ದರ್ಶನ್ ಹಾಗೂ ಸುದೀಪ್ ಅವರನ್ನು ಒಟ್ಟಾಗಿ, ಒಂದೇ ಚಿತ್ರದಲ್ಲಿ ನೋಡಬೇಕೆಂಬ ಆಸೆಅಭಿಮಾನಿಗಳದ್ದು.ಆದರೆ, ಅವರಿಬ್ಬರುದೂರವೇ ಇದ್ದಾರೆ. ಆದರೆ, ಕಲಾವಿದ ಕರಣ್ ಆಚಾರ್ಯಅಭಿಮಾನಿಗಳ ಆಸೆ ಈಡೇರಿಸಿದ್ದಾರೆ. ಅದು ತಮ್ಮ ಕಲೆಯಮೂಲಕ. ರಾಮ ಮತ್ತು ಆಂಜನೇಯನ ಗೆಟಪ್‌ನಲ್ಲಿ ದರ್ಶನ್ ಹಾಗೂ ಸುದೀಪ್ ಅವರನ್ನು ಚಿತ್ರೀಸಿದ್ದಾರೆ. ಇದು ಅಭಿಮಾನಿಗಳ ಕೋರಿಕೆಯ ಮೇರೆಗೆ ಬಿಡಿಸಿದ ಚಿತ್ರ. ಸದ್ಯ ಈ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರು ನಟರ ಅಭಿಮಾನಿಗಳು ಇದನ್ನು ಇಷ್ಟಪಡುತ್ತಿದ್ದಾರೆ.
ರಂಗನಾಯಕನಿಗೆ ಅರಮನೆ ಸೆಟ್ :
ನಟ ಜಗ್ಗೇಶ್ ಹಾಗೂ ನಿರ್ದೇಶಕ ಗುರುಪ್ರಸಾದ್ ಕಾಂಬಿನೇಶನ್‌ನಲ್ಲಿ ತಯಾರಾಗುತ್ತಿರುವ “ರಂಗನಾಯಕ’ಚಿತ್ರದ ಮುಹೂರ್ತ ಜನವರಿಮೂರನೇ ವಾರದಲ್ಲಿ ನಡೆಯಲಿದೆ. ಈ ಚಿತ್ರಕ್ಕಾಗಿ ಅರಮನೆ ಸೆಟ್ ಹಾಕಲು ಚಿತ್ರತಂಡ ತಯಾರಿ ನಡೆಸಿದ್ದು, ಅದರ ಪೂರ್ವತಯಾರಿ ಕೆಲಸ ಜೋರಾಗಿ ನಡೆಯುತ್ತಿದೆ. ಚಿತ್ರಕ್ಕೆ ಅನೂಪ್ ಸೀಳೀನ್ ಸಂಗೀತ ನಿರ್ದೇಶನವಿದ್ದು, ಹಾಡುಗಳ ಧ್ವನಿಮುದ್ರಣ ಕಾರ್ಯ ಆರಂಭವಾಗಿದೆ.
ದಾನಿಶ್ ಸೇಠ್ ಪ್ರೇಮ ಪುರಾಣ :
ನಟ, ನಿರೂಪಕ ಹಾಗೂ ಆರ್‌ಸಿಬಿ ಇನ್‌ಸೈಡರ್ ಆಗಿ ಖ್ಯಾತಿಯಾಗಿರುವ ದಾನಿಶ್ ಸೇs… ತಾವು ಹುಡುಗಿಯನ್ನು ಫೋಟೋ ಹಂಚಿಕೊಂಡಿದ್ದಾರೆ. ಅನ್ಯಾ ರಂಗಸ್ವಾಮಿ ಎನ್ನುವವರು ದಾನಿಶ್ ಅವರ ಪ್ರೇಯಸಿಯಾಗಿದ್ದು, ಆಕೆಜೊತೆಗಿರುವ ಫೋಟೋವೊಂದನ್ನು ಹಂಚಿಕೊಂಡಿರುವ ದಾನಿಶ್, “ಅವಳು ಯೆಸ್ ಅಂದಳು’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ಇಡೀ ಜೀವನವನ್ನು ನನ್ನ ಜೊತೆ ಕಳೆಯಲು ಬಯಸಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ. ದಾನಿಶ್ “ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್’, “ಫ್ರೆಂಚ್ ಬಿರಿಯಾನಿ’ ಚಿತ್ರಗಳಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.