ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಮ ಕ್ರಾಸ್ನಿಂದ ಬಳ್ಕುಂಜೆಯ ಪಶು ಆಸ್ಪತ್ರೆಯ ತನಕ ರಸ್ತೆಯ ಕೆಲವು ಪ್ರದೇಶದಲ್ಲಿ ರಸ್ತೆಯ ಎರಡು ಭಾಗದಲ್ಲಿ ಹುಲ್ಲು ಬೆಳೆದು ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಶಾಲಾ – ಕಾಲೇಜುಗಳಿರುವ ಪರಿಸರ ಇದಾಗಿದ್ದು, ನಿತ್ಯ ಸಾವಿರಾರು ವಿದ್ಯಾರ್ಥಿ ಗಳು ಇಲ್ಲಿ ಸಂಚರಿಸುತ್ತಾರೆ. ಶಾಲಾ ಮಕ್ಕಳ ವಾಹನ ಇಲ್ಲಿ ದಿನ ಸಂಚರಿಸುವುದರಿಂದ, ಕಿರಿದಾದ ಜಾಗದಿಂದ ಎದುರಿನಿಂದ ಬರುವ ವಾಹನಗಳಿಗೆ ಜಾಗ ಕೊಡುವುದು ಸಮಸ್ಯೆಯಾಗಿದೆ. ಜತೆಗೆ ಈ ವೇಳೆಯಲ್ಲಿ ಪಾದಚಾರಿಗಳು ಬಹಳ ತೊಂದರೆಗೆ ಒಳಪಡುತ್ತಿದ್ದಾರೆ.
ಹೆಚ್ಚುತ್ತಿರುವ ಅಪಘಾತ
ಕಳೆದ ಕಲವು ದಿನಗಳ ಹಿಂದೆ ಅಪಘಾತ ಸಂಭವಿಸಿದೆ. ಅಗಲ ಕಿರಿದಾದ ರೆಸ್ತೆಯಲ್ಲಿ ತಿರುವು ಜಾಸ್ತಿ ಇರುವುದರಿಂದ ಅಪಘಾತಗಳು ಜಾಸ್ತಿ ಸಂಭವಿಸುತ್ತಿದೆ. ಆದುದರಿಂದ ಸಂಬಂಧ ಪಟ್ಟ ಇಲಾಖೆಯವರು ಹಾಗೂ ಗ್ರಾಮ ಪಂಚಾಯತ್ ಈ ಸಮಸ್ಯೆಯ ಕಡೆ ಗಮನ ಹರಿಸಿ ಹುಲ್ಲು ಪೊದೆ ತರೆವು ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಕೊಡಬೇಕಾಗಿದೆ.
Related Articles
ಇದರೊಂದಿಗೆ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ಪಲಿಮಾರಿಗೆ ಹೋಗುವ ಪ್ರಮುಖ ರಸ್ತೆ ಇದಾಗಿದ್ದು, ಈ ರಸ್ತೆಯನ್ನು ಇನ್ನಷ್ಟು ಅಗಲಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ಅಗತ್ಯವಿದೆ.
ಕುಸಿದ ಮೋರಿ
ಬಳ್ಕುಂಜೆ ಪಶು ವೈದ್ಯ ಆಸ್ಪತ್ರೆಯ ಸಮೀಪದಲ್ಲಿ ಒಂದು ಬದಿಯಲ್ಲಿ ಮೋರಿ ಕುಸಿದು ಹೋಗಿರುವುದರಿಂದ ದೊಡ್ಡ ಹೊಂಡ ಉಂಟಾಗಿದ್ದು ಅಪಾಯಕಾರಿಯಾಗಿದೆ ಹಾಗೂ ಸುತ್ತಲು ಹುಲ್ಲು ಬೆಳೆದಿದ್ದು ಹತ್ತಿರ ಬರುವ ತನಕ ಹೊಂಡ ಕಾಣುವುದಿಲ್ಲ , ಇದರಿಂದ ದ್ವಿಚಕ್ರ ಚಾಲಕರು ಬಿದ್ದು, ಗಾಯ ಮಾಡಿಕೊಂಡ ಘಟನೆಯೂ ನಡೆದಿದೆ.