Advertisement

ಡೇರಿ ಇಲಾಖೆಯಿಂದ ಮೇವು ಹುಲ್ಲು ಕ್ರಾಂತಿ

10:58 PM Feb 16, 2020 | Sriram |

ಕಾಸರಗೋಡು: ಹೈನುಗಾರಿಕೆಯ ಮೂಲಕ ಹಾಲು ಉತ್ಪಾದನೆಯ ಆದಾಯವಲ್ಲದೆ, ಹೈನುಗಾರಿಕೆಯಿಲ್ಲದಿ ದ್ದರೂ ಆದಾಯ ಲಭಿಸುವ ನಿಟ್ಟಿನಲ್ಲಿ ಮೇವು ಹುಲ್ಲು ಬೆಳೆಸುವ ಹೊಸ ಕ್ರಾಂತಿಗೆ ಹೈನುಗಾರಿಕೆ ಇಲಾಖೆ ಈಗಾಗಲೇ ಚಾಲನೆ ನೀಡಿದೆ.

Advertisement

ಬೇಸಗೆ ಕಾಲ ಪ್ರಾರಂಭವಾಗುತ್ತಿ ದ್ದಂತೆಯೇ ಹೈನುಗಾರಿಕೆ ಕೃಷಿಕರು ಎದುರಿ ಸುತ್ತಿರುವ ದೊಡ್ಡ ಸಮಸ್ಯೆಯೇ ಮೇವು ಹುಲ್ಲು ಕೊರತೆಯಾಗಿದೆ. ಮೇಲು ಹುಲ್ಲು ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿಯೇ ಹೈನುಗಾರಿಕೆ ಇಲಾಖೆಯ ಬರಡು ಭೂಮಿ ಯಲ್ಲಿ ಮೇವು ಹುಲ್ಲು ಕೃಷಿ ನಡೆಸಲು ಯೋಜನೆಯನ್ನು ಇನ್ನಷ್ಟು ವಿಸ್ತರಿಸುತ್ತಿದೆ.

ಬರಡು ಭೂಮಿಯಲ್ಲಿ ಮೇವು ಹುಲ್ಲು ಬೆಳೆಸುವುದಕ್ಕಾಗಿಯೇ ಕೃಷಿಗಾಗಿ ಒಂದು ಹೆಕ್ಟೇರ್‌ ಸ್ಥಳದಲ್ಲಿ ಕೃಷಿ ನಡೆಸುವುದಕ್ಕಾಗಿ ಬ್ಲಾಕ್‌ ಮಟ್ಟದಲ್ಲಿ ಹೈನುಗಾರಿಕೆ ಇಲಾಖೆಯು 93,000 ರೂ. ನೀಡುವುದು. ಹಸಿರು ಮೇವು ಹುಲ್ಲು ಉತ್ಪಾದನೆಯೊಂದಿಗೆ ಕ್ಷೀರ ಕೃಷಿಕರಿಗೆ ಕಡಿಮೆ ವೆಚ್ಚದಲ್ಲಿ ಮೇವು ಲಭಿಸುವುದು. ಯಂತ್ರೋಪಕರಣಗಳ ಸಹಾಯದಿಂದ ವಾಣಿಜ್ಯ ಕೃಷಿಯಾಗಿ ವಿಸ್ತರಿಸುವುದು. ಉತ್ಪಾದಕತೆ ಮತ್ತು ಪೌಷ್ಠಿಕಾಂಶ ಹೊಂದಿರುವ ಮೇವು ಹುಲ್ಲನ್ನು ಕೃಷಿಕರಿಗೆ ತಲುಪಿಸುವುದು. ಖಾಸಗಿ ವ್ಯಕ್ತಿಗಳ ಒಡೆತನದ ಜಮೀನುಗಳಲ್ಲಿ ಮೇವು ಕೃಷಿ ಯೋಜನೆ ನಡೆಸಲು ಅವಕಾಶವಿರುವುದು.

ಕಾರಡ್ಕ ಬ್ಲಾಕ್‌ ಸ್ವಾಧೀನದಲ್ಲಿರುವ ಕರಿವೇಡಗಂ ಆಲುಂಕಲ್‌ ಜೋಸೆಫ್‌ ಅಗಸ್ಟಿನ್‌ 2019-2020 ರ ಆರ್ಥಿಕ ವರ್ಷದ ಮೇವು ಹುಲ್ಲು ಕೃಷಿ ಉದ್ಯಮಿಗಳಾಗಿ ಆಯ್ಕೆಯಾಗಿದ್ದಾರೆ. ಕರಿವೇಡಗಂ ಬಳಿ ಒಂದು ಹೆಕ್ಟೇರ್‌ ಬರಡು ಭೂಮಿಯಲ್ಲಿ ಮೇವು ಹುಲ್ಲು ಕೃಷಿ ನಡೆಸುತ್ತಿದ್ದಾರೆ. ಐದು ದನಗಳೊಂದಿಗೆ ಹೈನುಗಾರಿಕೆ ಆರಂಭಿಸಿದ ಜೋಸೆಫ್‌ ಇದೀಗ ಬ್ಲಾಕ್‌ನಿಂದ ಐದು ದನಗಳು ಲಭಿಸುವುದರೊಂದಿಗೆ 10 ದನಗಳೊಂದಿಗೆ ಹೈನುಗಾರಿಕೆಯಲ್ಲಿ ಸಕ್ರಿಯರಾಗಿದ್ದಾರೆ. ಇಂದು ಜೋಸೆಫ್‌ ದನ, ಕರುಗಳು ಸೇರಿದಂತೆ 35 ಜಾನು ವಾರುಗಳ ಮಾಲಕರಾಗಿ ಕಾರಡ್ಕ ಬ್ಲಾಕ್‌ನಲ್ಲಿಯೇ ಅತ್ಯಧಿಕ ಹಾಲು ಉತ್ಪಾದಿಸುವ ಕೃಷಿಕರಾಗಿದ್ದಾರೆ. ತನ್ನ ಬಳಿಯಿರುವ ಜಾನುವಾರುಗಳಿಗಾಗಿ ಜೋಸೆಫ್‌ ಮೇವು ಹುಲ್ಲು ಕೃಷಿ ನಡೆಸಿದ್ದಾರೆ.

ನೀವೂ ಮೇವು ಹುಲ್ಲು ಉದ್ಯಮಿಗಳಾಗಬಹುದು
ಸ್ವಂತ ಅಗತ್ಯಕ್ಕೆ ಉಪಯೋಗಿಸಿದ ಬಳಿಕ ಉಳಿಯುವ ಮೇವು ಹುಲ್ಲನ್ನು ಇತರ ಕೃಷಿಕರಿಗೆ ನೀಡಿ ಅಧಿಕ ಲಾಭವನ್ನು ಪಡೆಯ ಬಹುದು. ಹಸಿರು ಮೇವು ಹುಲ್ಲನ್ನು ಕಿಲೋ ಗ್ರಾಂ ರೂಪದಲ್ಲಿ ಮಾರಾಟ ಮಾಡಬಹುದು. ಕೀಟ ನಿಯಂತ್ರಣ ಅಗತ್ಯವಿಲ್ಲದ ಮೇವು ಹುಲ್ಲು ಕೃಷಿಗೆ ಮುಖ್ಯವಾಗಿ ಗೊಬ್ಬರ ಮತ್ತು ನೀರು ಅಗತ್ಯವಾಗಿದೆ. ಹುಲ್ಲು ಕೃಷಿ ಚಟುವಟಿಕೆ ನಡೆಸುವವರ ಜಮೀನಿಗೆ ಬ್ಲಾ.ಪಂ. ಅಧಿಕಾರಿ ತೆರಳಿ ಬೇಕಾದ ಸಹಾಯ ವನ್ನು ನೀಡಲಾಗುವುದು. ಹುಲ್ಲು ಕೃಷಿಗಾಗಿ ಹೈನುಗಾರಿಕೆ ಇಲಾಖೆ ನೀಡುವ ಸೌಲಭ್ಯ ಗಳಿಗಾಗಿ ಅರ್ಜಿ ಸಲ್ಲಿಸಲು ಭೂತೆರಿಗೆ ರಶೀದಿ, ಆಧಾರ್‌ ಕಾರ್ಡ್‌, ಪಡಿತರ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ಗಳ ನಕಲು ಪ್ರತಿ ಯೊಂದಿಗೆ, 180 ರೂ. ನೋಂದಣಿ ಶುಲ್ಕ, 200 ರೂ. ಸ್ಟಾಂಪ್‌ ಪೇಪರ್‌ನಲ್ಲಿ ಮೂರು ವರ್ಷಗಳ ನಿರ್ವಹಣೆಯ ಖಾತ್ರಿ ನೀಡಬೇಕು. ಕೃಷಿ ಸ್ಥಳದಲ್ಲಿ ಯೋಜನೆಯ ಹೆಸರು, ಯೂನಿಟ್‌ಹೆಸರು, ವಿಸ್ತೀರ್ಣವನ್ನು ಒಳಗೊಂಡಿರುವ ಬೋರ್ಡ್‌, ಫಲಾನುಭವಿಯಿರುವ ಫೋಟೋ ಸಹಿತ ಬ್ಲಾಕ್‌ನಲ್ಲಿ ನೀಡಬೇಕು ಎಂದು ಬ್ಲಾಕ್‌ ಡೈರಿ ವಿಸ್ತರಣಾಧಿಕಾರಿ ಸಿ.ಎ. ಜಾಸ್ಮಿನ್‌ ತಿಳಿಸಿದ್ದಾರೆ.

Advertisement

ಹುಲ್ಲು ಕೃಷಿ ಯಶಸ್ವಿ
ಮೇವು ಹುಲ್ಲು ಕೃಷಿಯ ಪ್ರಾಮುಖ್ಯ ಮತ್ತು ಪ್ರಸ್ತುತತೆಯ ಬಗ್ಗೆ ಸಾರ್ವಜನಿ ಕರಿಗೆ ತಿಳಿಸುವುದು ಮತ್ತು ಮೇವು ಮಾರು ಕಟ್ಟೆಯನ್ನು ಸೃಷ್ಟಿಸಿ, ಮೇವು ಕೃಷಿ ಮಾಡಲು ಸ್ಥಳವಿಲ್ಲದ ಹೈನುಗಾರಿಕೆ ಕೃಷಿಕರಿಗೆ ಮೇವು ಲಭ್ಯವಾಗಿಸುವುದು ಯೋಜನೆಯ ಉದ್ದೇಶವಾಗಿದೆ. ಜಿಲ್ಲೆಯಲ್ಲಿ 2017-18ನೇ ಆರ್ಥಿಕ ವರ್ಷದಲ್ಲಿ ಐದು ಹೆಕ್ಟರ್‌ ಸ್ಥಳದಲ್ಲಿ ಮೇವು ಹುಲ್ಲು ಕೃಷಿ ಯಶಸ್ವಿಯಾಗಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next