ ಅವರು ಮಾತನಾಡಿ, ಸಮಾಜ ಬಾಂಧವರು ನಮ್ಮ ಸಮಾಜದ ಮಾತೃಭೂಮಿ ಸೊಸೈಟಿ ಹಾಗೂ ನ್ಯಾಯ ಮಂಡಳಿಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿಸಿದರು.

Advertisement

ಮಾತೃಭೂಮಿ ಸೊಸೈಟಿಯ ಮಾಜಿ ಕಾರ್ಯಾಧ್ಯಕ್ಷ ಕೆ. ಡಿ. ಶೆಟ್ಟಿ ಅವರು ಮಾತನಾಡಿ, ಪ್ರಸ್ತುತ ಆಡಳಿತ ಸಮಿತಿ ಹಾಗೂ ನೌಕರವೃಂದದ ಪರಿಶ್ರಮದಿಂದ ಈ ಸಂಸ್ಥೆಯು ಉತ್ತಮ ಲಾಭದೊಂದಿಗೆ ಪ್ರಗತಿಪಥದಲ್ಲಿ ಸಾಗುತ್ತಿರುವುದು ಅಭಿನಂದನಾರ್ಹ. ನಾವೆಲ್ಲರೂ ಒಟ್ಟಾಗಿ ಈ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದರು.

ಗಣ್ಯರು ದೀಪಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಗೌರವ ಕಾರ್ಯದರ್ಶಿ ಸಿಎ ರಮೇಶ್‌ ಶೆಟ್ಟಿ ಅವರು ವಾರ್ಷಿಕ ವರದಿ ಮಂಡಿಸಿದರು. ಗೌರವ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ ಅವರು ಗತವಾರ್ಷಿಕ ಆರ್ಥಿಕ ವರದಿಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಆಂತರಿಕ ಲೆಕ್ಕ ಪರಿಶೋಧಕರನ್ನು ಆಯ್ಕೆಮಾಡಲಾಯಿತು.

ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ಪ್ರವೀಣ್‌ ಬಿ. ಶೆಟ್ಟಿ, ಉಮಾ ಕೆ. ಶೆಟ್ಟಿ, ಮಹೇಶ್‌ ಎಸ್‌. ಶೆಟ್ಟಿ, ಡಾ| ಆರ್‌. ಕೆ. ಶೆಟ್ಟಿ ಇವರನ್ನು ಗೌರವಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕ ಗಳಿಸಿದ ಕು| ಸುರಭಿ ಆರ್‌. ಶೆಟ್ಟಿ, ಸೃಷ್ಟಿ ಎಸ್‌. ಶೆಟ್ಟಿ, ಕಿರಣ್‌ ಕೆ. ಪಾಟೀಲ್, ಅಮೋಲ್ ಎಸ್‌. ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.

ದೈನಂದಿನ ಕಲೆಕ್ಷನ್‌ನಲ್ಲಿ ಉತ್ತಮ ಸಾಧನೆಗೈದ ತಾರಾನಾಥ ಶೆಟ್ಟಿ, ಸಂಧ್ಯಾ ಡಿ. ಮಾಲಿ, ಸದಾಶಿವ ಎಸ್‌. ಶೆಟ್ಟಿ, ಸಂದೇಶ್‌ ಆರ್‌. ಶೆಟ್ಟಿ, ಪುರುಷೋತ್ತಮ ಎಂ. ಸುವರ್ಣ, ಸದಾಶಿವ ಎಂ. ಶೆಟ್ಟಿ, ಪ್ರೇಮನಾಥ್‌ ಅಮೀನ್‌, ಶೇಖರ್‌ ಶೆಟ್ಟಿ, ಪ್ರಸಾದ್‌ ಎಂ. ಶೆಟ್ಟಿ, ಮಹಾಬಲ ಟಿ. ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಉಪ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್‌ದಾಸ್‌ ಶೆಟ್ಟಿ, ನಿರ್ದೇಶಕರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಮಹೇಶ್‌ ಎಸ್‌. ಶೆಟ್ಟಿ, ಡಾ| ಆರ್‌. ಕೆ. ಶೆಟ್ಟಿ, ಉಮಾ ಕೆ. ಶೆಟ್ಟಿ, ಸುಜಾತಾ ಜಿ. ಶೆಟ್ಟಿ, ಸಂತೋಷ್‌ ಎಂ. ಜವಾಂದಲೆ, ಸಿಇಒ ಮಂಜಯ್ಯ ಸಿ. ಶೆಟ್ಟಿ ಅವರು ಉಪಸ್ಥಿತರಿದ್ದರು.

ಹಿರಿಯ ಪ್ರಬಂಧಕಿ ಮಲ್ಲಿಕಾ ಪಿ. ಶೆಟ್ಟಿ, ಪ್ರಬಂಧಕಿ ಶಶಿಕಲಾ ಎಸ್‌. ಶೆಟ್ಟಿ, ಕಿಶೋರ್‌ ಎಂ. ಪಾಟೀಲ್, ಶೇಖರ್‌ ಬಿ. ಶೆಟ್ಟಿ, ಸ್ಪೆಷಲ್ ರಿಕವರಿ ಆಫೀಸರ್‌ ಹರೀಶ್‌ ಟಿ. ಶೆಟ್ಟಿ ಮೊದಲಾದವರು ಸಹಕರಿಸಿದರು. ಉಪ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್‌ದಾಸ್‌ ಶೆಟ್ಟಿ ವಂದಿಸಿದರು. ನಿರ್ದೇಶಕ ಮಂಡಳಿ ಹಾಗೂ, ಸಲಹಾ ಸಮಿತಿಯ ಸದಸ್ಯ ರುಗಳು ಹಾಗೂ ಶೇರುದಾರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

 

ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next