Advertisement

ರೈತನಿಗೆ ಈ ವರ್ಷವೂ ಹುಳಿಯಾಯ್ತು ದ್ರಾಕ್ಷಿ! ಬೆಳೆಗಾರರ ಬೆನ್ನು ಬಿಡುತ್ತಿಲ್ಲ ಹವಾಮಾನ

10:07 AM Oct 20, 2020 | sudhir |

ತೆಲಸಂಗ: ದ್ರಾಕ್ಷಿ ಬೆಳೆ ಈ ಭಾಗದ ರೈತರಿಗೆ ಈ ವರ್ಷವೂ ಹುಳಿಯಾಗಿದೆ. ಹೌದು. ಲಾಕ್‌ಡೌನ್‌ ಸಂದರ್ಭದಲ್ಲಿ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದ ರೈತ ಪ್ರಸಕ್ತ ವರ್ಷವಾದ್ರೂ ಚೆನ್ನಾಗಿ ಹಣ್ಣು ಬೆಳೆದು ಕಳೆದ ವರ್ಷದ ನಷ್ಟ ಭರಿಸಿಕೊಳ್ಳಬಹುದೆಂಬ ನೀರಿಕ್ಷೆಯಲ್ಲಿದ್ದ. ಆದರೆ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ದ್ರಾಕ್ಷಿ ಬೆಳೆ ಹೂವು ಬಿಡುವ ಮುಂಚೆಯೇ ಎಲೆ ಉದರುವ ರೋಗಕ್ಕೆ ತುತ್ತಾಗಿ ಶೇ.60 ಬೆಳೆ ನಾಶವಾಗಿತ್ತು. ಸದ್ಯ ಮಳೆ ಬೆಂಬಿಡದೆ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಎಲ್ಲವೂ
ಸರ್ವನಾಶವಾಗಿದೆ. ಹೀಗೆ ಹೊಡತದ ಮೇಲೊಂದು ಹೊಡೆತ ಬಿದ್ದು ನಷ್ಟ ಅನುಭವಿಸುವಂತಾಗಿದೆ.

Advertisement

ಒಂದೆಡೆ ವಾತಾವರಣದ ಏರುಪೇರು, ಇನ್ನೊಂದೆಡೆ ಬೆನ್ನು ಬಿಡದೆ ಸುರಿದ ಮಳೆ. ಇವೆರಡರ ಮಧ್ಯೆ ಪ್ರಸಕ್ತ ವರ್ಷ ತೆಲಸಂಗ ಹೋಬಳಿಯಲ್ಲಿನ ದ್ರಾಕ್ಷಿ ಬೆಳೆ ಶೇ.90 ನಾಶವಾಗಿದೆ. ಸರಕಾರದಿಂದ ತಕ್ಷಣವೇ ಸರ್ವೇ ಕಾರ್ಯ ನಡೆಯಬೇಕು. ಎರಡು ವರ್ಷಗಳಿಂದ ಲಕ್ಷಾಂತರ ರೂ. ದ್ರಾಕ್ಷಿ ಗಿಡ ಬೆಳೆಸಲು ಸಾಲಗಾರನಾಗಿರುವ ರೈತನ ಕೈ ಹಿಡಿಯದಿದ್ದರೆ ಹೊಲ ಮನೆ ಮಾರಿಕೊಂಡು ಊರು ಬಿಡುವ ಪರಿಸ್ಥಿತಿ ಒಂದೇ ನಮಗಿರುವ ದಾರಿ ಎಂದು ಈ ಭಾಗದ ರೈತರು ಅಳಲು ತೋಡಿಕೊಂಡಿದ್ದಾರೆ.
ಕಳೆದ ವರ್ಷ ಬಾಧಿಸಿದ್ದ ಎಲೆ ಉದುರುವ ರೋಗ ಈಗಲೂ ಮುಂದುವರಿದಿದೆ. ಸೆಪ್ಟೆಂಬರ್‌ ಮಾಸಾಂತ್ಯ ಮತ್ತು ಅಕ್ಟೋಬರ್‌
ಎರಡನೇ ವಾರದವರೆಗೆ ನಡೆಯುವ ದ್ರಾಕ್ಷಿ ಬೆಳೆ ಚಾಟ್ನಿ ಸಮಯದಲ್ಲಿ ಹಳೆಯ ರೋಗ ಮತ್ತೆ ವಕ್ಕರಿಸಿದೆ. ಈ ಬೆಳೆ ರಕ್ಷಣೆಗೆ ಸತತ ಔಷಧಿ ಸಿಂಪಡಿಸಬೇಕಿದೆ. ಆದರೆ ಸೂರ್ಯನ ದರ್ಶನಕ್ಕೂ ಅವಕಾಶ ನೀಡದ ಮಳೆ ಸಿಂಪಡಿಸಿದ ಔಷ ಧ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಮಾಡುತ್ತಿದೆ. ಇದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರಕಾರ ಸೂಕ್ತ ಪರಿಹಾರ ವ್ಯವಸ್ಥೆ ಮಾಡಬೇಕೆಂದು ದ್ರಾಕ್ಷಿ ಬೆಳೆಗಾರರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಜಾನುವಾರ ಮೇಯಿಸಲು ಹೋದ ರೈತನ ಮೇಲೆ ಕರಡಿ ದಾಳಿ: ಗಂಭೀರ ಗಾಯ

ಬೆಂಬಿಡದೆ ಕಾಡುತ್ತಿದೆ ಸಮಸ್ಯೆ
ಹಲವು ವರ್ಷಗಳಿಂದ ಮಳೆ ಕೊರತೆ, ಅಕಾಲಿಕ ಮಳೆ, ಮೋಡ ಮುಸುಕಿದ ವಾತಾವರಣ, ಎಲೆ ಉದುರುವಿಕೆಯಿಂದ ಕಡ್ಡಿ ಹಣ್ಣಾಗದಿರುವುದು ಇವು ದ್ರಾಕ್ಷಿ ಬೆಳೆಗಾರರ ಸಮಸ್ಯೆಗೆ ಕಾರಣವಾಗಿವೆ. ಈ ಬಾರಿ ರಾಜ್ಯ ದ್ರಾಕ್ಷಿ ಬೆಳೆಗಾರರ ಪಾಲಿಗೆ
ಮರ್ಮಾಘಾತ ಎದುರಾಗಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ 31,000 ಹೆಕ್ಟರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಅದರಲ್ಲಿ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪೂರ, ಬಾಗಲಕೋಟೆ ಜಿಲ್ಲೆಯಲ್ಲೇ 80 ಬೆಳೆ ಬೆಳೆದರೆ ತೆಲಸಂಗ ಹೋಬಳಿಯಲ್ಲೇ 4500 ಹೆಕ್ಟೇರ್‌ ದ್ರಾಕ್ಷಿ ಬೆಳೆಯಲಾಗುತ್ತಿದೆ.

Advertisement

ಕಳೆದ ವರ್ಷ ಅಷ್ಟಿಷ್ಟು ಬೆಳೆ ಬಂದಿದ್ದು ಲಾಕ್‌ಡೌನ್‌ ಪರಿಣಾಮ ಮಾರಾಟವಾಗಲಿಲ್ಲ. ಅಲ್ಪ ಸ್ವಲ್ಪ ಇದ್ದ ಒಣ ದ್ರಾಕ್ಷಿ ಇನ್ನೂ ಮಾರಾಟವಾಗದೇ ಕೋಲ್ಡ್‌ ಸ್ಟೋರೇಜ್‌ನಲ್ಲಿಟ್ಟು ವರ್ಷವಾಯ್ತು ಸ್ಟೋರೇಜ್‌ ಬಾಡಿಗೆ ಕೊಡುತ್ತಿದ್ದೇವೆ. ಹೊರತು ಮಾರಾಟ ಆಗುತ್ತಿಲ್ಲ. ಪ್ರಸಕ್ತ ವರ್ಷ ಎಲೆ ಉದುರಿ ಕಡ್ಡಿಯೇ ಹಣ್ಣಾಗಲಿಲ್ಲ. ಸರಕಾರ ಮತ್ತು ವಿಮೆ ಕಂಪನಿಗಳು ಕೈ ಹಿಡಿಯದಿದ್ದರೆ ನಮ್ಮ
ಗೋಳು ಕೇಳಲಾಗದು.
- ರಾಮು ಬಳ್ಳೋಳ್ಳಿ, ದ್ರಾಕ್ಷಿ ಬೆಳೆಗಾರ, ತೆಲಸಂಗ.

ಪ್ರಸಕ್ತ ವರ್ಷ ಎಲೆ ಉದರುವಿಕೆ ರೋಗ ಕಾಣಿಸಿಕೊಂಡಿದ್ದು, ಇನ್ವರ್‌ ಸಿಟಿಯ ತಂಡ ಬಂದು ರಿಸರ್ಚ್‌ ಮಾಡಿದ್ದಾರೆ. ಅಲ್ಲದೆ ಎಲೆ ಉದುರುವಿಕೆಯಿಂದಾದ ಹಾನಿಗೆ ಸಂಬಂಧಿಸಿದಂತೆ ಈಗಾಗಲೇ ಸರ್ವೇ ಮಾಡಿ ಅರ್ದದಷ್ಟು ಗ್ರಾಮಗಳ ಆನ್ಲŒ„ನ್‌ ಎಂಟ್ರಿ ಕೆಲಸ ಮುಗಿದಿದೆ.
– ಅಕ್ಷಯಕುಮಾರ ಉಪಾಧ್ಯಾಯ. ತೋಟಗಾರಿಕೆ ಇಲಾಖೆ ಅಧಿಕಾರಿ, ತೆಲಸಂಗ.

– ಜಗದೀಶ ಖೊಬ್ರಿ

Advertisement

Udayavani is now on Telegram. Click here to join our channel and stay updated with the latest news.

Next