Advertisement

ಪತ್ರಕರ್ತರಿಗೆ ಅನುದಾನ ಮೀಸಲಿಡಂತೆ ಒತ್ತಾಯ

01:56 PM Mar 04, 2020 | Suhan S |

ಬೆಳಗಾವಿ: ಪತ್ರಕರ್ತರಿಗೆ ಆಪತ್ಕಾಲದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಮಹಾನಗರಪಾಲಿಕೆಯ 2020-21 ನೇ ಸಾಲಿನ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿ ಬೆಳಗಾವಿ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮಂಗಳವಾರ ಪಾಲಿಕೆ ಆಡಳಿತಾಧಿಕಾರಿ ಮತ್ತು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

ಪತ್ರಕರ್ತರು ತಮ್ಮ ದೈನಂದಿನ ಒತ್ತಡಗಳ ನಡುವೆಯೂ ಪತ್ರಿಕಾ ಧರ್ಮಕ್ಕೆ ಧಕ್ಕೆ ಬಾರದ ಹಾಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಪತ್ರಕರ್ತರ ಭವಿಷ್ಯ ಹಾಗೂ ಆಪತ್ಕಾಲೀನವಾಗಿ ಅನುಕೂಲವಾಗುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿ ಇರುವಂತೆ ಪತ್ರಕರ್ತರ ನಿಧಿಗೆ ಕನಿಷ್ಠ 30 ಲಕ್ಷ ರೂ.ಗಳನ್ನು ಈ ಬಾರಿಯ ಮಹಾನಗರ ಪಾಲಿಕೆಯ ಮುಂಗಡ ಪತ್ರದಲ್ಲಿ ಮೀಸಲಿರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಹಣವನ್ನು ಪತ್ರಕರ್ತರು ಅಪಘಾತಕ್ಕೀಡಾದಲ್ಲಿ, ಅಕಾಲಿಕವಾಗಿ ಅಥವಾ ವಯೋಸಹಜವಾಗಿ ಮರಣ ಹೊಂದಿದಲ್ಲಿ ಇಲ್ಲವೇ ಗಂಭೀರ ಸ್ವರೂಪದ ಅನಾರೋಗ್ಯಕ್ಕೆ ತುತ್ತಾದಲ್ಲಿ ಬಳಸಲು ಅನುಕೂಲವಾಗುವಂತೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಶೈಲ ಮಠದ, ಕೋಶಾಧ್ಯಕ್ಷ ರಾಯಣ್ಣ. ಆರ್‌.ಸಿ., ಕಾರ್ಯದರ್ಶಿ ಸುರೇಶ ನೇರ್ಲಿ, ಜಂಟಿ ಕಾರ್ಯದರ್ಶಿಗಳಾದ ಸುನೀಲ ಪಾಟೀಲ, ಜಗದೀಶ ವಿರಕ್ತಮಠ, ಖಜಾಂಚಿಗಳಾದ ಮಂಜುನಾಥ ಕೋಳಿಗುಡ್ಡ, ಭರಮಗೌಡ ಪಾಟೀಲ, ಸದಸ್ಯರಾದ ರಾಜಶೇಖರಯ್ನಾ ಹಿರೇಮಠ, ಪಾರೇಶ ಬೋಸಲೆ, ಇಮಾಮ ಹುಸೇನ್‌ ಗೂಡನವರ, ಅಶೋಕ ಮಗದುಮ್ಮ, ಲಗಮಣ್ಣ ಸಣ್ಣಲಚ್ಚಪ್ಪಗೋಳ, ಮಾಲತೇಶ ಮಟಿಗೇರ, ಅಮೃತ ಬಿರ್ಜೆ, ಆಶಿಸ್‌ಕೃಷ್ಣ ಪೆಂಡಸೆ, ಗಜಾನನ ಮುಚ್ಚಂಡಿಕರ, ಏಕನಾಥ ಅಗಸಿಮನಿ, ಸೋಮು, ಮೈಲಾರಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next