Advertisement

ಮಳೆಯಲ್ಲೇ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಸಿದ್ದು

05:26 PM Jun 09, 2018 | Team Udayavani |

ಬಾಗಲಕೋಟೆ: ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಆಯ್ಕೆಯಾದ ಮಾಜಿ ಸಿಎಂ ಸಿದ್ದರಾಮಯ್ಯ, ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಎರಡು ದಿನಗಳಿಂದ ಕ್ಷೇತ್ರ ಸಂಚಾರ ಆರಂಭಿಸಿದ್ದು, ಶುಕ್ರವಾರ ಮಳೆಯಲ್ಲೇ ವಿವಿಧ ಗ್ರಾಮಗಳಿಗೆ ತೆರಳಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

Advertisement

ಬೆಳಗ್ಗೆ ಆಡಗಲ್‌ ಗ್ರಾಮದಿಂದ 2ನೇ ದಿನದ ಕ್ಷೇತ್ರ ಸಂಚಾರ ಆಂಭಿಸಿದ ಅವರು, ಕುಟಕನಕೇರಿ, ಹಿರೇಮುಚ್ಚಳಗುಡ್ಡ, ಕೆಂದೂರ, ನಂದಿಕೇಶ್ವರ, ಬಿಎನ್‌ ಜಾಲಿಹಾಳ, ಪಟ್ಟದಕಲ್ಲ, ಕಾಟಾಪುರ, ಮಂಗಳಗುಡ್ಡ, ನಾಗರಾಳ ಎಸ್‌ .ಪಿ, ಲಾದಯಗುಂದಿ, ಗುಳೇದಗುಡ್ಡ ಪಟ್ಟಣ ಸೇರಿದಂತೆ ಒಂದು ಪುರಸಭೆ ಹಾಗೂ 10 ಗ್ರಾಪಂ ಕೇಂದ್ರ ಸ್ಥಾನಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಜತೆಗೆ ಸದಾ ನಿಮ್ಮೊಂದಿಗೆ ಇರುವುದಾಗಿ ಭರವಸೆ ನೀಡಿದರು. ಸಿದ್ದರಾಮಯ್ಯ ಹೋದಲೆಲ್ಲ ಡೊಳ್ಳು ಕುಣಿತದೊಂದಿಗೆ ಆಯಾ ಗ್ರಾಮಸ್ಥರು ಸ್ವಾಗತಿಸಿದರು. ಇದೇ ವೇಳೆ ನೂರಾರು ಮಹಿಳೆಯರು, ಆರತಿ ಎತ್ತಿ ಸಿದ್ದರಾಮಯ್ಯಗೆ ಶುಭ ಕೋರಿದರು.

ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕ ಭಾಷಣ ಮಾಡಿದ ಸಿದ್ದರಾಮಯ್ಯ, ಚಾಮುಂಡೇಶ್ವರಿಯಲ್ಲಿ ಷಡ್ಯಂತ್ರ ನಡೆಸಿ ನನ್ನನ್ನು ಸೋಲಿಸಿದರು. ಬಾದಾಮಿಯಲ್ಲೂ ನನ್ನ ಸೋಲಿಸಲು ದೊಡ್ಡ ಷಡ್ಯಂತ್ರ ನಡೆದಿತ್ತು. ಆದರೂ, ಬಾದಾಮಿ ಜನರು ನನ್ನ ಕೈ ಹಿಡಿದ್ದೀರಿ. ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ಬಾದಾಮಿಯಲ್ಲೇ ಮನೆ ಮಾಡಿ, ಕ್ಷೇತ್ರದ ಜನರ ಕಷ್ಟ-ಸುಃಖಕ್ಕೆ ಸ್ಪಂದಿಸುತ್ತೇನೆ. ಕ್ಷೇತ್ರದ ಎಲ್ಲ ಗ್ರಾಮಗಳ ಜನರು ತಮ್ಮ ಏನೇ ಸಮಸ್ಯೆ ಇದ್ದರೂ ನೇರವಾಗಿ ನನ್ನನ್ನು ಭೇಟಿಯಾಗಿ ಹೇಳಿಕೊಳ್ಳಬಹುದು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ, ಜಿ.ಪಂ. ಅಧ್ಯಕ್ಷೆ ವೀಣಾ ಕಾಶಪ್ಪನವರ, ಸಿದ್ದರಾಮಯ್ಯ ಅವರೊಂದಿಗೆ ಕಾಣಿಸಿಕೊಂಡರು. ಮಾಜಿ ಸಚಿವರಾದ ಎಚ್‌.ವೈ. ಮೇಟಿ, ಬಿ.ಬಿ. ಚಿಮ್ಮನಕಟ್ಟಿ, ಕಾಂಗ್ರೆಸ್‌ ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಡಾ|ದೇವರಾಜ ಪಾಟೀಲ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next